ಆಹಾರ ಅರಸಿ ನಾಡಿಗೆ ಬಂದು ಕಂದಕಕ್ಕೆ ಬಿದ್ದ ಗಂಡು ಆನೆಮರಿ

ಹುಣಸೂರು:2 ಮಾರ್ಚ್ 2022

ದಾ ರಾ ಮಹೇಶ್

ಹುಣಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆಹಾರ ಅರಸಿ ನಾಡಿಗೆ ಬರುತ್ತಿದ್ದ ಒಂದೂವರೆ ವರ್ಷದ ಗಂಡು ಆನೆಮರಿ ಕಂದಕಕ್ಕೆ ಬಿದ್ದಿತು ಇದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಸಹಕಾರದಲ್ಲಿ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಬರುವ ಮೇಟಿಕುಪ್ಪೆ ವನ್ಯಜೀವಿ ವಿಭಾಗದ ಎಂಬಿಸಿ ಕ್ಯಾಂಪ್ ಹತ್ತಿರ ಬಸವನಗುಡಿ ಮುಂಟಿಯ ಮುಖ್ಯರಸ್ತೆಯಲ್ಲಿ ಸುಮಾರು ಒಂದರಿಂದ ಎರಡು ವರ್ಷದೊಳಗಿನ ಗಂಡಾನೆಯ
ಮರಿ ತನ್ನ ಎರಡು ಹೆಣ್ಣಾನೆ ,ಒಂದು ಗಂಡಾನೆಯೊಂದಿಗೆ ಕಾಡಿನಿಂದ ನಾಡಿಗೆ ಆಹಾರ ಅರಸಿ ಸೊಮುವಾರ ರಾತ್ರಿ ಬರುತ್ತಿದ್ದಾಗ ಆನೆ ಕಂದಕಕ್ಕೆ ಬಿದ್ದಿತ್ತು, ಆನೆಯ ಮರಿಯ ಕಿರುಚಾಟ ಕೇಳಿದ ಗ್ರಾಮಸ್ಥರು ಮಂಗಳವಾರ ಬೆಳಿಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿ ಸಿಬ್ಬಂದಿಗಳ ಜೊತೆಯಲ್ಲಿ ಸಹಕಾರ ನೀಡಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಮಹದೇವ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಅಧಿಕಾರಿ ಸಂತೋಷ್ ಅವರು ಆನೆಯ ಮರಿಯನ್ನು ರಕ್ಷಣೆ ಮಾಡಿ ಕಾಡಾನೆಗಳ ಜೋತೆಯಲ್ಲಿ ಮರಿಯನ್ನು ಕೂಡ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಉಪ ಅರಣ್ಯಾಧಿಕಾರಿ ಆನಂದ್ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು

Leave a Reply

Your email address will not be published. Required fields are marked *