ನಂದಿನಿ ಮೈಸೂರು
*ಅರ್ಜುನ್ ಯೋಗಿ-ಸಾರಿಕಾ ರಾವ್ ನಟನೆಯ ‘ಅನಾವರಣ’ ಸಿನಿಮಾದ ಮೊದಲ ಹಾಡು ರಿಲೀಸ್*
ನಮ್ಮ ಸಿನಿಮಾ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್. ರಾಮಚಂದ್ರ, ಸತ್ಯ ರಾಣಿ ಜಿ & ರಚನಾ ಬಿ. ಹೆಚ್ ನಿರ್ಮಾಣದ ಅನಾವರಣ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಏನಾಗಿದೆ ಎಂಬ ಪ್ರೇಮಗೀತೆಗೆ ಶಶಿಕುಮಾರ್ ಬೆಳವಾಡಿ ಸಾಹಿತ್ಯ ಬರೆದಿದ್ದು, ವಿಶಾಲ್ ಸಿ ಕೃಷ್ಣ ಟ್ಯೂನ್ ಹಾಕಿದ್ದಾರೆ. ಅರ್ಜುನ್ ಯೋಗಿ, ಸಾರಿಕಾ ರಾವ್ ಹಾಡಿನಲ್ಲಿ ಮಿಂಚಿದ್ದಾರೆ.
ನಿರ್ದೇಶಕ ಹರೀಶ್ ಕುಮಾರ್ ಮಾತನಾಡಿ, ಇದು ನಮ್ಮ ಹಲವಾರು ವರ್ಷದ ಕನಸು. ನಾನು 15 ವರ್ಷ ರಂಗಭೂಮಿಯಲ್ಲಿ ದುಡಿದೆವು. ಸಿನಿಮಾ ಸೆಳೆತ ಬಂತು. 40 ಕಿರುಚಿತ್ರ ನಿರ್ದೇಶಿಸಿದ್ದೇವೆ. ನಮ್ಮ ಕಥೆ ಒಳ್ಳೆ ಒಮ್ಮತ ಬಂತು. ಹೀಗಾಗಿ ಚಿತ್ರ ಮಾಡಲು ಹೆಜ್ಜೆ ಇಟ್ಟೆವು. ಚಿತ್ರದಲ್ಲಿ ಬರುವ ಹಲವಾರು ವಿಶೇಷತೆಗಳ ಅನಾವರಣ. ನಮ್ಮ ನಿರ್ದೇಶಕರ ಪಯಣಕ್ಕೆ ಅನಾವರಣ. ಒಳ್ಳೆ ಸಾಹಿತ್ಯದ ಅನಾವರಣ, ಇಬ್ಬರು ಬೆನ್ನುತಟ್ಟಿದ ನಿರ್ಮಾಪಕ ಅನಾವರಣ.. ನಮ್ಮದೇ ಕಥೆ ಅನಿಸುವ ಸಿನಿಮಾವಿದು ಎಂದರು.
ನಿರ್ದೇಶಕ ಮಂಜುನಾಥ್ ಮಾತನಾಡಿ, ತುಂಬಾ ಪ್ರೀತಿ ಮಾಡುವವರು, ತುಂಬಾ ಪ್ರೀತಿಯಾದರೆ ಯಾವ ರೀತಿ, ಕಾಟ, ಭಾದೆ ಇರುತ್ತದೆ ಅನ್ನುವುದನ್ನು ಸಿನಿಮಾದಲ್ಲಿ ತೋರಿಸಿದ್ದೇವೆ ಎಂದರು.
ಅರ್ಜುನ್ ಯೋಗಿ ಮಾತನಾಡಿ, ನನ್ನ ಹಿಂದಿನ ಸಿನಿಮಾ ಚೇಸ್ ನೋಡಿ ಕಾಲ್ ಮಾಡಿದ್ದರು. ಚಿತ್ರ ರಿಲೀಸ್ ದಿನ ನಮ್ಮ ಕೆಲಸ ನೋಡಿ ಮೆಚ್ಚಿ ಇನ್ನೊಂದು ಕೆಲಸ ಕೊಡ್ತಾರೆ ಅದೇ ಖುಷಿ ವಿಚಾರ. ಅನಾವರಣ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ಅವರು ಏನ್ ಕಥೆ ಹೇಳಿದ್ದರು ಅದಕ್ಕಿಂತ ದುಪ್ಪಟ್ಟಾಗಿ ಸಿನಿಮಾ ಮೂಡಿಬಂದಿದೆ. ಗ್ಲಿಂಪ್ಸ್, ಟ್ರೇಲರ್ ನೋಡಿದ್ದೇನೆ. ಈ ತಂಡ ಗೆದ್ದರೆ ಇನ್ನೊಂದಿಷ್ಟು ಸಿನಿಮಾಗಳು ಹುಟ್ಟಿಕೊಳ್ಳುತ್ತದೆ. ತುಂಬಾ ಚೆನ್ನಾಗಿ ಕಥೆ ಕಟ್ಟಿದ್ದಾರೆ. ನನಗೆ ಬಹಳ ಇಷ್ಟವಾಗಿದೆ. ನಾನು ಸಾಫ್ಟ್ ವೇರ್ ಇಂಜಿನಿಯರ್ ಪಾತ್ರ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ ಎಂದರು.
ನಟಿ ಸಾರಿಕಾ ಮಾತನಾಡಿ, ತುಂಬಾ ಪೊಸೆಸಿವ್ ನೆಸ್ ಆಗಿರುವ ಹುಡುಗಿ ಪಾತ್ರ ನನ್ನದು. ನಿಮಗೆ ಎಲ್ಲರಿಗೂ ಕೋಪ ಬರುತ್ತದೆ ಅಂತಹ ಕಾರೆಕ್ಟರ್. ಗಂಡ ಎಲ್ಲಿ ಹೋಗಲಿ ಬಿಡ್ಲಿ ಅವನಿಗೆ ಅಷ್ಟು ಟಾರ್ಚರ್ ಕೊಟ್ಟಾಗಿ ಬಿಟ್ಟಿದ್ದೇನೆ. ಶೂಟಿಂಗ್ ಸೆಟ್ ನಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದೇನೆ. ಶೂಟಿಂಗ್ ಅನಿಸುತ್ತನೆ ಇರಲಿಲ್ಲ. ಹಾಲಿಡೇ ತರ ಇತ್ತು. ಮಂಜು ಸರ್ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ನಿಮ್ಮ ಆಶೀರ್ವಾದ ನಮ್ಮ ಇಡೀ ತಂಡದ ಮೇಲೆ ಇರಬೇಕು ಎಂದರು.
ಅರ್ಜುನ್ ಯೋಗಿ, ಸಾರಿಕಾ ರಾವ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ,ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರತಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ ತಾರಾಬಳಗದಲ್ಲಿದ್ದಾರೆ. ಆಗಿದೆ. ಹರೀಶ್ ಕುಮಾರ್, ಮಂಜುನಾಥ್ ಪಿಳ್ಳಪ್ಪ ಇಬ್ಬರು ಅನಾವರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ವೆಂಕಿ ಸಂಕಲನ, ಶಶಿಕುಮಾರ್ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ವಿಶಾಲ್ ಸಿ ಕೃಷ್ಣ ಸಿನಿಮಾಕ್ಕಿದೆ. ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಾವರಣ ಶೂಟಿಂಗ್ ಮುಗಿಸಿ ಸೆನ್ಸಾರ್ ಅಂಗಳ ಹೋಗಲು ರೆಡಿಯಾಗಿದೆ.