ಮೈಸೂರಿನ ಶಿಲ್ಪಿ ಬಿ ಎಸ್ ಯೋಗಿರಾಜ್ ರವರಿಗೆ ” ಜಕಣಾಚಾರಿ ಪ್ರಶಸ್ತಿ “

 

ಮೈಸೂರು:23 ಆಗಸ್ಟ್ 2021

ನ@ದಿನಿ

ಆಗಸ್ಟ್ 18 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2019-20ನೇ ಸಾಲಿನ ವಾರ್ಷಿಕ ಪ್ರಶಸ್ತಿಯಲ್ಲಿ ನನಗೆ ಜಕಣಾಚಾರಿ ಪ್ರಶಸ್ತಿ ಲಭಿಸಿದೆ ಎಂದು ಶಿಲ್ಪಿ ಬಿ ಎಸ್ ಯೋಗಿರಾಜ್ ರವರು ಹರ್ಷ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸಿದರು.ಕರ್ನಾಟಕ ಶಿಲ್ಪಗಳ ತವರೂರು.
ನಾಡಿನಾದ್ಯಂತ ಸುಂದರ ಶಿಲ್ಪಗಳನ್ನು ಮಂದಿರಗಳಲ್ಲಿ ಕಾಣಬಹುದು. ಇಂತಹ ಒಂದು ಪರಂಪರೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕನ್ನಡ ನಾಡಿನ ಅಮರಶಿಲ್ಪಿ ಎಂದೇ ಖ್ಯಾತಿ ಪಡೆದ ಜಕಣಾಚಾರಿಯ ಹೆಸರಿನಲ್ಲಿ ಶಿಲ್ಪಿಗಳಿಗೆ ಪ್ರಶಸ್ತಿ ನೀಡಲು 1995ರಲ್ಲಿ ಸರ್ಕಾರ ನಿರ್ಧರಿಸಿತು. ಈ ಬಾರೀ ನನ್ನ ಶಿಲ್ಪ ಸೇವೆಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.5 ಲಕ್ಷ ನಗದು ಬಹುಮಾನ ಲಭಿಸಿದೆ ಎಂದು ಶಿಲ್ಪಿ ಬಿ ಎಸ್ ಯೋಗಿರಾಜ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ಖುಷಿ ಹಂಚಿಕೊಂಡರು.

ಸುಮಾರು ಐದು ತಲೆಮಾರುಗಳಿಂದ ಶಿಲ್ಪ ಕಲೆಯನ್ನೇ ಮುಂದು ವರೆಸಿಕೊಂಡು ಬಂದಿದೆ.
ಯೋಗಿರಾಜ್ ಅವರು ಮಕ್ಕಳಿಗೆ ಆ ವೃತ್ತಿಯನ್ನು ಧಾರೆ ಎರೆದಿದ್ದಾರೆ .ತಂದೆಯವರಿಗೆ ಜಕಣಾಚಾರಿ ಪ್ರಶಸ್ತಿ ಲಭಿಸಿದೆ.ಅವರ ಶ್ರಮಕ್ಕೆ ಸಿಕ್ಕ ಫಲ.ನಾವು ಒಂದು ಶಾಲೆ ಆರಂಬಿಸಿದ್ದೇವೆ.ಆಸಕ್ತರು ಬರುತ್ತಾರೆ.ಕೆಲವರಿಗೆ ಊಟ ವಸತಿ ವ್ಯವಸ್ಥೆ ಕೂಡ ಮಾಡಿಕೊಡುತ್ತಿದ್ದೇವೆ.
ಒಂದುವರೆ ವರ್ಷಗಳ ಕಾಲ ತರಭೇತಿ ನೀಡುತ್ತೇವೆ.
ನಂತರ ಅವರ ಊರುಗಳಿಗೆ ತೆರಳಿ ಸ್ವಂತ ಉದ್ಯೋಗ ಮಾಡುವ ಮೂಲಕ ಜೀವನ ಕಟ್ಟಿಕೊಳ್ಳುತ್ತಿದ್ದಾರೆ.
ನಾನು ತಂದೆಯಂತೆ ಶಿಲ್ಪಿಯಾಗಿದ್ದೇನೆ.
ಶಂಕರಾಚಾರ್ಯರ ಪ್ರತಿಮೆ ನಿರ್ಮಿಸಿಕೊಡುವಂತೆ
ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ರು.ಅದರಂತೆ ಶಂಕರಾಚಾರ್ಯರ ಶಿಲೆಯನ್ನ ನಿರ್ಮಿಸಿ ಕಳುಹಿಸಿಕೊಟ್ಟಿದ್ದೇವೆ.
ಸೆಪ್ಟೆಂಬರ್ ನಲ್ಲಿ ಪ್ರದಾನಿರವರು ಲೋಕಾರ್ಪಣೆ ಮಾಡಲಿದ್ದಾರೆ‌.ಆ ಕ್ಷಣಕ್ಕಾಗಿ ನಾನು ಕಾತುರದಿಂದ ಕಾಯುತ್ತಿದ್ದೇನೆ.ಇದು
ಕರ್ನಾಟಕಕ್ಕೆ ಹೆಮ್ಮೆ ತರುವ ವಿಚಾರ ಎಂದು ಅರುಣ್ ಯೋಗಿರಾಜ್ ಸಂತಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *