ಪ್ರವಾಸಿಗರು, ಭಕ್ತರು ಚಾಮುಂಡೇಶ್ವರಿ ತಾಯಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಧರಿಸಿ ಬರುವಂತೆ ಸರ್ಕಾರ ಆಜ್ಞೆ ಹೊರಡಿಸಬೇಕು ಸರ್ವ ಅರ್ಜತೆ ಫೌಂಡೇಶನ್ ಒತ್ತಾಯ

ನಂದಿನಿ ಮೈಸೂರು

ಕರ್ನಾಟಕದ ಧಾರ್ಮಿಕ ಕ್ಷೇತ್ರದಲ್ಲಿ ಬಹು ಮುಖ್ಯವಾದ ಶ್ರೀ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರು ಸಾಂಪ್ರದಾಯಿಕ ಉಡುಗೆ ಧರಿಸಿ ಅಮ್ಮನವರ ದರ್ಶನಕ್ಕೆ ಬರುವಂತೆ ಆಜ್ಞೆ ಹೊರಡಿಸಬೇಕು ಎಂದು ಸರ್ವ ಅರ್ಜತೆ ಫೌಂಡೇಶನ್ ( sarva arjate foundation) ಸಂಸ್ಥಾಪಕಿ ಪದ್ಮ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಾಜ್ಯ, ದೇಶಗಳಿಂದ ಲಕ್ಷಾಂತರ ಜನ ಮೈಸೂರಿನ
ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಆಗಮಿಸುತ್ತಾರೆ.
ಪ್ರವಾಸಿಗಳು ಇಷ್ಟ ಬಂದಹಾಗೆ ಉಡುಗೆ ರಧರಿಸಿ ಬರುವುದು. ಪವಿತ್ರ ಕ್ಷೇತ್ರಕ್ಕೆ ಅಗೌರವ ಸಲ್ಲಿಸಿದಂತಾಗುತ್ತದೆ.
ಇಲ್ಲಿಗೆ ಭೇಟಿ ನೀಡುವ ಕೆಲವು ಭಕ್ತರ ಉಡುಗೆ, ತೊಡುಗೆಯಿಂದ ಭಕ್ತರಲ್ಲಿ ಮುಜುಗರ ಉಂಟಾಗುತ್ತಿದೆ. ತಾಯಿ ಚಾಮುಂಡೇಶ್ವರಿ
ದರ್ಶನ ಮಾಡಲು ಬರುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲೇ ಬರಬೇಕು ಅಂದರೇ ಮಹಿಳೆಯರು ಸೀರೆ,ಶಾಲೂ ಇರುವ ಚೂಡಿದಾರ ಇಂತಹ ಮೈತುಂಬ ಇರುವ ಬಟ್ಟೆ ತೊಟ್ಟು ಬರಬೇಕು.ಮಹಿಳೆಯರಿಗಲ್ಲದೇ ಪುರುಷರು ಪಂಚೆ ಶರ್ಟ್ ಧರಿಸಿ ಆಗಮಿಸುವಂತೆ ಸರ್ಕಾರ ಆಜ್ಞೆ ಹೊರಡಿಸಬೇಕು.ಮಂಗಳವಾರ ಹಾಗೂ ಶುಕ್ರವಾರದ ದಿನಗಳಂದು ಪ್ರವಾಸಿಗರಿಗೆ,ಭಕ್ತಾಧಿಗಳಿಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ಚಾಮುಂಡೇಶ್ವರಿ ತಾಯಿ ದರ್ಶನ ಪಡೆಯುವಂತೆ ಜಾಗೃತಿ ಮೂಡಿಸಲಿದ್ದೇವೆ ಎಂದರು‌.

ಇದೇ ಸಂದರ್ಭದಲ್ಲಿ ಸುಮಿತ್ರಾ ರಮೇಶ್,ಪದ್ಮ,ನಾಗಭೂಷಣ್,ಚೆಕ್ ಪಾಯಿಂಟ್ ಜನಾರ್ಧನ್ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *