ಕ್ಷಯರೋಗ ದೃಢಪಟ್ಟಲ್ಲಿ ಚಿಕಿತ್ಸೆ ಪಡೆಯಬೇಕು,ಕ್ಷಯ ರೋಗದಿಂದ ಜನರು ಯಾವುದೇ ಆತಂಕ ಪಡಬಾರದು

ಎಚ್.ಡಿ.ಕೋಟೆ:3 ಮಾರ್ಚ್ 2022

ನಂದಿನಿ ಮೈಸೂರು

ಎಚ್. ಡಿ. ಕೋಟೆ ತಾಲ್ಲೂಕಿನ N ಬೇಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಕಳಸೂರು ಗ್ರಾಮಕ್ಕೆ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಗಳಾದ ಡಾ” ಸಿರಾಜ್ ಅಹಮದ್,ತಾಲ್ಲೂಕು ಆರೋಗ್ಯಾಧಿಕಾರಿ ಗಳಾದ ಡಾ” ಟಿ. ರವಿಕುಮಾರ್ ಹಾಗೂ ಜಿಲ್ಲಾ ಮೇಲ್ವಿಚಾರಕರಾದ ಮಹದೇವ್ ರವರು ಗ್ರಾಮಕ್ಕೆ ಭೇಟಿ ನೀಡಿ S.N.C ಸಮೀಕ್ಷೆಯ ಪರಿಶೀಲನೆ ಹಾಗೂ ಮೇಲ್ವಿಚಾರಣೆ ನಡೆಸಿದರು.

ಇದೇ ಸಂದರ್ಭದಲ್ಲಿ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಮಾತನಾಡಿ, ಪೋಸ್ಟ್ ಕೋವಿಡ್, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಇರುವವರು ಕ್ಷಯರೋಗ ಲಕ್ಷಣಗಳಿದ್ದರೆ ಕೂಡಲೇ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ಕಫ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೆ ತಕ್ಷಣX- Ray ಪರೀಕ್ಷೆ ಮಾಡಿಸಿಕೊಳ್ಳಬೇಕು, ಹಾಗೂ ಕ್ಷಯರೋಗ ದೃಢಪಟ್ಟ ಲ್ಲಿ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು,ಷಯ ರೋಗದಿಂದ ಜನರು ಯಾವುದೇ ಆತಂಕ ಪಡಬಾರದು ಹಾಗೂ S.N.C ಸಮೀಕ್ಷೆ ಮಾಡುವವರು ಮನೆಮನೆಗೆ ತೆರಳಿ app ನಲ್ಲಿ ಅಪ್ಲೋಡ್ ಮಾಡುತ್ತಾರೆ ,ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು .ಮತ್ತು ಮುಂದಿನ ದಿನಗಳಲ್ಲಿ ನೇರಳೆ ಗ್ರಾಮದಲ್ಲಿ S.N.C ಸಮೀಕ್ಷೆ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ, ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ” ಪ್ರವೀಣ್,S.T.L.S ನಾಗರಾಜು, S.T.S ಸುರೇಶ್ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *