ಮೈಸೂರು:18 ನವೆಂಬರ್ 2021
ನಂದಿನಿ
ಮೈಸೂರಿನ ಕೃಷ್ಣ ರಾಜೇಂದ್ರ ಆಸ್ಪತ್ರೆ ತನ್ನ ಕ್ರಿಟಿಕಲ್ ಕೇರ್ ಮೂಲ ಸೌಕರ್ಯವನ್ನು ಡೋಝೀಯಿಂದ ಮಿಲಿಯನ್ ಐಸಿಯು ಉಪಕ್ರಮದ ಮೂಲಕ ಮೇಲ್ದರ್ಜೆಗೇರಿಸುತ್ತಿದೆ ಎಂದು ಡೀನ್ ಅಂಡ್ ಡೈರೆಕ್ಟರ್ ನಿರಂಜನ್ ತಿಳಿಸಿದರು.
ಸ್ಮಾರ್ಟ್ ವಾರ್ಡ್‍ಗಳನ್ನು ರಚಿಸಲು 35 ಸ್ಟೆಪ್-ಡೌನ್ ಹಾಸಿಗೆಗಳನ್ನು ಸ್ಥಾಪಿಸಲಾಗಿದೆ. ಮುಂದಿನ 3 ತಿಂಗಳುಗಳಲ್ಲಿ 1000+ ರೋಗಿಗಳಿಗೆ ನಿರಂತರ ಕ್ರಿಟಿಕಲ್ ಕೇರ್ ಅನ್ನು ಸೌಲಭ್ಯ ಕಲ್ಪಿಸಲಾಗುವುದು.ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಸಿಬ್ಬಂದಿಗಳ ಬೃಹತ್ ಕೊರತೆಯನ್ನು ಪರಿಹರಿಸುವ ಒಂದು ಉಪಕ್ರಮವಾಗಿದೆ.ಕೃಷ್ಣ ರಾಜೇಂದ್ರ ಆಸ್ಪತ್ರೆಯಲ್ಲಿ 35 ಸಾಮಾನ್ಯ ಹಾಸಿಗೆಗಳನ್ನು ಸ್ಟೆಪ್-ಡೌನ್ ಐಸಿಯುಗಳಾಗಿ ನವೀಕರಿಸಲಾಗಿದೆ. ಆಸ್ಪತ್ರೆಯಲ್ಲಿ 24×7 ಸೆಂಟ್ರಲ್ ಮಾನಿಟರಿಂಗ್ ಸೆಲ್ ಅನ್ನು ಸ್ಥಾಪಿಸಿದೆ. ಇದು ಆರೋಗ್ಯ ಸಿಬ್ಬಂದಿಗೆ ಸ್ತ್ರೀರೋಗ ಶಾಸ್ತ್ರ ಮತ್ತು ಶಸ್ತ್ರಚಿಕಿತ್ಸಾ ವಿಭಾಗಗಳಿಂದ ದೂರದಿಂದಲೇ ಅನೇಕ ರೋಗಿಗಳನ್ನು ಮೇಲ್ವಿಚಾರಣೆ ಮಾಡಲು ಶಕ್ತಗೊಳಿಸುತ್ತದೆ. ಈ ಹಿಂದೆ ಪ್ರತಿ ಎರಡು ಗಂಟೆಗಳಿಗೊಮ್ಮೆ ಕೈಯಿಂದ ಮೇಲ್ವಿಚಾರಣೆ ಮಾಡುತ್ತಿದ್ದರು. ಒಟ್ಟು 1300 ಹಾಸಿಗೆಗಳ ಹಾಸಿಗೆ ಸಾಮಥ್ರ್ಯವು ಸಾಮಾನ್ಯ ಔಷಧ, ಸಾಮಾನ್ಯ ಶಸ್ತ್ರಚಿಕಿತ್ಸೆ ಮತ್ತು ಇಎನ್‍ಟಿ, ನೇತ್ರಶಾಸ್ತ್ರ, ಮೂತ್ರಶಾಸ್ತ್ರ, ಪ್ಲಾಸ್ಟಿಕ್ ಸರ್ಜರಿ, ಮನೋವೈದ್ಯಶಾಸ್ತ್ರ ಮತ್ತು ಇತರ ವಿಶೇಷತೆಗಳಲ್ಲಿ ಹಾಸಿಗೆಗಳನ್ನು ಒಳಗೊಂಡಿದೆ. ಇದು ಕಳೆದ ವರ್ಷ ಕೋವಿಡ್-19 ಆಸ್ಪತ್ರೆಯಾಗಿತ್ತು. ಕೋವಿಡ್-19 ರ ಎರಡನೇ ಅಲೆ ಸಮಯದಲ್ಲಿ ಮಿತಿ ಮೀರಿ ವಿಸ್ತರಿಸಿದ ಆಸ್ಪತ್ರೆಯ ಮೂಲಸೌಕರ್ಯವನ್ನು ಮರುನಿರ್ಮಾಣ ಮಾಡಲು ಉಪಕ್ರಮವು ಸಹಾಯ ಮಾಡುತ್ತದೆ ಎಂದು ತಿಳಿಸಿದರು.