ಮೈಸೂರು:19 ಸೆಪ್ಟೆಂಬರ್ 2021
೨೦ ನಿಮಿಷದ ಕಬ್ಬಡಿ ಆಟದ ಅಂತ್ಯದಲ್ಲಿ ೨೨ ಅಂಕಗಳಿಸುವ ಮೂಲಕ ಪ್ರೇರಣ ಮೋಟಾರ್ಸ್ ನ ಬಿಎಸ್ ೬ ರಿಜೇನ್ರೇಷನ್ ನ ಸಂತೋಷ್ ತಂಡ ಗೆಲುವು ಸಾಧಿಸಿತು.
ಗ್ಲೋಬಲ್ ಡಿಸೇಲ್ ಇಂಜಿನಿಯರ್ಸ್ ಸಹಕಾರದೊಂದಿಗೆ ಪ್ರೇರಣಾ ಮೋಟಾರ್ಸ್ ಪ್ರೈವೈಟ್ ಲಿಮಿಟೆಡ್( ಟಾಟಾ ಮೋಟಾರ್ಸ್) ನಿಂದ ಪೆವಿಲಿಯನ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಒಂಭತ್ತು ತಂಡಗಳು ಭಾಗವಹಿಸಿದ್ದವು. ಪ್ರೇರಣ ಮೋಟಾರ್ಸ್ ನ ಬಿಎಸ್ ೬ ರಿಜೇನ್ರೇಷನ್ ನ ಸಂತೋಷ್ ತಂಡ ಹಾಗೂ
ಸಿಎನ್ ಜಿ ಲಯನ್ಸ್ ತಂಡ ಅಂತಿಮವಾಗಿ ಸೆಣಸಾಡಿದವು. ಈ ಪೈಕಿ ೧೨ ಅಂಕಗಳಿಸಿದ ಸಿಎನ್ ಜಿ ಲಯನ್ಸ್ ತಂಡ ಸೋಲು ಕಂಡರೆ,
ಎದುರಾಳಿ ತಂಡಕ್ಕೆ ೧೨ ತಂಡ ಪಡೆದುಕೊಂಡಿತು. ಪ್ರೇರಣ ಮೋಟಾರ್ಸ್ ನ ಬಿಎಸ್ ೬ ರಿಜೇನ್ರೇಷನ್ ತಂಡ ೨೨ ಅಂಕ ಪಡೆದು ಗೆದ್ದು ಬೀಗಿತು.
ಪ್ರೇರಣ ಮೋಟಾರ್ಸ್ ನ ವಿಭಾಗೀಯ ಮ್ಯಾನೇಜರ್ ಬಿ.ಎನ್.ರಾವ್, ಎಚ್.ಆರ್. ಅರುಣ್, ಗೆದ್ದ ತಂಡದ ನಾಯಕ ಸಂತೋಷ್, ನಾಗೇಶ್, ಮಹೇಂದ್ರ, ಮಹದೇವ, ಅಭಿಲಾಶ್, ಶಂಕರ್, ಎಂ.ಮಂಜುನಾಥ್, ಎಂ.ಸುಹಾಸ್, ಗ್ಲೋಬಲ್ ಡಿಸೇಲ್ ಇಂಜಿನಿಯರ್ಸ್ ನ ವೆಂಕಟೇಗೌಡ, ರಾಜೀವ್, ಕಾಂತರಾಜು ಇನ್ನಿತರರು ಉಪಸ್ಥಿತರಿದ್ದರು.