ಹುಣಸೂರು:1 ಸೆಪ್ಟೆಂಬರ್ 2022
ನಂದಿನಿ ಮೈಸೂರು
ಹುಣಸೂರು ನಗರಸಭಾ ಸದ್ಯಸ್ಯರು, ಬಿಜೆಪಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರು , ಹುಡಾ ಸದಸ್ಯರಾದ ಗಣೇಶ್ ಕುಮಾರಸ್ವಾಮಿ ಅವರು ಹುಟ್ಟು ಹಬ್ಬವನ್ನು ವಿವಿಧ ಸಮಾಜಮುಖಿ ಸೇವಾ
ಕಾರ್ಯಕ್ರಮ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಬೆಳಗ್ಗೆ ವೃದ್ಧಾಶ್ರಮದಲ್ಲಿ ಗೋ ಪೂಜೆ ನಂತರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಲ್ಯಾಣಿ ಪೂಜೆ , ಡಿ ದೇವರಾಜ ಅರಸು ಅವರ ಪುತ್ಥಳಿಗೆ ಗೌರವ ಸಮರ್ಪಿಸಿದರು.ಡಿ.ದೇವರಾಜ ಅರಸು ಪ್ರತಿಮೆ ಮುಂಭಾಗದಿಂದ ನೂರಾರು ಯುವಕರು ಬೈಕ್ ರ್ಯಾಲಿ ಹೊರಟರು.
ಗಣೇಶ್ ಕುಮಾರಸ್ವಾಮಿ ಅವರು ಹಳೆಯ ಮನೆಯಲ್ಲಿ ಜನ ಸೇವಾ ಕೇಂದ್ರ ಉದ್ಘಾಟಿಸಿದರು.ಮೈಸೂರಿನ ಸುಯೋಗ ಆಸ್ಪತ್ರೆ ಹಾಗೂ ಹುಣಸೂರಿನ ಕಾವೇರಿ ಆಸ್ಪತ್ರೆಯ ಸಹಯೋಗದೊಂದಿಗೆ ಸ್ತ್ರೀ ರೋಗ ಹೃದಯ ಸಂಬಂಧಿ ಕಾಯಿಲೆ ಗರ್ಭಕೋಶ ತೊಂದರೆ ಕಣ್ಣಿನ ತಪಾಸಣೆ, ಮಕ್ಕಳ ತಪಾಸಣೆ ಶಿಬಿರ , ಅವಶ್ಯಕತೆ ಇದ್ದರವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಹಾಗೂ ರಕ್ತ ದಾನ ಶಿಬಿರ ವನ್ನು ಮೈಸೂರಿನ ಜೀವಾಧಾರ ರಕ್ತ ನಿಧಿ ಕೇಂದ್ರದಿಂದ ನಡೆಸಲಾಯಿತು.
ಸ್ವಾಮೀಜಿಗಳು,ರಾಜಕೀಯ ನಾಯಕರು,ಅಭಿಮಾನಿಗಳು,ಕುಟುಂಬಸ್ಥರು ಗಣೇಶ್ ರವರಿಗೆ ಶುಭ ಹಾರೈಸಿದರು.
ಸಾವಿರಾರೂ ಜನರ ಪ್ರೀತಿ ಸಂಪಾದಿಸಿರುವ ಗಣೇಶ್ ಕುಮಾರಸ್ವಾಮಿ ರವರಿಗೆ ಮುಂದಿನ ದಿನಗಳಲ್ಲಿ ರಾಜಕೀಯ ಅಧಿಕಾರ ಸಿಗಲಿ ಹುಣಸೂರು ಅಭಿವೃದ್ಧಿಯಾಗಲಿ ಎಂದು ಹೈರಿಗೆ ಮಂಜುನಾಥ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಕುರುಬ ಸಮುದಾಯದ ಹುಣಸೂರು ತಾಲ್ಲೂಕು ಅಧ್ಯಕ್ಷರಾದ ಕುನ್ನೇಗೌಡ, ಕಾವೇರಿ ಆಸ್ಪತ್ರೆ ಸಂಸ್ಥಾಪಕರಾದ ಡಾ, ಲೋಹಿತ್ , ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ್, ಮಿರ್ಲೆ ಶ್ರೀನಿವಾಸ್ ಗೌಡ್ರು, ವೆಂಕಟೇಶ್ ಕುಮಾರಸ್ವಾಮಿ, ಯುವ ಮುಖಂಡರಾದ ಮಂಜುನಾಥ್ ಹೈರಿಗೆ ಮತ್ತು ಹಾಲುಮತ ಮಹಾಸಭಾ ಹುಣಸೂರು ತಾಲೂಕು ಅಧ್ಯಕ್ಷರಾದ ಮಹೇಶ್ ಉದ್ದೂರು ಸೇರಿದಂತೆ ನುರಾರು ಹಿತೈಷಿಗಳು ಉಪಸ್ಥಿತರಿದ್ದು ಶುಭಹಾರೈಸಿದರು.