ಡೈರೆಕ್ಟರ್ ಸ್ಮೈಲ್ ಶ್ರೀನು ಜೊತೆ “ಓ ಮೈ ಲವ್” ಅಂತ ಫೀಲ್ಮ ಫೀಲ್ಡ್ಗೆ ಎಂಟ್ರಿ ಕೊಟ್ಟ ಅಕ್ಷಿತ್ ಶಶಿಕುಮಾರ್

 

ಮೈಸೂರು:7 ಜುಲೈ 2022

ನಂದಿನಿ ಮೈಸೂರು

ಪ್ರಾರಂಭ ಚಿತ್ರದ ಹುಡುಗಿ ಸನಾಧಿ ಅಪ್ಪಣ್ಣ ಮರಿ ಮೊಮ್ಮಗಳು ಕೀರ್ತಿ ಕಲ್ಕೆರಿ ಜೊತೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿರುವ ಸುಪ್ರೀಮ್ ಹೀರೋ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಜುಲೈ 15 ಕ್ಕೆ ಓ ಮೈ ಲವ್ ಅಂತಿದ್ದಾರೆ.

ಸಾಲು ಸಾಲಾಗಿ ಒಂದರ ಹಿಂದೆ ಮತ್ತೊಂದರಂತೆ ಹೊಸ ಪರಿಚಯದ ಮೂಲಕ ನಟ ನಟಿಯರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತೀದ್ರೇ.ಇತ್ತ ಹಿರಿಯ ನಟರ ಮಕ್ಕಳು ಕೂಡ ಸಿನಿ ಜರ್ನಿ ಆರಂಭಿಸಿದ್ದಾರೆ.

ಜೆಸಿಬಿ ಪ್ರೋಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಜಿ .ರಾಮಾಂಜಿನಿ ನಿರ್ಮಾಣದ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ.ಸ್ಮೈಲ್ ಶ್ರೀನು ಚಿತ್ರ ನಿರ್ದೇಶಿಸಿದ್ದಾರೆ.
ಸುಪ್ರಿಮ್ ಹಿರೋ ಶಶಿಕುಮಾರ್ ಪುತ್ರ
ಅಕ್ಷಿತ್‌ ಶಶಿಕುಮಾರ್ ಹಾಗೂ ಕೀರ್ತಿ ಕಲ್ಕೆರಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ , ರಿಯಲ್ ಸ್ಟಾರ್ ಉಪೇಂದ್ರ , ತೆಲುಗು ಚಿತ್ರರಂಗದ ಐಪಿಎಸ್ ಅಧಿಕಾರಿ ಸಿನಿಮಾಬ್ರಹ್ಮ ಕೆ.ರಾಘವೇಂದ್ರರಾವ್ , ಮಾಜಿ ಪೊಲೀಸ್ ಆಯುಕ್ತರಾದ , ಭಾಸ್ಕರ್ ರಾವ್ ಹಾಡು ಹಾಗೂ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ . ಇದೀಗ ರಾಜಕೀಯ ಧುರೀಣ ಶ್ರೀರಾಮುಲು ‘ ಓ ಮೈ ಲವ್ ‘ ಟ್ರೇಲರ್ ಬಿಡುಗಡೆ ಮಾಡಿಕೊಟ್ಟು ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ .

ಚಿತ್ರದ ಎಲ್ಲಾ ಹಾಡುಗಳಿಗೆ ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ . ಮುರಳಿ ನೃತ್ಯ ನಿರ್ದೇಶನ ಹಾಡುಗಳಿಗಿದೆ . ಎಸ್.ನಾರಾಯಣ್ , ಸಾಧುಕೋಕಿಲ , ದೇವಗಿಲ್ , ಟೆನ್ನಿಸ್ ಕೃಷ್ಣ , ಪವಿತ್ರಾ ಲೋಕೇಶ್ ಹಾಗೂ ಸಂಗೀತಾ , ದೀಪಿಕಾ ಆರಾಧ್ಯ , ಪೃಥ್ವಿರಾಜ್ , ಆನಂದ್ , ಶಿಲ್ಪಾ ರವಿ , ಭಾಗ್ಯಶ್ರೀ , ರಾಮ್ ಕುಮಾರ್ ಸೇರಿದಂತೆ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ . ಎ 2 ಮ್ಯೂಸಿಕ್ ಯೂಟ್ಯೂಬ್ ಚಾನಲ್’ನಲ್ಲಿ ಈ ಚಿತ್ರದ ಹಾಡುಗಳು ಹಾಗೂ ಟೇಲರ್ ಬಿಡುಗಡೆಯಾಗಿದೆ.

ನನ್ನ ತಂದೆ ಚಿತ್ರರಂಗಕ್ಕೆ ಬಂದು ಕಟ್ಟಪಟ್ಟು ದುಡಿದು ಸುಪ್ರೀಮ್ ಹೀರೋ ಎಂದೆನಿಸಿಕೊಂಡಿದ್ದಾರೆ.ಚಿತ್ರೀಕರಣ ಸಮಯದಲ್ಲಿ ಒಂದು ಬಾರಿಯೂ ನನ್ನಪ್ಪ ಬರಲಿಲ್ಲ.
ಯಾಕಂದ್ರೇ ನೀನೇ ಎಲ್ಲವನ್ನೂ ಕಟ್ಟಪಟ್ಟು ಕಲಿಬೇಕು ಅನ್ನೋದು ಅವರ ಆಸೆ.ಫೈಟಿಂಗ್ ಚಿತ್ರೀಕರಣ ವೇಳೆ ನನ್ನ ಕೈ ಬೆರಳಿನ ಮೂಳೆ ನಾಲ್ಕು ಚೂರಾಗಿತ್ತು.ಆಪರೇಶನ್ ಮಾಡಿಸುವಂತೆ ಡಾಕ್ಟರ್ ಹೇಳಿದ್ದಾರೆ.ಇನ್ನೂ ಮಾಡಿಸಿಲ್ಲ.ನನ್ನಪ್ಪನಿಂದ ನಾನೂ ಕಲಿತಿದ್ದು ಅವರ ಗುಡ್ ಲುಕ್.ಯಾರ ಬಳಿ ಹೇಗೆ ಮಾತಾಡಬೇಕು ಅಂತ ಕಲಿತಿದ್ದೀನಿ.
ನನ್ನ ಮೊದಲ ಸಿನಿಮಾ ಓ ಮೈ ಲವ್.ಅಪ್ಪನಿಗೆ ಜನ ಯಾವ ರೀತಿ ಪ್ರೋತ್ಸಾಹ ನೀಡಿದರೋ ಹಾಗೇಯೇ ನನಗೂ ಒಂದು ಅವಕಾಶ ಕೊಡಿ ಎಂದು ಜನರಿಗೆ ನಟ ಅಕ್ಷಿತ್ ಶಶಿಕುಮಾರ್ ರಿಕ್ವೆಸ್ಟ್ ಮಾಡಿದ್ದಾರೆ.

ಒಬ್ರೂ ಒಬ್ಬರನ್ನ ಲವ್ ಮಾಡಿದ್ರೇ ನೋವಾಗುತ್ತೆ.ಒಬ್ರೂ ಎಲ್ಲರನ್ನೂ ಲವ್ ಮಾಡಿದ್ದಾರೆ ಖುಷಿಯಾಗಿರ್ತ್ತಾರೆ ಅಂತ ಸಿನಿ ರಸಿಕರಿಗೆ ಓ ಮೈ ಲವ್ ಚಿತ್ರದ ಮೂಲಕ ಹೇಳಲು ಹೊರಟಿದ್ದೇನೆ ಅಂತಾರೇ ನಿರ್ದೇಶಕ ಸ್ಮೈಲ್ ಶ್ರೀನು.

Leave a Reply

Your email address will not be published. Required fields are marked *