ಸಿದ್ದರಾಮಯ್ಯ ಹುಟ್ಟುಹಬ್ಬ ಅಂಗವಾಗಿ ಅಂಗವಿಕಲರಿಗೆ ವೀಲ್ ಛೇರ್ ವಿತರಣೆ

ಮೈಸೂರು:23 ಆಗಸ್ಟ್ 2021

ನ@ದಿನಿ

ಮಾಜಿ ಸಿಎಂ ಸಿದ್ದರಾಮಯ್ಯ ರವರ ಜನ್ಮದಿನದ ಅಂಗವಾಗಿ ಯತೀಂದ್ರ ಸಿದ್ಧರಾಮಯ್ಯರವರ ಅಭಿಮಾನಿ ಬಳಗದ ವತಿಯಿಂದ ಅಧ್ಯಕ್ಷ ರಾದ ಕೆಪಿಸಿಸಿ ಓಬಿಸಿ ಕಾರ್ಯದರ್ಶಿ ಹರೀಶ್ ಮೊಗಣ್ಣರವರ ನೇತೃತ್ವದಲ್ಲಿ ಅಂಗವಿಕಲರಿಗೆ ವೀಲ್ ಛೇರ್ ನನ್ನು ವಿತರಿಸಲಾಯಿತು.

ವರುಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ರವರು ವೀಲ್ ಚೇರ್ ವಿತರಿಸಿದರು.

ನಂತರ ಮಾತನಾಡಿದ ಯತೀಂದ್ರ ಸಿದ್ಧರಾಮಯ್ಯ ತಂದೆಯ ಹುಟ್ಟುಹಬ್ಬ ವನ್ನು ರಾಜ್ಯಾದ್ಯಂತ ಆಚರಿಸಲಾಗಿದೆ ಇವರಿಗೆಲ್ಲಾ ಚಿರರುಣಿ. ಸ್ನೇಹಿತನಾದ ಹರೀಶ್ ಮೊಗಣ್ಣ ರವರು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದಾರೆ,,ಈ ದಿನ ತೊಣಚಿಕೊಪ್ಪಲು ಗ್ರಾಮದಲ್ಲಿ ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಹಾಗೂ ಅಂಗವಿಕಲರಿಗೆ ವೀಲ್ ಚೇರ್ ವಿವರಿಸಿದ್ದೇನೆ, ಇಂತಹ ವಿಶೇಷ ಕಾರ್ಯಕ್ರಮಗಳು ಮತ್ತಷ್ಟು ಹೆಚ್ಚಬೇಕೆಂದರು.

ತದನಂತರ ಮರೀಗೌಡರು ಮಾತನಾಡಿ ಸಿದ್ದರಾಮಯ್ಯ ರವರು ಅಂಗವಿಕಲರಿಗಾಗಿ ಸಾಕಷ್ಟು ಯೋಜನೆಗಳನ್ನು ನೀಡಿದರು,ಅವುಗಳು ಮುಂದುವರೆಯಬೇಕೆಂದರು.

ಇದೇ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷ ಮರೀಗೌಡ್ರು,ಎಂ ಕೆ ಸೋಮಶೇಖರ್ , ಜಿಲ್ಲಾಧ್ಯಕ್ಷರಾದ ಬಿ ಜೆ ವಿಜಯ್ ಕುಮಾರ್,ಯಜಮಾನ್ ಜವರಪ್ಪ, ಕಾಂಗ್ರೆಸ್ ಮುಖಂಡರಾದ ಹರೀಶ್ ಗೌಡ, ಆರಕ್ಷಕ ನಿರೀಕ್ಷಕರಾದ ತಿಮ್ಮರಾಜು, ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಶಿವರಾಂ,ಗುಡ್ಡಪ್ಪಂದಿರಾದ ಬೀರಲಿಂಗಣ್ಣ,ಶೀವಬೀರ,ಲೋಕೇಶ್,ಆರ್ ಕೆ ರವಿ,ಚಿಕ್ಕಚಿಕ್ಕಣ್ಣ,ವಕೀಲರಾದ ಚರಣ್ ರಾಜ್,ರವಿ,ರಾಜು,,ನಂಜುಂಡೇಗೌಡ,ಮಹದೇವು,ವಿಕ್ಕಿ ವಾಸು,ಕುಮಾರ್,ಪೈ ಬೀರೇಶ್,ರಘುರಾಂ,ದರ್ಶನ್,ಶಿವರಾಜ್, ನಾಗರಾಜು,ಸುರೇಶ್, ಪವನ್ ,ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *