ದಲಿತ ಯುವಕ ದಿನೇಶ್ ನಾಯ್ಕ್ ಹತ್ಯೆ ಖಂಡಿಸಿ ಪ್ರತಿಭಟನೆ

 

ತಿ.ನರಸೀಪುರ:2 ಮಾರ್ಚ್ 2022

ಆಲಗೂಡು ರೇವಣ್ಣ

ದಲಿತ ಯುವಕ ದಿನೇಶ್ ನಾಯ್ಕ ನನ್ನು ಹತ್ಯೆ ಮಾಡಿರುವ ಬಿಜೆಪಿ ಪಕ್ಷದ ಕಾರ್ಯಕರ್ತ, ಭಜರಂಗ ದಳದ ಮುಖಂಡ ಕೃಷ್ಣ ಆಲಿಯಾಸ್ ಕಿಟ್ಟಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾಗಿ ದಸಂಸ ಕಾರ್ಯಕರ್ತರು ಆಗ್ರಹಿಸಿದರು.

ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ಜಮಾಯಿಸಿದ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಶಾಖೆಯ ಮುಖಂಡರು ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕು, ಕನ್ಯಾಡಿ ಗ್ರಾಮದ
ದಲಿತ ಯುವಕ ದಿನೇಶ್ ನಾಯ್ಕನನ್ನು ಹತ್ಯೆ ಮಾಡಿರುವ ಅದೇ ಗ್ರಾಮದ ಬಿಜೆಪಿ ಪಕ್ಷದ ಕಾರ್ಯಕರ್ತ, ಭಜರಂಗದಳದ ಮುಖಂಡ ಕೃಷ್ಣ ಆಲಿಯಾಸ್ ಕಿಟ್ಟಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ದಸಂಸ ಜಿಲ್ಲಾ ಸಂಚಾಲಕರಾದ ಆಲಗೂಡು ಶಿವಕುಮಾರ್ ಮಾತನಾಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ, ಕಳೆದ ಫೆಬ್ರವರಿ 23 ನೇ ತಾರೀಖಿನಂದು ಕ್ಷುಲ್ಲಕ ಕಾರಣಕ್ಕಾಗಿ, ಜಾತಿ ಕಾರಣದಿಂದ ದಿನೇಶ್ ನಾಯ್ಕ ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಮೂಲಕ ದಲಿತ ಯುವಕನನ್ನು ಹತ್ಯೆಗೈದಿರುವುದು ಖಂಡನೀಯ ಎಂದರು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ತನ್ನ ಕ್ಷೇತ್ರದ ಮತದಾರ ದಲಿತ ಯುವಕನ ಹತ್ಯೆಯ ಶವಸಂಸ್ಕಾರಕ್ಕೆ ಹೋಗದೆ, ಆತನ ಹತ್ಯೆಗೆ ಮರುಕವನ್ನೂ ವ್ಯಕ್ತಪಡಿಸದೆ, ಪಕ್ಕದ ಜಿಲ್ಲೆಯ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ಕುರಿತಾದ ಪ್ರತಿಭಟನೆಯಲ್ಲಿ ಮಾತನಾಡುತ್ತ, ದೆಹಲಿಯ ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸಿಯೇ ಸಿದ್ದ ಎಂದು ಹೇಳುವ ಮೂಲಕ, ಈ ಹಿಂದೆ ಇದೇ ಹೇಳಿಕೆ ನೀಡಿದ್ದ ಶಿವಮೊಗ್ಗ ಕ್ಷೇತ್ರದ ಶಾಸಕ,ಸಚಿವ ಕೆ.ಎಸ್.ಈಶ್ವರಪ್ಪರ ದೇಶ ದ್ರೋಹದ ಮಾತುಗಳನ್ನು ಸಮರ್ಥಿಸಿರುವುದು ದೇಶದ್ರೋಹಿ ಹೇಳಿಕೆಯಾಗಿದೆ.ಈ ಇಬ್ಬರ ಮಾತುಗಳು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ ವಾಗಿರುತ್ತದೆ. ಹಾಗಾಗಿ ಈ ಇಬ್ಬರ ಮೇಲೆ ಯು.ಎ.ಪಿ.ಎ ಕಾಯ್ದೆಯಡಿ ದೇಶದ್ರೋಹ ಪ್ರಕರಣ ದಾಖಲಿಸಿ, ಶಾಸಕ ಸ್ಥಾನದಿಂದ ವಜಾಗೊಳಿಸಿ ದೇಶದಿಂದ ಗಡಿಪಾರು ಮಾಡಬೇಕೆಂದು ದಸಂಸ ಆಗ್ರಹಿಸುತ್ತದೆ ಎಂದರು.

ಮುಂದುವರಿದು ಮಾತನಾಡಿದ ಅವರು ಕೇಂದ್ರ ಸರ್ಕಾರದ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಹಾಗೂ ರಾಜ್ಯ ಸರ್ಕಾರದ ಶಾಸಕರುಗಳಾದ ರೇಣುಕಾಚಾರ್ಯ, ಬಸನಗೌಡ ಪಾಟೀಲ್, ಮತ್ತು ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್,ಎ.ಬಿ.ವಿ.ಪಿ ಸಂಘಟನೆಯ ಪೂಜ ವೀರಶೆಟ್ಟಿ, ಮತ್ತಿತರರು, ಕೊಚ್ಚಿ,ಕೊಲ್ಲಿ,ಕಡಿಯಿರಿ ಮತ್ತು ಸಾಯಿಸಿ, ಮುಂತಾದ ಕೋಮು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಮತ್ತಷ್ಟು ಅಶಾಂತಿಯನ್ನು ಸೃಷ್ಟಿ ಮಾಡಿ ಆತಂಕದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದರೂ ಸರ್ಕಾರ ಕ್ರಮ ಕೈಗೊಳ್ಳುವ ಬದಲು ಕಾನೂನು ಬದ್ದವಾಗಿ ಪ್ರಶ್ನೆ ಮಾಡುತ್ತಿದ್ದ ಪ್ರಗತಿಪರರಾದ, ಚಲನಚಿತ್ರ ನಟ ಚೇತನ್ ರವರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸ ಅಕ್ರಮವಾಗಿ ಜೈಲಿನಲ್ಲಿ ಇಡಲಾಗುತ್ತದೆ. ಹಾಗಾಗಿ ಅವರು ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ವಜಾಗೊಳಿಸಬೇಕೆಂದರು.

ಕಳೆದ ತಿಂಗಳು 27-2-22 ರಂದು ರಾಮನಾಥ ಪುರ ಬೆಟ್ಟದಪುರ ಮುಖ್ಯ ರಸ್ತೆ ಗಂಗೂರಿನ ಹ್ಯಾಂಡ್ ಪೋಸ್ಟ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕಬ್ಬು ಹರೆಯುವ ಯಂತ್ರ ಇಟ್ಟು ಜೀವನ ನಡೆಸುತ್ತಿದ್ದ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ ರುದ್ರಾಪಟ್ಟಣ ಗ್ರಾಮದ ದಲಿತ ವ್ಯಕ್ತಿಗಳಾದ ಚಂದ್ರ ಮತ್ತು ಆತನ ಮಗ ನಿತಿನ್ ಮೇಲೆ ಪಕ್ಕದ ಗ್ರಾಮ ಗಂಗೂರಿನ ಸವರ್ಣೀಯ ಸಮುದಾಯ ದ ಏಳೆಂಟು ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸು ವಂತಾಗಿದೆ ಈ ಸಂಬಂಧ ಕ್ರಮ ಕೈಗೊಳ್ಳ ಬೇಕಾದ ಕೊಣನೂರು ಪೊಲೀಸರು ವಿಳಂಬ ನೀತಿ ಅನುಸರಿಸುತ್ತಿರುವುದು ರಾಜ್ಯದಲ್ಲಿ ದಲಿತರಿಗೆ ರಕ್ಷಣೆಯ ಅಭದ್ರತೆ ಉಂಟಾಗಿರುತ್ತದೆ ಹಾಗಾಗಿ ರಾಜ್ಯದಲ್ಲಿ ಅಶಾಂತಿಯ ವಾತಾವರಣವನ್ನು ನಿರ್ಮಾಣ ಮಾಡುತ್ತಿರುವ ಬಿಜೆಪಿ ಸರ್ಕಾರದ ಸಚಿವರು, ಶಾಸಕರುಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ, ಸಂವಿಧಾನಕ್ಕೆ ಮಾಡಿರುವ ಅಪಚಾರಕ್ಕಾಗಿ ಅವರ ಸ್ಥಾನಗಳಿಂದ ವಜಾಗೊಳಿಸಬೇಕು, ಸಂಘ ಪರಿವಾರ ಮುಖಂಡರುಗಳ ಮೇಲೆ ಕೋಮು ದ್ವೇಷ ಪ್ರಕರಣ ದಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಹಾಗೂ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ ತಹಶೀಲ್ದಾರ್ ಕಛೇರಿ ಮೂಲಕ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ದಸಂಸ ತಾಲ್ಲೂಕು ಸಂಚಾಲಕರಾದಕುಕ್ಕೂರು ರಾಜು, ಯಾಚೇನ ಹಳ್ಳಿ ಸೋಮಶೇಖರ್, ಮಹದೇವ್,ತುರುಗ ನೂರು ಲಕ್ಷ್ಮಣ್, ದೇವರಾಜ್, ಆನಂದ, ಮಾವಿನಹಳ್ಳಿ ಕುಮಾರ್, ಬನ್ನಹಳ್ಳಿಹುಂಡಿ ಉಮೇಶ್,ಕಿರಗಸೂರು ರಜನಿ, ಯಡದೊರೆ ನಿರಂಜನ್, ಸಿದ್ದರಾಜು, ಮರಯ್ಯ, ಇಂಡವಾಳು ಹೊನ್ನಯ್ಯ, ನಾಗರಾಜ್, ಹನುಮನಾಳು ಚನ್ನಮಲ್ಲು, ಹಿರಿಯೂರು ಸೋಮಣ್ಣ, ಆಲಗೂಡು ನಾಗರಾಜ್ ಮೂರ್ತಿ, ಆನಂದ್, ಮದನ್, ಶಾಂತಕುಮಾರ್, ಪುರುಷೋತ್ತಮ್, ಮಾರನಪುರಮಾಂತು,ನಿಲಸೋಗೆ ಉಮೇಶ ,ಕೃಷ್ಣಮೂರ್ತಿ,ಯಾಕನೂರುರಾಚಪ್ಪ,
ರಂಗಸಮುದ್ರನಂಜುಂಡ, ವಾಟಾಳ್ ಶಿವಣ್ಣ, ಮೀನು, ಕೃಷ್ಣಮೂರ್ತಿ, ಕುಕ್ಕೂರು ಪ್ರಭು, ತೊಟ್ಟವಾಡಿ ಮಹದೇವ, ಮೂಗೂರು ಮಹದೇವಸ್ವಾಮಿ, ತುಂಬಲ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *