2025 ರ ವೇಳೆಗೆ ಭಾರತದಲ್ಲಿ 17 ಮಿಲಿಯನ್ ಸ್ಕೂಲಕಾಯ ( ಬೊಜ್ಜು ) ದ ಮಕ್ಕಳು ಇರುತ್ತಾರೆ:ಡಾ.ತೃಪ್ತಿ

ಮೈಸೂರು:3 ಮಾರ್ಚ್ 2022

ನಂದಿನಿ ಮೈಸೂರು

2025 ರ ವೇಳೆಗೆ ಭಾರತದಲ್ಲಿ 17 ಮಿಲಿಯನ್ ಸ್ಕೂಲಕಾಯ ( ಬೊಜ್ಜು ) ದ ಮಕ್ಕಳು
ಇರುತ್ತಾರೆ ಎಂದು ಪೀಡಿಯಾಟ್ರಿಕ್‌ ಎಂಡೋಕ್ರಿನಾಲಜಿಸ್ಟ್ , ಕಾಂಗರೂ ಶೇರ್ ಮಹಿಳಾ ಮತ್ತು ಮಕ್ಕಳ ಅಸ್ಪತ್ರೆಯ ಡಾ . ತೃಪ್ತಿ ತಿಳಿಸಿದ್ದರು.

ವಿಶ್ವ ಸ್ಕೂಲಕಾಯತೆಯ ದಿನದ ಅಂಗವಾಗಿ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು
“ ಬೊಜ್ಜು ಎಂದರೆ ದೇಹದ ಕೊಬ್ಬಿನಾಂಶ ಹೆಚ್ಚಾಗಿರುತ್ತದೆ . ಸ್ಕೂಲಕಾಯಕ್ಕೆ ಪ್ರಮುಖ ಕಾರಣವೆಂದರೆ ಹೆಚ್ಚಿನ ಕ್ಯಾಲರಿಗಳಿರುವ ಆಹಾರ ಸೇವಿಸುವುದು , ಹೆಚ್ಚು ಕೊಬ್ಬಿನಂಶವಿರುವ ಜಂಕ್ ಫುಡ್‌ಗಳನ್ನು ಸೇವಿಸುವುದರ ಜೊತೆಗೆ ಯಾವುದೇ ದೈಹಿಕ ಚಟುವಟಿಕೆಗಳಿಲ್ಲದೆ ಹೆಚ್ಚಿನ ಸಮಯವನ್ನು ಮೊಬೈಲ್ ಅಥವಾ ಟವಿ ವೀಕ್ಷಿಸುವುದು , ನಿಗದಿತ ಸಮಯದಷ್ಟು ನಿದ್ರೆ ಮಾಡದಿರುವುದಾಗಿದೆ . ಸ್ಕೂಲಕಾಯತೆಯು ಗಂಭೀರ ಸಮಸ್ಯೆಗಳಾದ ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್ , ಅಧಿಕ ರಕ್ತದೊತ್ತಡ , ನಿದ್ದೆ ಮಾಡುವ ಸಮಯದಲ್ಲಿ ಅತಿಯಾದ ಗೊರಕೆ ಮತ್ತು ಇನ್ನಿತರ ಸಮಸ್ಯೆಗಳಿಗೆ ಕಾರಣವಾಗಲಿದೆ . ಜೊತೆಗೆ ಚಿಕ್ಕ ವಯಸ್ಸಿನಲ್ಲೇ ಲಿಪಿಡ್‌ಗಳ ಹೆಚ್ಚಳ , ಪಾರ್ಶ್ವವಾಯು ಮತ್ತು ಹೃದ್ರೋಗ ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಲಿದೆ , ಅಲ್ಲದೇ ಪಾಲಿಸಿಸ್ಟಿಕ್ ಓವರಿ ಸಿಂಡೋಮ್ , ಸ್ತನ , ಪಿತ್ತಕೋಶ , ಗುದನಾಳ ಸೇರಿದಂತೆ ಇನ್ನಿತರ ಕ್ಯಾನ್ಸರ್‌ನ ಅಪಾಯವು ಹೆಚ್ಚಾಗಿದೆ ‘ ಎಂದು ತಿಳಿಸಿದರು .

ಕಳೆದೆರಡು ವರ್ಷಗಳಲ್ಲಿ ಕೋವಿಡ್ ಸಂದರ್ಭದಲ್ಲಿ ಮನೆಯಿಂದ ಹೊರ ಹೋಗುತ್ತಿರಲಿಲ್ಲ . ಜೊತೆಗೆ ಹೆಚ್ಚಿನ ಒತ್ತಡ , ಅತಿಯಾದ ಅಹಾರ ಸೇವನೆಯಿಂದ ಸ್ಫೂಲಕಾಯ ( ಬೊಜ್ಜು ) ದ ( Obesity ) ಸಮಸ್ಯೆಯಿಂದ ಬಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ .ಮಾರ್ಚ್ 4 ರ ವಿಶ್ವ ಸ್ಕೂಲಕಾಯತೆ ದಿನದ ಥೀಮ್ ” ಪ್ರತಿಯೊಬ್ಬರು ಕಾರ್ಯ ನಿರ್ವಹಿಸಬೇಕು ಎಂಬುದಾಗಿದ್ದು , ಸ್ಕೂಲಕಾಯತೆಯು ಸಮಾಜದಾಧ್ಯಂತ ಮೂಲ ಕಾರಣವನ್ನು ಹೊಂದಿದೆ . ಸ್ಕೂಲಕಾಯ ಅಥವಾ ಬೊಜ್ಜನ್ನು ಸರಿಯಾಗಿ ನಿಭಾಯಿಸುವುದು ಪ್ರತಿಯೊಬ್ಬರಿಗೂ ಆರೋಗ್ಯಕರ ಮತ್ತು ದೀರ್ಘಕಾಲದ ಜೀವನ ನಡೆಸಲು ನೆರವಾಗಲಿದೆ ಎಂದರು.

ಕನ್ಸಲೈಂಟ್ ಪೀಡಿಯಾಟ್ರಿಷನ್ , ಪಿಡಿಯಾಟ್ರಿಕ್ ಅಲರ್ಜಿ , ಅಸ್ತಮಾ ಸ್ಪೆಷಲಿಸ್ಟ್ , ಕಾಂಗರೋ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಡಾ . ಬಾಲಾಜಿ ಎಂ.ಡಿ. ಸ್ಕೂಲಕಾಯತ ಅಥವಾ ಬೊಜ್ಜನ್ನು ತಡೆಗಟ್ಟುವುದು ಹೇಗೆ ಎಂಬುದರ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಡಾ.ಸುಪ್ರೀಯ ಜೊತೆಗಿದ್ದರು.

Leave a Reply

Your email address will not be published. Required fields are marked *