ಡಿ.22 ರಿಂದ 25ರವರಗೆ “ಅವರೆಕಾಯಿ ಮೇಳ”

ನಂದಿನಿ ಮೈಸೂರು

ಸಹಜ ಸಮೃದ್ಧ ಕೃಷಿ ಸಂಸ್ಥೆಯಿಂದ ಅವರೆಕಾಯಿ ಮೇಳ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಯೋಜನಾಧಿಕಾರಿ ಕೋಮಲ್ ಕುಮಾರ್ ತಿಳಿಸಿದರು.

ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಡಿ. 22,23,24-25ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಮೇಳಕ್ಕೆ ಮೈಸೂರು ನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ಉದ್ಘಾಟಿಸಲಿದ್ದಾರೆ.ಮೇಳದಲ್ಲಿ
ಸುಮಾರು 8 ಕ್ಕೂ ಹೆಚ್ಚು ಅವರೆಕಾಳು ತಳಿಗಳ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ತಳಿಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಾಗುವುದು.
ನೂರಕ್ಕೂ ಹೆಚ್ಚು ರೈತರು ಮೇಳದಲ್ಲಿ ಭಾಗಿಯಾಗಲಿದ್ದಾರೆ.20 ಮಳಿಗೆಗಳು ಸ್ಥಾಪಿಸಲಾಗಿದ್ದು 30ಕ್ಕೂ ಹೆಚ್ಚು ಬಗೆಯ ವಿವಿಧ ಅವರೆಕಾಳಿನ ಖಾಧ್ಯ ಲಭ್ಯವಿರುತ್ತದೆ.ರೈತರಿಂದ ನೇರವಾಗಿ ಅವರೆಕಾಯಿ ಗ್ರಾಹಕರ ಕೈ ಸೇರಲಿದೆ.ಮೇಳಕ್ಕೆ
ಉಚಿತ ಪ್ರವೇಶವಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತರಿಗೆ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಹೆಚ್ಚಿನ ಮಾಹಿತಿಗಾಗಿ

ಪ್ರತಾಪ್: 6360925540

ಕೋಮಲ್ ಕುಮಾರ್: 9880908608

ಮಹೇಂದ್ರ: 8884682584

Leave a Reply

Your email address will not be published. Required fields are marked *