ಗ್ಯಾಂಗ್ ರೇಪ್ ಮೈಸೂರಿಗೆ ಕಪ್ಪು ಚುಕ್ಕೆ,ಗೃಹ ಸಚಿವರು ಚೈಲ್ಡಿಸ್ಟ್ :ಸಿದ್ದರಾಮಯ್ಯ

ಮೈಸೂರು:1 ಸೆಪ್ಟೆಂಬರ್ 2021

ನ@ದಿನಿ

ಗ್ಯಾಂಗ್ ರೇಪ್ ಮೈಸೂರಿಗೆ ಕಪ್ಪು ಚುಕ್ಕೆ,ಗೃಹ ಸಚಿವರು ಚೈಲ್ಡಿಸ್ಟ್ ಆಗಿ ವರ್ತಿಸಿದ್ದಾರೆ.ಸರ್ಕಾರದಿಂದಲೇ ಗ್ಯಾಂಗ್ ರೇಪ್ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿದರು.

ಮೈಸೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಮುರಿದು ಬಿದ್ದಿದೆ ಕಾನೂನು ವ್ಯವಸ್ಥೆ ಸರಿ ಮಾಡಲು ಸರಕಾರವಾಗಲಿ, ಪೊಲೀಸ್ ನವರಾಗಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಕೃತ್ಯ ನಡೆದ ಸ್ಥಳ ಮುಖ್ಯ ರಸ್ತೆಯಿಂದ 70 -80 ಮೀಟರ್ ದೂರವಿದೆ, ರಿಂಗ್ ರಸ್ತೆಯೂ 400 ಮೀಟರ್ ಒಳಗೆ ಇದೆ ಈ ವರೆಗೂ ಘಟನೆ ನಡೆದ ಸ್ಥಳ ಯಾರದ್ದು ಅಂತಾ ಈ ವರೆಗೂ ಗೊತ್ತಿಲ್ಲ. ಪೊಲೀಸರು ಕೇಳಿದ್ರೆ ಮುಡಾ ಗೆ ಪತ್ರ ಬರೆದಿದ್ದೇವೆ ಉತ್ತರ ಬಂದಿಲ್ಲ ಅಂತಾರೇ. ಆ ಜಾಗದಿಂದ ರಿಂಗ್ ರಸ್ತೆಗೆ ಎಷ್ಟು ದೂರ ಇದೆ ಅಂತಾ ಇವತ್ತಿನ ವರೆಗೂ ಅಳತೆ ಮಾಡಿಸಿಲ್ಲ. ಕಲ್ಲಿನಲ್ಲಿ ಹೊಡೆದಿದ್ದಾರೆ ತಲೆ ಭಾಗಕ್ಕೆ ಅಂತಾ ಆ ಯುವಕ ಸ್ಟೇಟ್ ಮೆಂಟ್ ಕೊಟ್ಟಿದ್ದಾನೆ. ಆ ಹುಡುಗಿಯನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದಾನೆ ಆ ಹುಡುಗ. ಸ್ಟೇಟ್ ಮೆಂಟ್ ಹಲ್ಲೆ ಮತ್ತು ರೇಪ್ ಮಾಡಿದ್ದಾರೆ ಅಂತಾ ಕೊಟ್ಟಿದ್ದಾರೆ.
ಆಸ್ಪತ್ರೆ ಅವ್ರು ಇಬ್ಬರನ್ನೂ ಅಡ್ಮಿಟ್ ಮಾಡಿಕೊಂಡು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರಿಗೆ 9 ರಿಂದ 10 ಗಂಟೆಗೆ ಪೊಲೀಸರಿಗೆ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಪೊಲೀಸವ್ರು ಮುಂಜಾನೆ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ ಅಂತಾರೇ. ಸುಮಾರು 15 ಗಂಟೆಗಳ ಕಾಲ ಅಂತರದ ಬಳಿಕ ಎಫ್ ಐ ಆರ್ ದಾಖಲಾಗಿದೆ.
ಪೊಲೀಸವ್ರು ಪ್ರಕರಣವನ್ನ ದಾಖಲು ಮಾಡಲು ವಿಳಂಬ ಮಾಡಿದ್ದಾರೆ.ಇದು ಸಾಕಷ್ಟು ಅನುಮಾನ ಮೂಡಿಸಿದೆ‌ ಎಂದು ಸಿದ್ದರಾಮಯ್ಯ ಹೇಳಿದರು.

ಸಂತ್ರಸ್ತೆ ಜೊತೆ ಇದ್ದ ಹುಡುಗ ನ ಹೆಸರು ಅಪ್ಪಯ್ಯ ಅಂತಾ, ಹುಡುಗ ನ ಹೆಸರು ಹೇಳಬಹುದು. ಹುಡುಗಿ ಹೆಸರು ಹೇಳಬಾರದು ಹುಡುಗ ನ ಹೆಸರು ಹೇಳಬೇಡಿ ಎಂದು ಮಂಜುಳ ಮಾನಸ ಹಾಗೂ ಶಾಸಕ ತನ್ವೀರ್ ಸೇಠ್  ಪಕ್ಕದಲ್ಲಿ  ಹೇಳಿದ್ದಕ್ಕೆ ಗರಂ ಆದ ಸಿದ್ದರಾಮಯ್ಯ ಯಾವನೂ ಹೇಳಿದ್ದು ಹೆಸರು ಹೇಳಬಾರದು ಅಂತಾ, ಹುಡುಗಿ ಹೆಸರು ಹೇಳಬಾರದು. ಹುಡುಗ ನ ಹೆಸರು ಹೇಳಬಹುದು ಎಂದ ಸಿದ್ದರಾಮಯ್ಯ.ಈ ವರೆಗೂ ಆ ಸಂತ್ರಸ್ತೆಯ ಹೇಳಿಕೆ ಪಡೆದಿಲ್ಲ.ಸೆಕ್ಷನ್ 164 ಪ್ರಕಾರ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ಹೇಳಿಕೆ ಪಡೆದಿಲ್ಲ. ಹೇಳಿದ್ರೆ ಶಾಕ್ ನಲ್ಲಿ ಇದ್ರು ಹೀಗಾಗಿ ಸ್ಟೇಟ್ ಮೆಂಟ್ ಪಡೆದಿಲ್ಲ ಅಂತಾರೇ ಸಂತ್ರಸ್ತೆ ಅಪ್ಪ ಕೂಡ ಹೇಳಿಕೆಯನ್ನ ಕೊಡಿಸಲು ಮುಂದಾಗಿಲ್ಲ ಅಂದ್ರು. ಕಡ್ಡಾಯವಾಗಿ ಸಂತ್ರಸ್ತೆಯ ಹೇಳಿಕೆ ಪಡೆಯಬೇಕಿತ್ತು.
ಯಾವಾಗ ಹೇಳಿಕೆ ಕೊಡಲಿಲ್ಲ ಅಂತಾ ಸಂತ್ರಸ್ತೆ ವಿರೋಧ ವ್ಯಕ್ತಪಡಿಸಿದ್ದಳೋ, ಅವಾಗ ಆಕೆಯ ಮೇಲೆ ಕೇಸ್ ಮಾಡಬಹುದಿತ್ತು.ಕಾನೂನಿನ ಅಡಿಯಲ್ಲಿ ಅವಕಾಶ ಇದೆ‌.ಸ್ಟೇಟ್ ಮೆಂಟ್ ನೀಡಲು ವಿರೋಧಿಸಿದ್ರು ಅಂತಾ ಬಲವಂತ ಮಾಡಿ ಅಂತಾ ಹೇಳಲ್ಲ.ಆದ್ರೆ ಆಕೆಯನ್ನ ಮನವೊಲಿಸಿ ಸ್ಟೇಟ್ ಮೆಂಟ್ ಪಡೆಯಬಹುದಿಲ್ಲ‌.ಪೊಲೀಸರು ಇದ್ಯಾವುದನ್ನೂ ಮಾಡಿಲ್ಲ‌‌.ಇದು ಪೊಲೀಸ್ ಇಲಾಖೆಯ ವೈಫಲ್ಯ ತೋರಿಸುತ್ತದೆ.

ಹೋಂ ಮಿನಿಸ್ಟರ್ ಮೇಜರ್ ಕ್ರೈಂ ಆಗಿದೆ ಅಂತಾ ಬೆಂಗಳೂರಿನಲ್ಲಿ ಹೇಳಿ ಮೈಸೂರಿಗೆ ಬರ್ತಾನೆ. ಆದ್ರೆ ಬಂದು ಮಾಡಿದ್ದೇನೆ‌ ಬಂದು ಆಲ್ಟ್ ಆದ್ರೂ, ಪೊಲೀಸ್ ಅಕಾಡೆಮಿಗೆ ಹೋದ್ರು, ಗನ್ ಇಡ್ಕೊಂಡು ಪೋಸ್ಚಕೊಟ್ರು, ಆ ಮೇಲೆ ಸ್ಥಳಕ್ಕೆ ಹೊಗ್ತಾರೆ.
ಆಮೇಲೆ ಗೃಹ ಸಚಿವರು ಚೆಲ್ಡಿಸ್ಟ್ ಸ್ಟೇಟ್ ಮೆಂಟ್ ಕೊಡ್ತಾರೆ‌.

ಆ ಹೆಣ್ಣು ಮಕ್ಕಳು ಇಲ್ಲಿ ಯಾಕೆ ಬಂದ್ರು ಅಂತಾರೇ. ಕೂಡಲೇ ಬೇಜವಬ್ದಾರಿ ಹೋಂ ಮಿನಿಸ್ಟರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು .
ಸರಕಾರ ಬೇಜವಾಬ್ದಾರಿ ಪ್ರದರ್ಶನ ಮಾಡಿದೆಗೃಹ ಸಚಿವರು ಮೈಸೂರಿಗೆ ಬರುತ್ತಾರೆಬಂದು ಮಾಡಿದ್ದು ಏನೂ?
ಕಾರ್ಯಕ್ರಮ ಕ್ಕೆ ಹೋಗಿ ಫೋಸ್ ನೀಡಿದ್ದರು.ಎಲ್ಲಾ ಮುಗಿದ ಮೇಲೆ ಘಟನಾ ಸ್ಥಳಕ್ಕೆ ಹೋದರು.ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಆರೋಪಿಗಳ ಹಿಡಿದಿದ್ದಕ್ಕೆ ಅಭಿನಂದನೆಗಳ ಸುರಿ ಮಳೆ ಬಂದಿದೆ.ಗ್ಯಾಂಗ್ ರೇಪ್ ತಡೆದಿದ್ದರೆ ಅಭಿನಂದನೆ ಸಲ್ಲಿಸಬಹುದಿತ್ತು.ಎಂಥ ಮೂರ್ಖತನದ ಸರಕಾರ ಇದು ಈಗ ತಾಂತ್ರಿಕತೆ ಬೆಳೆದಿದೆ ಆರೋಪಿಗಳ ಪತ್ತೆ ಸುಲಭ ಆರೋಪಿಗಳ ಪತ್ತೆ ಹಚ್ಚುವುದು ಅವರ ಕರ್ತವ್ಯ, ರೇಪ್ ನಡೆಯದಂತೆ ತಡೆದಿದ್ದರೆ ಭೇಷ್ ಅನ್ನಬಹುದಿತ್ತು

ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ
ಮೈಸೂರು ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರ ಸರ್ಕಾರದ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದೆ ಅಂತಾ ನನಗೆ ಅನಿಸುತ್ತಿದೆ.ರೆಸ್ಪಾನ್ಸಿಬಲ್ ಗೌರ್ನಮೆಂಟ್ ಮಾಡುವ ಕ್ರಮ ಅಲ್ಲ. ಪೊಲೀಸರು ಆಕೆಯ ಹೇಳಿಕೆಯನ್ನು ಪಡೆಯದೆ ಹಾಗೆಯೇ ಡಿಸ್ಕಾರ್ಜ್ ಆಗಲು ಬಿಟ್ಟಿದ್ದಾರೆ ಸರ್ಕಾರ ನಡೆದುಕೊಳ್ಳುವ ರೀತಿ ನೋಡಿದ್ರೆ ಸರ್ಕಾರದ ಮೇಲೆ ಅನುಮಾನ ಮೂಡಿಸುತ್ತದೆ. ನಾವು ಇದ್ದಾಗ ನಂದಿತಾ ಕೇಸ್ ಇದ್ಯಲ್ಲ, ಅವಾಗ ರೇಪ್ ಆಗಿರಲಿಲ್ಲ.ನಾನು ಆ ಕೇಸ್ ಅನ್ನ ಸಿಬಿಐಗೆ ಕೊಟ್ಟಿದ್ದೆ‌.ಬಿಜೆಪಿ ಅವ್ರು ಸಾಕಷ್ಟು ಗಲಾಟೆ ಮಾಡಿದ್ದರು‌.
ಈ ಸರಕಾರದಲ್ಲಿ ಪೊಲೀಸ್ ವರ್ಗಾವಣೆಗಳು ದುಡ್ಡಿಂದ ಆಗಿವೆ.ಎಷ್ಟೇಷ್ಟು ದುಡ್ಡು ಕೊಟ್ಟು ಬಂದಿದ್ದಾರೆ ಎಂದು ವೀಡಿಯೋ ಮಾಡಿ ತೋರಿಸಲ?
ಪೊಲೀಸರು ಉದ್ದೇಶ ಪೂರ್ವಕವಾಗಿ ಸಂತ್ರಸ್ತೆ ಹೇಳಿಕೆ ಪಡೆದಿಲ್ಲ ಎಂದೆನಿಸುತ್ತಿದೆ.

ಅಚ್ಚೆ ದಿನ್ ಬರುತ್ತೆ ಅಂತಾ ಹೇಳಿದರು ಅದು ಈಗ ಬೆಲೆ ಏರಿಕೆ ಮೂಲಕ ಬರುತ್ತಿದೆ: ಮತ್ತೆ ಲಿಂಗಾಯತ ಧರ್ಮ‌ ಹೋರಾಟದ ಧ್ವನಿ ಎತ್ತಿದ ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಿದ್ದರಾಮಯ್ಯ ನಕಾರ.ಅದು ಏನೂ ಅಂತಾ ನನಗೆ ಗೊತ್ತಿಲ್ಲಅದನ್ನು ಅವರನ್ನೇ ಕೇಳಿ ನನ್ನ ಬಳಿ‌ ಆ ಬಗ್ಗೆ ಪ್ರಶ್ನೆ ಮಾಡಬೇಡಿ.

ಜಿಟಿಡಿ ನನ್ನ ಜೊತೆ ಬೆಂಗಳೂರಿನಲ್ಲಿ ಮಾತಾಡಿದ್ದರು
ಕಾಂಗ್ರೆಸ್ ಗೆ ಬರುತ್ತೇನೆ ಅಂದರು ನನಗೆ ನನ್ನ ಮಗನಿಗೆ ಟಿಕೆಟ್ ಬೇಕು ಅಂತಾ ಕೇಳಿದ್ದಾರೆ ಎಲ್ಲವನ್ನೂ ಹೈಕಮಾಂಡ್ ಜೊತೆ ಮಾತಾಡ್ತಿನಿ ಅಂತಾ ಹೇಳಿದ್ದಿನಿ. ನಾನು ಇರುವಾಗ ಇನ್ನೂ ಜಾತಿಗಣತಿ ವರದಿಯೆ ತಯಾರಾಗಿರಲಿಲ್ಲ ಏನಿದೆ ಅಂತಾ ನನಗೆ ಏನೂ ಗೊತ್ತಿತ್ತು
ಎಚ್ಡಿ ಕುಮಾರಸ್ವಾಮಿ ಹೇಳಿಕೆ ಚೈಲ್ಡಿಶ್ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆಮೈಸೂರು ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

Leave a Reply

Your email address will not be published. Required fields are marked *