ನಂದಿನಿ ಮೈಸೂರು
*ಹೊಸಬರ ’ಲವ್’ ಸಿನಿಮಾದ ಟ್ರೇಲರ್ ರಿಲೀಸ್..ಸಖತ್ ಪ್ರಾಮಿಸಿಂಗ್ ಆಗಿ ಟ್ರೇಲರ್…ಅಕ್ಟೋಬರ್ 6ಕ್ಕೆ ತೆರೆಯಲ್ಲಿ ಲವ್ ಮ್ಯಾಜಿಕ
ಓ ಎಂಬ ಹಾರರ್ ಸಿನಿಮಾ ನಿರ್ದೇಶಿಸಿದ್ದ ಮಹೇಶ ಸಿ ಅಮ್ಮಳ್ಳಿದೊಡ್ಡಿ ಇದೀಗ ” ಲವ್” ಹಿಂದೆ ಬಿದ್ದಿದ್ದಾರೆ. ಶೀರ್ಷಿಕೆ ಹೇಳುವಂತೆ ಪ್ರೇಮ ಕಥಾಹಂದರದ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಹಿಂದೂ ಹುಡುಗ ಹಾಗೂ ಮುಸ್ಲಿಂ ಹುಡುಗಿಯ ನಡುವೆ ಪ್ರೀತಿಗೆ ಮನೆಯವರು, ಇಡೀ ಸಮಾಜದವರು ಎದುರು ನಿಂತಾಗ ಏನಾಗುತ್ತದೆ ಎಂಬ ಸುತ್ತ ಟ್ರೇಲರ್ ಸಾಗುತ್ತದೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು. ಅತಿಥಿಗಳಾಗಿ ನಿರ್ದೇಶಕ ಸಂಘದ ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ನಾಗೇಂದ್ರ ಅರಸ್, ಖಜಾಂಚಿ ಮಂಜು, ನಟ ಅಮಿತ್, ನಿರ್ದೇಶಕ ಮಹೇಶ್ ಕುಮಾರ್ ಭಾಗಿಯಾಗಿದ್ದರು. ಈ ವೇಳೆ ಸಾಕಷ್ಟು ವಿಷಯಗಳನ್ನು ಚಿತ್ರತಂಡ ಹಂಚಿಕೊಂಡಿದೆ.
ಮಹೇಶ ಸಿ ಅಮ್ಮಳ್ಳಿದೊಡ್ಡಿ ಮಾತನಾಡಿ, ಹೊಸಬರಿಗೆ ಮಾಸ್ ಮೂವೀ ವರ್ಕ್ ಆಗುವುದಿಲ್ಲ ಎಂಬ ಕಾರಣ ಲವ್ ಜಾನರ್ ಮಾಡಿದ್ದೇನೆ. ಸಿನಿಮಾ ಈಗಾಗಲೇ ಸೆನ್ಸಾರ್ ಪಾಸಾಗಿದೆ. ನೈಜ ಘಟನೆಯಿಂದ ಪ್ರೇರೇಪಿತನಾಗಿ ಸಿನಿಮಾ ಮಾಡಿದ್ದೇನೆ. ಜನವರಿಗೆ ಶೂಟಿಂಗ್ ಶುರು ಮಾಡಿ ಮಾರ್ಚ್ ಗೆ ಮುಗಿಸಿದ್ದೇವೆ ಎಂದರು.
ಪ್ರಜಯ್ ಜಯರಾಮ್ ಮಾತನಾಡಿ, ಕಳೆದ ಏಳೆಂಟು ವರ್ಷಗಳಿಂದ ಇಂಡಸ್ಟ್ರೀಯಲ್ಲಿದ್ದೇನೆ. ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಲು ಬಂದಿದ್ದೆ. ಆದರೆ ನೀವೇ ಹೀರೋ ಅಂದರು ಖುಷಿಯಾಗಿತು. ಇದೇ ಅಕ್ಟೋಬರ್ 6ಕ್ಕೆ ಲವ್ ಸಿನಿಮಾ ರಿಲೀಸ್ ಆಗುತ್ತಿದೆ ಪ್ರತಿಯೊಬ್ಬರು ಬೆಂಬಲಿಸಿ ಎಂದರು.
ವೃಷ ಪಾಟೀಲ ಮಾತನಾಡಿ, ನಾನು ಉತ್ತರ ಕರ್ನಾಟಕದ ಹುಡುಗಿ. ಇದು ನನ್ನ ಮೊದಲ ಸಿನಿಮಾ. ಒಂದಷ್ಟು ಕಿರುಚಿತ್ರಗಳಲ್ಲಿ ನಟಿಸಿದ್ದೇನೆ. ಕಥೆ ಕೇಳಿದೆ ಇಷ್ಟವಾಯಿತು. ಸಿನಿಮಾ ಒಪ್ಪಿಕೊಂಡೆ ಎಂದು ತಿಳಿಸಿದರು.
ಮಹೇಶ ಸಿ ಅಮ್ಮಳ್ಳಿದೊಡ್ಡಿ ಲವ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಎರಡನೇ ಹೆಜ್ಜೆ. ಈ ಹಿಂದೆ ಮಹೇಶ ಓ ಎಂಬ ಹಾರರ್ ಚಿತ್ರ ನಿರ್ದೇಶಿಸಿದ್ದು, ಈಗ ಪ್ರೇಮಕಥೆ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ ನಾಯಕ ಹಾಗೂ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದಾರೆ. ಕಾಂತಾರ ಸಿನಿಮಾ ಖ್ಯಾತಿಯ ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ ಸೇರಿದಂತೆ ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರೀ, ರಜತ್ ಶೆಟ್ಟಿ ಹಲವರು ಚಿತ್ರದ ಭಾಗವಾಗಿದ್ದಾರೆ.
ಶ್ರೀಕಾಲ ಭೈರವೇಶ್ವರ ಮೂವೀ ಮೇಕರ್ಸ್ ನಡಿ ದಿವಾಕರ್ ಲವ್ ಚಿತ್ರ ನಿರ್ಮಿಸುತ್ತಿದ್ದು, ಸಿದ್ದಾರ್ಥ್ ಹೆಚ್ ಆರ್ ಛಾಯಾಗ್ರಹಣ, ರೋಸಿತ್ ವಿಜಯನ್, ಶ್ರೀ ಸಾಯಿ ಕಿರಣ್ ಸಂಗೀತ, ಶಿವಪ್ರಸಾದ್ ಹಿನ್ನೆಲೆ ಸಂಗೀತ, ಲೋಕೇಶ್ ಪುಟ್ಟೇಗೌಡ ಸಂಕಲನ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.
ನೈಜ ಘಟನೆಯ ಪ್ರೇರಿತವಾದ ಕಥೆಯಾಗಿರುವ ಲವ್ ಸಿನಿಮಾವನ್ನು ಉಡುಪಿ, ಕೋಟ, ಕುಂದಾಪುರ, ಬೈಂದೂರ್, ಬಾಗಲಕೋಟೆ ಮತ್ತು ಬೆಂಗಳಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಅಕ್ಟೋಬತ್ 6ಕ್ಕೆ ಲವ್ ಸಿನಿಮಾ ತೆರೆಗೆ ಬರ್ತಿದ್ದು, ಪೊಗರು ಸಿನಿಮಾ ನಿರ್ಮಿಸಿದ್ದ ಬಿಕೆ ಗಂಗಾಧರ್ ರಾಜ್ಯಾದ್ಯಂತ ಚಿತ್ರ ವಿತರಣೆ ಮಾಡಲಿದ್ದಾರೆ.