ನಂದಿನಿ ಮೈಸೂರು
ಮಣಿಪಾಲ ಆಸ್ಪತ್ರೆಯಲ್ಲಿ ವಾರ ಪೂರ್ತಿ ಸ್ತನ್ಯಪಾನ ಬಗ್ಗೆ ಜಾಗೃತಿ
07 ಆಗಸ್ಟ್ 2023:ಮೈಸೂರು: ಪ್ರತಿ ವರ್ಷ ಆಗಸ್ಟ್ ತಿಂಗಳ ಮೊದಲ ವಾರವನ್ನು ಪ್ರಪಂಚದಾದ್ಯಂತ ‘ಸ್ತನ್ಯಪಾನ ಸಪ್ತಾಹ’ ಎಂದು ಆಚರಿಸಲಾಗುತ್ತದೆ. 07ನೇ ಆಗಸ್ಟ್ 2023 ರಂದು ಮೈಸೂರಿನ ಮಣಿಪಾಲ್ ಆಸ್ಪತ್ರೆಯು ಒಂದು ವಾರ ಪೂರ್ತಿ ನಡೆಯುವ ಸ್ತನ್ಯಪಾನ ಜಾಗೃತಿ ಅಭಿಯಾನದ ಸ್ಮರಣಾರ್ಥ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲ್ ಆಸ್ಪತ್ರೆ ಮೈಸೂರಿನ ಐವರು ಪ್ರಖ್ಯಾತ ಮತ್ತು ಪರಿಣಿತ ಭಾಷಣಕಾರರು ಮಾತನಾಡಿದರು ಮತ್ತು ಅವರಲ್ಲಿ ಡಾ. ಅಮೂಲ್ಯ ಕೆ ಜಿ, ಕನ್ಸಲ್ಟೆಂಟ್ – ಪ್ರಸೂತಿ ಮತ್ತು ಸ್ತ್ರೀರೋಗತಜ್ಞ (ಒಬ್ಸ್ಟೆಟ್ರಿಕ್ಸ್ ಮತ್ತು ಗೈನಕೊಲೋಜಿ), ಡಾ. ಶಾಹೀನ್ ಅಖ್ತರ್, ಕನ್ಸಲ್ಟೆಂಟ್ – ಒಬ್ಸ್ಟೆಟ್ರಿಕ್ಸ್ ಮತ್ತು ಗೈನಕೊಲೋಜಿ, ಶ್ರೀಮತಿ. ವಿನುತ, ಎದೆಹಾಲುಣಿಸುವ ಸಲಹೆಗಾತಿ (ಲಕ್ಟೇಷನ್ ಕೌನ್ಸೆಲರ್), ಶ್ರೀ. ಇಸ್ಮಾಯಿಲ್ ಕೆ, ಸೀನಿಯರ್ ಫಿಸಿಯೋಥೆರಪಿಸ್ಟ್ ಮತ್ತು ಶ್ರೀಮತಿ ಕಾವ್ಯ, ಡಯೆಟೀಷಿಯನ್ ಇವರು ಹಾಜರಿದ್ದರು.
ಭಾಷಣಕಾರರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಸ್ತನ್ಯಪಾನದ ಬಗ್ಗೆ ಕೆಲವು ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು. ಅವರು ಸ್ತನ್ಯಪಾನದ ಪ್ರಾಮುಖ್ಯತೆ ಮತ್ತು ಅದರಿಂದ ಮಗುವಿಗೆ ಮತ್ತು ತಾಯಿಗೆ ಆಗುವ ಆರೋಗ್ಯ ಪ್ರಯೋಜನಗಳ ಕುರಿತು ಮಾತನಾಡಿದರು, ಸ್ತನ್ಯಪಾನದ ಬಗ್ಗೆ ಕೆಲವು ಊಹಾಪೋಹ ಮತ್ತು ತಪ್ಪು ಕಲ್ಪನೆಗಳನ್ನು ಸ್ಪಷ್ಟಪಡಿಸಿದರು ಮತ್ತು ಆಧುನಿಕ ಕಾಲದ ಹೊಸ ತಾಯಂದಿರಿಗೆ ಹಾಲುಣಿಸುವ ಬಗ್ಗೆ ಪ್ರಸ್ತುತ ಮತ್ತು ಬದಲಾಗುತ್ತಿರುವ ಪ್ರವೃತ್ತಿಗಳ ಕುರಿತು ಕೆಲವು ಮೌಲ್ಯಯುತ ಒಳನೋಟಗಳನ್ನು ಹಂಚಿಕೊಂಡರು. ಈ ವರ್ಷದ ಸ್ತನ್ಯಪಾನ ಸಪ್ತಾಹದ ವಿಷಯವಾದ ‘ಸ್ತನ್ಯಪಾನ ಮತ್ತು ಕೆಲಸ, ಎರಡನ್ನೂ ಮಾಡೋಣ’ ಇದರ ಬಗ್ಗೆ ಮಾತನಾಡುತ್ತಾ, ಭಾಷಣಕಾರರು ಸ್ತನ್ಯಪಾನದ ವಿಷಯದಲ್ಲಿ ಕೆಲಸ ಮಾಡುವ ತಾಯಂದಿರು ಎದುರಿಸುತ್ತಿರುವ ಸವಾಲುಗಳು ಮತ್ತು ಅಂತಹ ಸವಾಲುಗಳನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಹೇಳಿದರು. ಇದಲ್ಲದೆ, ಅವರು ಸ್ತನ್ಯಪಾನದ ಬಗ್ಗೆ ಇರುವ ಕೆಲವು ಪ್ರಮುಖ ಊಹಾಪೋಹಗಳು ಮತ್ತು ತಪ್ಪುಗ್ರಹಿಕೆಗಳ ಬಗ್ಗೆ ಮಾತನಾಡಿದರು, ಮತ್ತು ಸಾಂಸ್ಕೃತಿಕ ಮತ್ತು ಸಾಮಾಜಿಕ ನಿಷೇಧಗಳನ್ನು ತೊಡೆದುಹಾಕುವ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರು ತಮ್ಮ ಶಿಶುಗಳಿಗೆ ಹಾಲುಣಿಸಲು ಪ್ರೋತ್ಸಾಹಿಸುವ ಅಗತ್ಯತೆಯ ಬಗ್ಗೆ ಮಾತನಾಡಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಒಬ್ಸ್ಟೆಟ್ರಿಕ್ಸ್ ಮತ್ತು ಗೈನಕೊಲೋಜಿ ಕನ್ಸಲ್ಟೆಂಟ್ ಡಾ.ಶಾಹೀನ್ ಅಖ್ತರ್, “ಸ್ತನ್ಯಪಾನವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ನೀಡಿ ತನ್ನ ಮಗುವನ್ನು ಪೋಷಿಸಲು ಪ್ರತಿಯೊಬ್ಬ ತಾಯಿಗೆ ನೀಡಿದ ಪ್ರಕೃತಿಯ ಕೊಡುಗೆಯಾಗಿದೆ. ಸಾಮಾನ್ಯವಾಗಿ, ಸ್ತನ್ಯಪಾನವು ಬಹುತೇಕ ಪ್ರತಿಯೊಬ್ಬ ತಾಯಿಗೆ ಸ್ವಾಭಾವಿಕವಾಗಿ ಬರುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ಹಲವಾರು ಅಂಶಗಳಿಂದಾಗಿ, ಈಗ ಅದನ್ನು ‘ಕಲಿಸಬೇಕಾದ’ ಅಗತ್ಯತೆ ಹೆಚ್ಚಾಗಿದೆ. ಅನೇಕ ತಾಯಂದಿರು ಈಗ ಎದೆಹಾಲಿನ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಇದರ ಬಗ್ಗೆ ತಾಯಿಯು ಸರಿಯಾದ ಸಮಯದಲ್ಲಿ ಮಾರ್ಗದರ್ಶನವನ್ನು ಪಡೆದರೆ ಅದನ್ನು ಸುಲಭವಾಗಿ ಗುರುತಿಸಬಹುದು ಮತ್ತು ಚಿಕಿತ್ಸೆ ನೀಡಬಹುದು.
ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಡಾ. ಅಮೂಲ್ಯ ಕೆ ಜಿ, ಕನ್ಸಲ್ಟೆಂಟ್ – ಪ್ರಸೂತಿ ಮತ್ತು ಸ್ತ್ರೀರೋಗತಜ್ಞ (ಒಬ್ಸ್ಟೆಟ್ರಿಕ್ಸ್ ಮತ್ತು ಗೈನಕೊಲೋಜಿ) ಮಾತನಾಡಿ, ಹಾಲುಣಿಸುವ ಶಿಕ್ಷಣ ಅಥವಾ ಸಮಾಲೋಚನೆಯು ‘ಎಲ್ಲರಿಗೂ ಒಂದೇ ರೀತಿಯಾಗಿ ಹೇಳಬಲ್ಲ’ ತಂತ್ರವಲ್ಲ. ಪ್ರತಿಯೊಬ್ಬ ತಾಯಿಯು ವಿಭಿನ್ನವಾಗಿರುತ್ತಾರೆ, ಮತ್ತು ಅವರ ಅಗತ್ಯಗಳು ಮತ್ತು ಕಾಳಜಿಗಳು ಸಹ ವಿಭಿನ್ನವಾಗಿವೆ. ಹಾಲುಣಿಸುವಿಕೆಯ ಬಗ್ಗೆ ಇರುವ ಕಾಳಜಿಗಳು ಮತ್ತು ಸಮಸ್ಯೆಗಳನ್ನು ಪ್ರಸವಪೂರ್ವವಾಗಿ ಪರಿಹರಿಸುವುದು (ಹೆರಿಗೆಯ ಮೊದಲು) ಮುಖ್ಯ. ಮಹಿಳೆ/ಮಹಿಳೆಯರು ಗರ್ಭಿಣಿಯಾಗಿರುವಾಗ ಹಾಲುಣಿಸುವ ಸಮಸ್ಯೆಗಳನ್ನು ಗುರುತಿಸುವುದು ಮತ್ತು ಪರಿಹರಿಸುವುದು ಸ್ತನ-ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ, ಇಂತಹ ಸಮಸ್ಯೆಗಳು ಶಿಶುವಿನ ಎದೆಹಾಲು ಮತ್ತು ಅದರ ಹೀರುವಿಕೆಯ ಮೇಲೆ ಪರಿಣಾಮ ಬೀರಬಹುದು, ಕೆಲಸ ಮಾಡುವ ಮಹಿಳೆಯರಿಗೆ ಒತ್ತಡವನ್ನು ನಿರ್ವಹಿಸಲು ಸಲಹೆ ನೀಡುವುದು, ವ್ಯಕ್ತಪಡಿಸುವ ಮತ್ತು ಎದೆಹಾಲನ್ನು ಸಂಗ್ರಹಿಸುವ ಬಗ್ಗೆ ಅವರಿಗೆ ಶಿಕ್ಷಣ ನೀಡುವುದು, ಇತ್ಯಾದಿಗಳು ತಾಯಂದಿರು ಎದೆಹಾಲುಣಿಸಲು ಎಲ್ಲ ರೀತಿಯಿಂದ ಸಿದ್ಧರಾಗಲು ಸಹಾಯ ಮಾಡುತ್ತದೆ.”
ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಶ್ರೀಮತಿ. ವಿನುತ, ಎದೆಹಾಲುಣಿಸುವ ಸಲಹೆಗಾತಿ (ಲಕ್ಟೇಷನ್ ಕೌನ್ಸೆಲರ್) ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರಿಗೆ ಮತ್ತು ಅವರ ಕುಟುಂಬಗಳಿಗೆ ಸ್ತನ್ಯಪಾನದ ಬಗ್ಗೆ ಶಿಕ್ಷಣ ನೀಡುವಲ್ಲಿ ಲಕ್ಟೇಷನ್ ಕೌನ್ಸೆಲಿಂಗ್ ಪಾತ್ರವನ್ನು ಮತ್ತು ಸ್ತನ್ಯಪಾನದ ಬಗ್ಗೆ ಮಹಿಳೆಯ ನಿರ್ಧಾರ ಅಥವಾ ಗ್ರಹಿಕೆಯ ಮೇಲೆ ಪರಿಣಾಮ ಬೀರುವ ಹಲವಾರು ಊಹಾಪೋಹಗಳು ಮತ್ತು ಸಾಂಸ್ಕೃತಿಕ ನಂಬಿಕೆಗಳನ್ನು ಪರಿಹರಿಸುವ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದರು. ಇಂತಹ ತಪ್ಪು ಕಲ್ಪನೆಗಳಿಂದ ಹೊರಬರಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.
ಈ ವರ್ಷದ ಸ್ತನ್ಯಪಾನ ಸಪ್ತಾಹದ ವಿಷಯವಾದ, ‘ನಾವು ಸ್ತನ್ಯಪಾನ ಮತ್ತು ಕೆಲಸ, ಎರಡನ್ನೂ ಮಾಡೋಣ.’ ಇದರ ಬಗ್ಗೆ ಮಾತನಾಡುತ್ತಾ ವಿನುತಾ ಅವರು ಕೆಲಸ ಮಾಡುವ ಸ್ಥಳದಲ್ಲಿ ಸ್ತನ್ಯಪಾನವನ್ನು ಸುಗಮಗೊಳಿಸಲು ಮತ್ತು ಉತ್ತೇಜಿಸಲು ಭಾರತ ಸರ್ಕಾರದ ಸ್ತನ್ಯಪಾನ ಮತ್ತು ಹೆರಿಗೆ ಕಾನೂನುಗಳ ಬಗ್ಗೆ ವಿಶೇಷವಾಗಿ ಮಾತನಾಡಿದರು. ಸ್ತನ್ಯಪಾನ ಮತ್ತು ಹೆರಿಗೆ ಕಾನೂನುಗಳಿಗೆ ಬದ್ಧವಾಗಿರುವುದು ಮತ್ತು ಎದೆಹಾಲುಣಿಸುವ ತಾಯಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳು ಅಥವಾ ಸೌಲಭ್ಯಗಳನ್ನು ಒದಗಿಸುವುದು ಕೆಲಸ ಮಾಡುವ ಸ್ಥಳದ ಆಡಳಿತದ ಜವಾಬ್ದಾರಿಯಾಗಿದೆ ಎಂದು ಅವರು ಆಗ್ರಹಿಸಿದರು. ಕೆಲಸ ಮಾಡುವ ಸ್ಥಳದಲ್ಲಿ ಕಾನೂನಿನಲ್ಲಿ ಉಲ್ಲೇಖಿಸಲಾದ ಯಾವುದೇ ಸೌಲಭ್ಯದ ಕೊರತೆಯಿದ್ದರೆ, ಹಾಲುಣಿಸುವ ತಾಯಿಯು ಸಂಬಂಧಪಟ್ಟ ಅಧಿಕಾರಿಯೊಂದಿಗೆ ಮಾತನಾಡಬೇಕು ಮತ್ತು ತನ್ನ ಹಕ್ಕುಗಳ ಬಗ್ಗೆ ಅರಿತುಕೊಂಡು ಯಾವುದೇ ನಿರ್ಬಂಧಗಳಿಲ್ಲದೆ ಕೆಲಸದ ಸ್ಥಳದಲ್ಲಿ ಮಗುವಿಗೆ ಹಾಲುಣಿಸಬೇಕು.
ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಹಿರಿಯ ಫಿಸಿಯೋಥೆರಪಿಸ್ಟ್ ಶ್ರೀ ಇಸ್ಮಾಯಿಲ್ ಕೆ ಅವರು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಮಹಿಳೆಯರು ಅನುಭವಿಸುವ ದೈಹಿಕ ಬದಲಾವಣೆಗಳ ಬಗ್ಗೆ ಮಾತನಾಡಿದರು ಮತ್ತು ಹೆರಿಗೆಯ ನಂತರ ಮತ್ತು ಎದೆಹಾಲುಣಿಸುವ ಸಮಯದಲ್ಲಿ ಮಹಿಳೆಯರು ತಮ್ಮ ದೇಹದ ರೂಪವಿಜ್ಞಾನ, ಸ್ನಾಯು ದೌರ್ಬಲ್ಯ ಅಥವಾ ದೇಹದಲ್ಲಿ ಉಂಟಾಗುವ ನೋವಿನ ಸಮಸ್ಯೆಗಳನ್ನು ನಿಭಾಯಿಸಲು ಅವರು ಹೇಗೆ ಸಹಾಯ ಮಾಡುತ್ತಾರೆ ಎಂದು ಹೇಳಿದರು. ಸರಿಯಾದ ಫಿಸಿಯೋಥೆರಪಿಯೊಂದಿಗೆ, ಹಾಲುಣಿಸುವ ಸಮಯದಲ್ಲಿ ತಾಯಂದಿರಿಗೆ ದೇಹದ ಭಂಗಿ ಮತ್ತು ದಕ್ಷತಾಶಾಸ್ತ್ರದ ಬಗ್ಗೆ ಶಿಕ್ಷಣ ನೀಡುತ್ತೇವೆ, ಮಹಿಳೆಯರು ಫಿಟ್ ಆಗಿರಲು ಸಹಾಯ ಮಾಡುತ್ತೇವೆ ಮತ್ತು ಗರ್ಭಾವಸ್ಥೆಯಲ್ಲಿ ಮತ್ತು ಮಗುವಿನ ಹೆರಿಗೆಯ ಸಮಯದಲ್ಲಿ ದುರ್ಬಲಗೊಂಡಿರುವ ತಮ್ಮ ಸ್ನಾಯುವಿನ ಶಕ್ತಿಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತೇವೆ ಮತ್ತು ಹೆರಿಗೆಯ ನಂತರ ವಾಪಾಸ್ ಫಿಟ್‌ನೆಸ್‌ಗೆ ಮರಳಲು ಸರಿಯಾದ ಮಾರ್ಗದರ್ಶನ ನೀಡುತ್ತೇವೆ ಎಂದು ಶ್ರೀ ಇಸ್ಮಾಯಿಲ್ ಹೇಳಿದರು.
ಮೈಸೂರು, ಮಣಿಪಾಲ್ ಆಸ್ಪತ್ರೆಯ ಹಿರಿಯ ಆಹಾರ ತಜ್ಞೆ ಶ್ರೀಮತಿ ಕಾವ್ಯ ಅವರು ಹಾಲುಣಿಸುವ ತಾಯಿಗೆ ಸರಿಯಾದ ಆಹಾರ ಮತ್ತು ಪೋಷಣೆಯ ಮಹತ್ವವನ್ನು ಒತ್ತಿ ಹೇಳುತ್ತಾ “ಹಾಲುಣಿಸುವ ತಾಯಿಗೆ ಸರಿಯಾದ ಪೋಷಣೆ ಅತ್ಯಂತ ಮುಖ್ಯವಾಗಿದೆ. ಹಾಲುಣಿಸುವ ಸಮಯದಲ್ಲಿ ಕೆಲವು ಆಹಾರಗಳನ್ನು ತಿನ್ನಬಾರದು ಎಂಬ ಹಲವಾರು ಸಾಂಸ್ಕೃತಿಕ ಮತ್ತು ಹಳೆಯ ಕಾಲದ ನಂಬಿಕೆಗಳಿವೆ. ಇವುಗಳನ್ನು ಪಾಲಿಸುವುದು ಹಾಲುಣಿಸುವ ತಾಯಿಯ ಪೋಷಣೆಗೆ ಹಾನಿಕಾರಕವಾಗಬಹುದು. ಹಾಲುಣಿಸುವ ತಾಯಿಯು ಗಂಭೀರ ಪೌಷ್ಟಿಕಾಂಶದ ಕೊರತೆಯನ್ನು ಅನುಭವಿಸಬಹುದು. ಹೆರಿಗೆಯ ನಂತರದ ಮೊದಲ ಆರು ತಿಂಗಳುಗಳಲ್ಲಿ, ಮಗುವಿಗೆ ಎದೆಹಾಲು ಮಾತ್ರ ನೀಡಬೇಕಾಗುತ್ತದೆ ಮತ್ತು ತನ್ನ ಎಲ್ಲಾ ಪೋಷಕಾಂಶಗಳ ಅವಶ್ಯಕತೆಗಳಿಗಾಗಿ ಮಗು ತಾಯಿಯ ಮೇಲೆ ಅವಲಂಬಿತವಾಗಿರುತ್ತದೆ. ತಾಯಿಗೆ ಪೌಷ್ಠಿಕಾಂಶದ ಕೊರತೆಯಿದ್ದರೆ, ಮಗುವೂ ಕೊರತೆಯನ್ನು ಅನುಭವಿಸಬಹುದು. ಸ್ತನ್ಯಪಾನ ಮಾಡುವಾಗ ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಎದೆ ಹಾಲಿನ ಶಕ್ತಿ, ಪ್ರೋಟೀನ್, ಕೊಬ್ಬು, ಜೀವಸತ್ವಗಳು ಮತ್ತು ಖನಿಜಾಂಶಗಳನ್ನು ನಿರ್ಧರಿಸುತ್ತದೆ. ಆದ್ದರಿಂದ, ಎದೆಹಾಲುಣಿಸುವ ಸಮಯದಲ್ಲಿ ಕಬ್ಬಿಣ ಮತ್ತು ಮಲ್ಟಿವಿಟಮಿನ್‌ಗಳಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ, ಮಣಿಪಾಲ್ ಆಸ್ಪತ್ರೆಯ ಮೈಸೂರಿನ ಬಹುವಿಭಾಗೀಯ ತಜ್ಞರ ತಂಡವು ಎದೆಹಾಲುಣಿಸುವಿಕೆಯ ಸಮಸ್ಯೆಗಳನ್ನು ಪರಿಹರಿಸಲು ಅಂತರವಿಭಾಗೀಯ ವಿಧಾನ ಮತ್ತು ವಿವಿಧ ವಿಶೇಷತೆಗಳ ತಜ್ಞರ ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಆದ್ದರಿಂದ, ಮಣಿಪಾಲ್ ಆಸ್ಪತ್ರೆ ಮೈಸೂರು, ಅವರು ಗರ್ಭಿಣಿ ಮಹಿಳೆಯರಿಗೆ ತಮ್ಮ ಗರ್ಭಧಾರಣೆಯ ಹಂತದಿಂದ ಶುರುವಾಗಿ, ಹೆರಿಗೆ, ಪ್ರಸವೋತ್ತರ ಮತ್ತು ಹಾಲುಣಿಸುವ ಅವಧಿ, ಮಗುವಿನ ಶೈಶವಾವಸ್ಥೆ ಮತ್ತು ಬೆಳೆಯುವ ಸಮಯದಲ್ಲಿ ಆರೋಗ್ಯಕರ, ಸುರಕ್ಷಿತ ಮತ್ತು ಆನಂದಮಯ ಗರ್ಭಧಾರಣೆ ಮತ್ತು ತಾಯ್ತನವನ್ನು ಖಚಿತಪಡಿಸಿಕೊಳ್ಳಲು ತಜ್ಞರ ಮಾರ್ಗದರ್ಶನವನ್ನು ಒಳಗೊಂಡಿರುವ ವಿಶೇಷವಾದ ಮಗು ಮತ್ತು ತಾಯಿಯ ಆರೈಕೆ ಪ್ಯಾಕೇಜ್ ಅನ್ನು ತಂದಿದ್ದಾರೆ. ಗರ್ಭಿಣಿ ಮಹಿಳೆಯರು ಹೆಚ್ಚಿನ ವಿವರಗಳಿಗಾಗಿ ಮಣಿಪಾಲ್ ಆಸ್ಪತ್ರೆ, ಮೈಸೂರು ಇವರನ್ನು ಸಂಪರ್ಕಿಸಬಹುದು ಅಥವಾ 0821-255-5000 ಗೆ ಕರೆ ಮಾಡಬಹುದು ಮತ್ತು ಈ ವಿಶೇಷ ಆರೈಕೆ ಪ್ಯಾಕೇಜ್‌ನ ಲಾಭವನ್ನು ಪಡೆಯಬಹುದು.