ನಂದಿನಿ ಮೈಸೂರು
ಮೈಸೂರು ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕರಾಗಿ ಮ ವಿ ರಾಮಪ್ರಸಾದ್ ಅವರು ಆಯ್ಕೆಯಾಗಿದ್ದು ಇಂದು ಕಚೇರಿ ಉದ್ಘಾಟಿಸಿ ಅಧಿಕಾರ ಸ್ವೀಕಾರಿಸಿದರು.
ಮೈಸೂರು ನಗರ ಪಾಲಿಕೆಯಲ್ಲಿ ಆಡಳಿತ ಪಕ್ಷದ ನಾಯಕರಾಗಿ ಮ ವಿ ರಾಮಪ್ರಸಾದ್ ಅವರು
ಕೆ.ಆರ್ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ , ಮಹಾಪೌರರಾದ ಶಿವಕುಮಾರ್ ಜೊತೆಗೂಡಿ ಮೊದಲಿಗೆ ಗಿಡ ನೆಟ್ಟು ಪರಿಸರ ಪ್ರೇಮ ಮೆರೆದರು.ನೂತನ ಕಚೇರಿ ಉದ್ಘಾಟಿಸಿ ಆಡಳಿತ ಪಕ್ಷದ ನಾಯಕರಾಗಿ ಅಧಿಕಾರ ಸ್ವೀಕರಿಸಿದರು.
ಮ ವಿ ರಾಮಪ್ರಸಾದ ಅವರು ಮಾತನಾಡಿ ಸತತವಾಗಿ ಮೂರು ಬಾರಿ ನಗರ ಪಾಲಿಕೆಯ ಸದಸ್ಯರಾಗಿದ್ದೇನೆ. ಪಾಲಿಕೆಯಲ್ಲಿ ಕಳೆದ ಸಾಲುಗಳಲ್ಲಿ ವಿರೋಧ ಪಕ್ಷದ ನಾಯಕರಾಗಿ, ವರ್ಕ್ಸ್ ಕಮಿಟಿ ಅಧ್ಯಕ್ಷರಾಗಿ ಹಾಗೂ ವಿವಿಧ ಸ್ಥಾಯಿ ಸಮಿತಿಯಲ್ಲಿ ಸದಸ್ಯರಾಗಿ ಸಾಕಾದಷ್ಟು ಅನುಭವವನ್ನು ಪಡೆದು ಉತ್ತಮವಾಗಿ ಕೆಲಸ ನಿರ್ವಹಿಸಿದ್ದೇನೆ.ಈ ಬಾರಿ ಮೇಯರ್ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದರೂ ಎಲ್ಲದ್ದಕ್ಕೂ ಕಾಲ ಕೂಡಿಬರಬೇಕಿದೆ.ಆಡಳಿತ ಪಕ್ಷದ ನಾಯಕನಾಗಿದ್ದರೂ ಸಹ ನಾನು ಮೇಯರ್ ಆದಷ್ಟೇ ಖುಷಿ ನನಗಿದೆ ಎಂದರು.
ಮ ವಿ ರಾಮಪ್ರಸಾದ್ ಇವರು ಚಾಮುಂಡಿಪುರಂನಲ್ಲಿ ವಿಶೇಷ ಚೇತನ ಮಕ್ಕಳಿಗೆ ಅರುಣೋದಯ ಎಂಬ ಹೆಸರಿನಲ್ಲಿ ಉಚಿತವಾಗಿ ದಿನವಸತಿ ಶಾಲೆಯನ್ನು ಮಾಡಿರುತ್ತಾರೆ, ಇಲ್ಲಿ 52 ಮಕ್ಕಳು ವಿಶೇಷ ಚೇತನ ಮಕ್ಕಳಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಉಪ-ಮಹಾಪೌರರಾದ ರೂಪ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್, ನಗರ ಪಾಲಿಕೆ ಸದಸ್ಯರಾದ ಸುಬ್ಬಯ್ಯ, ಪ್ರೇಮ ಶಂಕ್ರೇಗೌಡ, ಶಾರದಾ ಈಶ್ವರ್, ಸಾತ್ವಿಕ್ ಸಂದೇಶ್, ಪುಷ್ಪಲತಾ ಜಗನ್ನಾಥ್, ರಮೇಶ್ (ರಮಣಿ) ಮುಖಂಡರಾದ ಜೋಗಿ ಮಂಜು, ಸಂದೀಪ್ ಚಂದ್ರಶೇಖರ್, ನಾಗೇಂದ್ರ ಪ್ರಸಾದ್, ಪ್ರದೀಪ್, ಕುಮಾರ್ , ರಮೇಶ್ , ಶ್ರೀನಿವಾಸ್,ಜಗದೀಶ್, ಅಜಯ್ ಶಾಸ್ತ್ರಿ, ವಿಕ್ರಮ್ , ಮೋಹನ್, ಕಿರಣ್, ಅದ್ವೈತ, ಡಾಕ್ಟರ್ ಲಕ್ಷ್ಮಿ ದೇವಿ ಮುಂತಾದವರು ಉಪಸ್ಥಿತರಿದ್ದರು.