ನಂದಿನಿ ಮೈಸೂರು
ಸಂಕೀರ್ಣ ಮೆದುಳು ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ಕಟ್ಟುಕಥೆಗಳ ಬಗ್ಗೆ ವಿವಾರಣೆ
ಮೈಸೂರು: ಅಕ್ಟೋಬರ್ 2022: ಮೈಸೂರಿನ ಮಣಿಪಾಲ್ ಆಸ್ಪತ್ರೆಯ ನ್ಯೂರೋ ಸರ್ಜರಿ ವಿಭಾಗದ ಹಿರಿಯ ತಪಾಸಕರಾದ ಡಾ. ಮದ್ ಅಹ್ಮದ್ ಎ ಆರ್ ಅವರು, ಸಂಕೀರ್ಣವಾದ ಮೆದುಳು ಮತ್ತು ಬೆನ್ನುಮೂಳೆ ಶಸ್ತ್ರಚಿಕಿತ್ಸೆಯ ಯಶಸ್ಸು ಮತ್ತು ಅದರ ಸುತ್ತ ಇರುವ ಕೆಲವೊಂದು ತಪ್ಪು ಅಭಿಪ್ರಾಯಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ಸಮಾವೇಶದ ಮುಖ್ಯ ಉದ್ದೇಶವೆಂದರೆ, ಬೆನ್ನುಮೂಳೆ ಮತ್ತು ಮೆದುಳಿನ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯ ಅಪಾಯಗಳು ಒಬ್ಬ ರೋಗಿಯನ್ನು ಶಾಶ್ವತವಾಗಿ ಅಸಮರ್ಥನಾಗುವಂತೆ ಮಾಡಬಲ್ಲುದು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಒಂದು ಪರಿಣಾಮಕಾರಿ ಮಾಹಿತಿಯನ್ನು ಒದಗಿಸುವುದಾಗಿದೆ. ಆದರೆ ಈ ರೋಗಗಳನ್ನು ಮುಂಚಿತವಾಗಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ/ಶಸ್ತ್ರಚಿಕಿತ್ಸೆ ನೀಡಿದಲ್ಲಿ ಉತ್ತಮ ಫಲಿತಾಂಶ ನೀಡಬಹುದು ಮತ್ತು ಅದರ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ನಿವಾರಿಸಬಹುದಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಡಾ. ಮತ್ತೂದ್ ಅಹ್ಮದ್ ಈ ರೀತಿ ಹೇಳಿದ್ದಾರೆ. “ಸಾಮಾನ್ಯವಾಗಿ, ಪ್ರತಿಯೊಂದು ತಲೆನೋವು ಬೈನ್ ಟ್ಯೂಮರ್‌ನ ಚಿಹ್ನೆಯಲ್ಲ. ಹೆಚ್ಚಿನ ತಲೆನೋವುಗಳು ವ್ಯಕ್ತಿಯನ್ನು ದುರ್ಬಲಗೊಳಿಸುವ ಸಂದರ್ಭಗಳಾಗಿದ್ದು, ಇವುಗಳು ಸೂಕ್ತ ಔಷಧಿಯಿಂದ ಸರಿಯಾಗಿ ವಾಸಿಯಾಗಬಲ್ಲವು. ಕೇವಲ ಕೆಲವೇ ಸಂದರ್ಭದಲ್ಲಿನ ತಲೆನೋವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಅಂದರೆ ವಿಶೇಷವಾಗಿ ತೀವ್ರ ಸ್ವರೂಪದ ತಲೆನೋವುಗಳು ಹಠಾತ್ತನೇ ಉಂಟಾಗುವುದು, ತಲೆನೋವು ಹೆಚ್ಚುತ್ತಾ ಹೋಗುವುದು ಮತ್ತು ತೀವ್ರ ಸ್ವರೂಪ ತಾಳುವುದು ಅಥವಾ ಕೆಲವೊಮ್ಮೆ ವಾಂತಿಯೊಂದಿಗೆ ತಲೆನೋವು ಕಾಣಿಸಿಕೊಳ್ಳುವುದು, ಮಂದ ದೃಷ್ಟಿ, ಎರಡೂ ಕಣ್ಣುಗಳಲ್ಲಿ ಮಂದದೃಷ್ಟಿ ಕಾಣಿಸಿಕೊಳ್ಳುವುದು, ಕೈಕಾಲುಗಳಲ್ಲಿ ದೌರ್ಬಲ್ಯ ಕಾಣಿಸಿಕೊಳ್ಳುವುದು ಮತ್ತು ತೊದಲು (ಅಸ್ಪಷ್ಟ) ಮಾತಿನ ಸಂದರ್ಭದಲ್ಲಿ. ಒಂದು ವೇಳೆ, ತಲೆನೋವಿನೊಂದಿಗೆ ಈ ಎಲ್ಲಾ ಚಿಹ್ನೆಗಳು ಕಂಡುಬಂದಲ್ಲಿ ಅಂತಹ ವ್ಯಕ್ತಿಯು ತಕ್ಷಣವೇ ರೋಗ ತಪಾಸಣೆಗಾಗಿ ತಜ್ಞರಲ್ಲಿಗೆ ಭೇಟಿ ನೀಡಬೇಕಾಗುತ್ತದೆ. ಅದೇ ರೀತಿ ಒಂದು ವೇಳೆ, ವಿಶ್ರಾಂತಿ ಪಡೆದಾಗ ಮತ್ತು ಸೂಕ್ತ ಔಷಧಿಯ ಸಹಾಯದಿಂದಲೂ ಬೆನ್ನುನೋವು ಸುಧಾರಿಸದಿದ್ದಲ್ಲಿ ಆಗ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಎಷ್ಟು ಬೇಗ ರೋಗ ಪತ್ತೆಯಾಗುತ್ತದೆಯೋ ಅಷ್ಟು ಹೆಚ್ಚು ಶಸ್ತ್ರಚಿಕಿತ್ಸೆಯಲ್ಲಿ ಯಶಸ್ಸನ್ನು ಗಳಿಸಬಹುದು ಮತ್ತು ಬದುಕುವ ಸಾಧ್ಯತೆಯು ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ಎಲ್ಲಾ ಪ್ರಕ್ರಿಯೆಗಳ ಯಶಸ್ಸು, ಆರಂಭಿಕವಾಗಿಯೇ ರೋಗದ ಪತ್ತೆ, ಸೂಕ್ತ ತಪಾಸಣೆ, ಮತ್ತು ತಕ್ಷಣದ ಕ್ರಿಯೆ ಶಸ್ತ್ರಚಿಕಿತ್ಸೆಯ ಯಶಸ್ಸಿನ ಪ್ರಮಾಣದ ಮೇಲೆ 95% ಕ್ಕಿಂತಲೂ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ, ಸುಧಾರಿತ ಆರೋಗ್ಯಕ್ಕಾಗಿ, ಜನರು ಆರಂಭದಲ್ಲಿಯೇ ವೈದ್ಯಕೀಯ ಸಮಾಲೋಚನೆಯನ್ನು ಪಡೆಯಲು ಹಿಂದೇಟು ಹಾಕಬಾರದು, ಹಾಗೆಯೇ, ಈ ಹಿಂದೆ ಹೃದಯಸಂಬಂಧಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತಿತ್ತು ಅಥವಾ ಅದೊಂದು ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯೆಂದು ಪರಿಗಣಿಸಲ್ಪಟ್ಟಿತ್ತು, ಆದರೆ ಇಂದು ಸಮಾಜದ ದೃಷ್ಟಿಕೋನವು ತಲೆನೋವು, ಬೆನ್ನುನೋವು ಮತ್ತು ಇತರೆ ಆರೋಗ್ಯ ಸಂಬಂಧಿತ ಸಮಸ್ಯೆಗಳು ಕೂಡ ಅದರಂತೆ ಗಂಭೀರ ಸ್ವರೂಪದ್ದಾಗಿವೆ ಎಂಬುದಾಗಿದೆ. ಇದು ಕೇವಲ ಯಾವುದೇ ರೋಗದ ಅಪಾಯದ ಬಗ್ಗೆ ವೈದ್ಯಕೀಯ ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳಲು
ಸಹಾಯವಾಗುವುದಲ್ಲದೇ, ರೋಗಿಗೆ ಅತೀ ಬೇಗನೆ ರೋಗ ಪತ್ತೆ ಹಚ್ಚಿ, ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗುತ್ತದೆ.