ಸರಗೂರು :2 ಮಾರ್ಚ್ 2022
ರಸ್ತೆ ತುಂಬೆಲ್ಲಾ ಜನ ಸಾಗರ
ಗ್ರಾಮಕ್ಕೆ ಎಂಟ್ರಿ ಕೊಡ್ತಿದ್ದಂತೆ ಹಾರ ತುರಾಯಿ ಹಾಕೋಕೆ ಅಭಿಮಾನಿಗಳು ನಾ ಮುಂದು ತಾ ಮುಂದೆ ಎಂದು ಮುಂದೆ ಬರ್ತ್ತಿದ್ರೂ.ಇನ್ನೂ ತಮ್ಮ ನಾಯಕನಿಗೆ ಬೃಹದಾಕಾರದ ಸೇಬಿನ ಹಾರ ಹಾಕಿ ಸಂಭ್ರಮಿಸಿದ್ರೇ.ಇತ್ತ
ತಂದೆಯ ಹುಟ್ಟು ಹಬ್ಬಕ್ಕೆ ಪುತ್ರ ಹಾಗೂ ಅಭಿಮಾನಿಗಳು ರಕ್ತದಾನ ಮಾಡಿದ್ರೇ.ಪುತ್ರನಿಗಾಗಿ ಚಿಕ್ಕಣ್ಣ ಕ್ಷೇತ್ರ ತ್ಯಾಗ ಮಾಡಿದ್ದಾರೆ.
ಹೌದು ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ
ಮಾಜಿ ಶಾಸಕರಾದ ಬೀಚನಹಳ್ಳಿ ಚಿಕ್ಕಣ್ಣ ಅವರ 78ನೇ ವರ್ಷದ ಹುಟ್ಟುಹಬ್ಬವನ್ನು ವಿವಿಧ ಸೇವಾ ಕಾರ್ಯಕ್ರಮ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ಹುಟ್ಟು ಹಬ್ಬದ ಪ್ರಯುಕ್ತ ಚಿಕ್ಕಣ ಅವರ ಪುತ್ರ ಜಯ ಪ್ರಕಾಶ್ ಸೇರಿದಂತೆ ಹಲವರು ಮಂದಿ ರಕ್ತದಾನ ಮಾಡಿದರು. ಬಡ ರೈತರಿಗೆ, ಹಸುಗಳಿಗೆ ಹಾಗೂ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ತಾಲೂಕಿನ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.
ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರು ಮಾತನಾಡಿ
ನನ್ನ ಜನ್ಮ ದಿನದಂದು ಶುಭಾಷಯ ತಿಳಿಸಿದ ನನ್ನೆಲ್ಲಾ ಬಂಧು ಮಿತ್ರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಿದ್ದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸುಪುತ್ರ ಜಯ ಪ್ರಕಾಶ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ದಯವಿಟ್ಟು ನಿಮ್ಮ ಸಹಕಾರ ಪ್ರೋತ್ಸಾಹ ಇವರ ಮೇಲಿರಲಿ ಎಂದು ಪುತ್ರನಿಗಾಗಿ ಚಿಕ್ಕಣ್ಣ ಕ್ಷೇತ್ರ ತ್ಯಾಗ ಮಾಡಿದ್ದಾರೆ.
ಹುಟ್ಟು ಹಬ್ಬಕ್ಕೆ ಶುಭಕೋರಲು ಆಗಮಿಸಿದ ಜನರಿಗೆ ಹ್ಯಾಂಡ್‍ಪೋಸ್ಟ್ ಸರ್ಕಲ್ ಬಳಿ ಕೃತಜ್ಞತೆಯ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಜೆ.ಡಿ.ಎಸ್ ಪಕ್ಷದ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸೇರಿದಂತೆ ಕನ್ನಡ ಚಿತ್ರರಂಗದ ಪ್ರಮುಖ ನಟರು ಚಿಕ್ಕಣ್ಣ ಅವರಿಗೆ ಹುಟ್ಟು ಹಬ್ಬದ ಪ್ರಯುಕ್ತ ಶುಭಾಶಯ ಕೋರಿದರು.
ಸಂಜಯ್ ಕೆ.ಬೆಳತೂರು ಜೊತೆ ನಂದಿನಿ ಭಾರತ್ ನ್ಯೂಸ್ ಟಿವಿ
ಮೈಸೂರು