ಕೋವಿಡ್ ನಿಂದ ಮೃತಪಟ್ಟ ಮಡಿವಾಳ ಕುಟುಂಬದ ಸದಸ್ಯರಿಗೆ ಧನ ಸಹಾಯ ವಿತರಣೆ

 

ಮೈಸೂರು:23 ಆಗಸ್ಟ್ 2021

ನ@ದಿನಿ

ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಹಾಗೂ ಮೈಸೂರು ಕುಕ್ಕರಹಳ್ಳಿ ಮಡಿವಾಳ ಮಡಿ ಕಟ್ಟೆ ಇವರ ವತಿಯಿಂದ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಮಡಿವಾಳರ ಕುಟುಂಬದ ಸದಸ್ಯರಿಗೆ ಹಾಗೂ ವಿವಿಧ ರೀತಿಯ ಸಂಕಷ್ಟದಲ್ಲಿರುವವರಿಗೆ ಧನಸಹಾಯವನ್ನು ವಿತರಿಸಲಾಯಿತು.

ಈ ಸಂದರ್ಭ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಪ್ರಕಾಶ್, ಕಾರ್ಯದರ್ಶಿ ದೀಪಕ್, ಖಜಾಂಜಿ ಧನರಾಜ್, ಉಪಾಧ್ಯಕ್ಷರಾದ ಮಹಾಲಿಂಗಯ್ಯ, ಪ್ರಚಾರಸಮಿತಿ ಅಧ್ಯಕ್ಷ ಪ್ರಭಾಕರ್ ,ಮಂಡ್ಯ ಮಡಿವಾಳ ಜಿಲ್ಲಾ ಸಂಘದ ಅಧ್ಯಕ್ಷ ಗುರುರಾಜ್ ಹಾಗೂ ಮೈಸೂರಿನ ಕುಕ್ಕರಹಳ್ಳಿ ಕೆರೆ ಮಡಿ ಕಟ್ಟೆಯ ಸಂಘದ ಮುಖಂಡರುಗಳಾದ ಚೌಡಯ್ಯ, ಆನಂದ್, ಶಂಕರ್ ,ಶ್ರೀನಿವಾಸ್. ಸಿದ್ದರಾಜು ,ರಮೇಶ್, ರಾಜು, ಮಂಜು ಸೇರಿದಂತೆ ಸಮಾಜದ ಬಂಧುಗಳು ಹಾಗೂ ಮಹಿಳಾ ಸಂಘದ ಸದಸ್ಯರುಗಳು ಹಾಜರಿದ್ದರು. ಸಂದರ್ಭದಲ್ಲಿ 5 ಕುಟುಂಬಗಳಿಗೆ ತಲಾ ಸಾವಿರ ರೂಪಾಯಿ ಹಾಗೂ ಕಷ್ಟದಲ್ಲಿರುವ ಎರಡು ಕುಟುಂಬಗಳಿಗೆ ತಲಾ ಎರಡು ಸಾವಿರದ ಐನೂರು ರೂಪಾಯಿಯನ್ನು ವಿತರಿಸಲಾಯಿಿತು.

ಚಿತ್ರ : ರಾಜೇಶ್ .M.N.

Leave a Reply

Your email address will not be published. Required fields are marked *