ನಂದಿನಿ ಮೈಸೂರು
*ಕಿಚ್ಚನ ಹುಟ್ಟುಹಬ್ಬಕ್ಕೆ ಅರಸು ಕ್ರಿಯೇಷನ್ಸ್ ಉಡುಗೊರೆ..ಆಕಾಶದ ನಕ್ಷತ್ರಕ್ಕೆ ಸುದೀಪ್ ಹೆಸರು ನಾಮಕರ*
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೆಪ್ಟಂಬರ್ 2ರಂದು 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕಿಚ್ಚೋತ್ಸವ ಈಗಾಗಲೇ ಫ್ಯಾನ್ಸ್ ಸಜ್ಜಾಗಿದ್ದಾರೆ. ಈ ಬಾರಿ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅಭಿಮಾನಿಗಳೊಟ್ಟಿಗೆ ತಮ್ಮ ದಿನವನ್ನು ಸಂಭ್ರಮಿಸಲಿದ್ದಾರೆ. ಕಿಚ್ಚನ ಜನ್ಮದ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಗಿದೆ. ನೆಚ್ಚಿನ ಸ್ಟಾರ್ಸ್ ಹುಟ್ಟುಹಬ್ಬಕ್ಕೆ ಕಿಚ್ಚನ ಗುಣಗಾನ ಮಾಡುವ ಸ್ಪೆಷಲ್ ಹಾಡುಗಳು ಯೂಟ್ಯೂಬ್ ಅಂಗಳ ಪ್ರವೇಶಿಸಿವೆ. ಅದರ ಹೊರತಾಗಿ ಅರಸು ಕ್ರಿಯೇಷನ್ಸ್ ಸುದೀಪ್ 50ನೇ ಜನ್ಮೋತ್ಸವಕ್ಕೆ ವಿಶೇಷ ಉಡುಗೊರೆ ನೀಡಿದೆ.
ಕಳೆದ ಎರಡು ವರ್ಷಗಳಿಂದ PRO ಆಗಿ ಕನ್ನಡ ಮಾಧ್ಯಮದ ನಡುವೆ ಕೆಲಸ ಮಾಡುತ್ತಿರುವ ಹರೀಶ್ ಅರಸು ತಮ್ಮದೇ ಅರಸು ಕ್ರಿಯೇಷನ್ಸ್ ನಡಿ ಸುದೀಪ್ ಹುಟ್ಟಹಬ್ಬಕ್ಕೆ ಪ್ರೀತಿಯ ಉಡುಗೊರೆ ನೀಡಿದ್ದಾರೆ. ಆಕಾಶದ ನಕ್ಷತ್ರಕ್ಕೆ ಕಿಚ್ಚ ಸುದೀಪ್ ಎಂದು ನಾಮಕರಣ ಮಾಡಿದ್ದಾರೆ. ಈ ಜಗತ್ತಿನಲ್ಲಿರುವ ರತ್ನಗಳಲ್ಲಿ ನೀನೇ ಅತ್ಯಮೂಲ್ಯ. ಇಂದು ನಕ್ಷತ್ರ ಹುಟ್ಟಿದ ದಿನವನ್ನು ನಾವು ಆಚರಿಸುತ್ತೇವೆ. ಆದರೆ ಆಕಾಶದಲ್ಲಿ ಅಲ್ಲ ಭೂಮಿಯಲ್ಲಿ ಎಂಬ ಅರ್ಥಪೂರ್ಣ ಸಂದೇಶದ ಮೂಲಕ ಕಿಚ್ಚನಿಗೆ ಅರಸು ಕ್ರಿಯೇಷನ್ಸ್ ಮನದುಂಬಿ ಶುಭಾಶಯ ಕೋರಿದೆ.
ಕಿಚ್ಚ ಸುದೀಪ್ ಬರ್ತ್ ಡೇ 46ನೇ ಸಿನಿಮಾದ ಟೈಟಲ್ ರಿವೀಲ್ ಆಗಲಿದೆ. ಮಧ್ಯರಾತ್ರಿ 12ಕ್ಕೆ ಶೀರ್ಷಿಕೆ ಘೋಷಣೆಯಾಗಲಿದೆ. ಈ ಮೊದಲು ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಮಾತ್ರ ಜನ್ಮದಿನ ಆಚರಿಸಿಕೊಳ್ತಾರೆ. ಮನೆ ಬಳಿ ಯಾವುದೇ ಸಂಭ್ರಮ ಇರುವುದಿಲ್ಲ ಎಂದಿದ್ದರು. ಈಗ ಸುದೀಪ್ ಜೆಪಿ ನಗರದಲ್ಲಿಯೂ ಕಿಚ್ಚೋತ್ಸವ ನಡೆಯಲಿದೆ.