ನಂದಿನಿ ಮೈಸೂರು
ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಜಿಟಿ ದೇವೇಗೌಡರಿಗೆ ಮತ್ತೊಮ್ಮೆ ಟಿಕೇಟ್ ನೀಡುವುದಾಗಿ ಕುಮಾರಸ್ವಾಮಿ ತಿಳಿಸಿದ್ದು ಟಿಕೇಟ್ ಆಕಾಂಕ್ಷಿಗಳು,ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ತುರ್ತು ಸಭೆ ನಡೆಸಿದರು.
ಮೈಸೂರಿನ ಬೆಳವಾಡಿ ಖಾಸಗೀ ರೆಸಾರ್ಟ್ ನಲ್ಲಿ ಹಿರಿಯರ ಜೊತೆ ಸಭೆ ಸೇರಿ ಜೆಡಿಎಸ್ ಪಕ್ಷದಲ್ಲಾಗುತ್ತಿರುವ ಬೆಳವಣಿಗೆ ,ಬದಲಾವಣೆ ಕುರಿತು ಚರ್ಚೆಸಿ ಎಲ್ಲರಿಂದ ಅಭಿಪ್ರಾಯ ತಿಳಿದುಕೊಂಡರು.
ಮಾವಿನ ಹಳ್ಳಿ ಸಿದ್ದೇಗೌಡ,ಬೆಳವಾಡಿ ಶಿವಮೂರ್ತಿ,ಬೀರಿಹುಂಡಿ ಬಸವಣ್ಣ,ಮಾದೇಗೌಡ ಮಾತನಾಡಿ ಕುಮಾರಸ್ವಾಮಿ ರವರು ಮುಂಬರುವ ವಿಧಾನ ಸಭಾ ಚುನಾವಣೆಗೆ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಂಘಟನೆ ಮಾಡಿ ನಿಮ್ಮಲ್ಲಿ ಒಬ್ಬರಿಗೆ
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಟಿಕೇಟ್ ನೀಡುವುದಾಗಿ ಭರವಸೆ ನೀಡಿದ್ದರು.
ಇಂದು ಕುಮಾರಸ್ವಾಮಿ ಭೇಟಿಯಾದ ಸಂದರ್ಭದಲ್ಲಿ ಪಕ್ಷ ವಿರೋಧಿ ಜಿಟಿ ದೇವೇಗೌಡರಿಗೆ ಟಿಕೇಟ್ ನೀಡುವುದಾಗಿ ಹೆಚ್ಡಿಕೆ ತಿಳಿಸಿದ್ದಾರೆ.ಇದಕ್ಕೆ ನಮ್ಮ ವಿರೋಧವಿದೆ.ಹಳ್ಳಿ ಹಳ್ಳಿಯಲ್ಲಿ ಪಕ್ಷ ಸಂಘಟನೆ ಮಾಡಿದ್ದೇವೆ.ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದೇವೆ.ಜಿಟಿ ದೇವೇಗೌಡರು ಉಪಚುನಾವಣೆ,ಎಂಎಲ್ ಸಿ,ಮೇಯರ್ ,ಒಕ್ಕೂಟ
ಚುನಾವಣೆಯಲ್ಲಿ ಪಕ್ಷದಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್, ಬಿಜೆಪಿಗೆ ಮತ ಹಾಕುವಂತೆ ಪ್ರಚಾರ ಮಾಡಿದ್ದಾರೆ.ಪಕ್ಷಕ್ಕೆ ದ್ರೋಹ ಮಾಡಿದ್ದಾರೆ.ಅಂತಹ
ಜಿಟಿಡಿಗೆ ಟಿಕೇಟ್ ಕೊಡುತ್ತಿರುವುದು ಸರಿಯಲ್ಲ .ನಾವು ಪಕ್ಷ ವಿರೋಧಿಗಳಲ್ಲ ,ವ್ಯಕ್ತಿಯನ್ನು ವಿರೋಧಿಸುತ್ತಿದ್ದೇವೆ.ಇವರ ವಿರುದ್ದ ಹೋರಾಟ ಮುಂದುವರೆಯಲಿದೆ
ಎಂದು ಬೀರಿಹುಂಡಿ ಬಸವಣ್ಣ ಸೇರಿದಂತೆ ಆಕಾಂಕ್ಷಿಗಳು ಬೇಸರ ವ್ಯಕ್ತಪಡಿಸಿದ್ದರು.
ಇದೇ ಸಂದರ್ಭದಲ್ಲಿ ಹುಣಸೂರು ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿ
ದೇವರಹಳ್ಳಿ ಸೋಮಶೇಖರ್, ಕೆಂಪನಾಯಕ,ದೇವರಾಜ್ ಒಡೆಯರ್,ರಾಜೇ ಗೌಡ,ರಮ್ಮನಹಳ್ಳಿ ಶಿವು,ಸೋಮಣ್ಣ,ಅರಸೀಕೆರೆ ಮುತ್ತುರಾಜು,ಟಿ ಕಾಟೂರು ಪುಟ್ಟಸ್ವಾಮಿ,ಬಣ್ಣದಪುರ ಬಸವರಾಜು,ಬಿಳಿಕೆರೆ ರಮೇಶ್ ಸೇರಿದಂತೆ ಕಾರ್ಯಕರ್ತರು ಭಾಗಿಯಾಗಿದ್ದರು.
ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು