ನಾಗರಾಜು ರವರನ್ನ ಟಿ.ನರಸೀಪುರ ಪುರಸಭೆ ಅಧ್ಯಕ್ಷ ಸ್ಥಾನ ನೀಡುವಂತೆ ಸಿದ್ದರಾಮಯ್ಯರವರಿಗೆ ಹೆಳವ ಸಮುದಾಯ ಒತ್ತಾಯ

ನಂದಿನಿ ಮೈಸೂರು

ಹೆಳವ ಜನಾಂಗದ ನಾಗರಾಜು ರವರನ್ನ ಟಿ.ನರಸೀಪುರ ಪುರಸಭೆ ಅಧ್ಯಕ್ಷ ಸ್ಥಾನ ನೀಡುವಂತೆ ಹೆಳವ ಸಮುದಾಯ ಒತ್ತಾಯಿಸಿದೆ.

ಮೈಸೂರು ಜಿಲ್ಲೆಯಾದ್ಯಂತ ನಮ್ಮ ಸಮುದಾಯದವರು ನಿಮ್ಮ ಹಿಂಬಾಲಕರಾಗಿದ್ದಾರೆ.
ನಮಗೆ ಈವರೆಗೂ ಯಾವುದೇ ರಾಜಕೀಯ ಸವಲತ್ತುಗಳು ಸಿಕ್ಕಿಲ್ಲ.ನೀವು ನಮ್ಮ ಸಮುದಾಯವನ್ನ ಗುರುತಿಸಿ ಅವಕಾಶ ನೀಡಿದ್ದರು. ನಿಮ್ಮ ಆಶಿರ್ವಾದದಿಂದ ನಮ್ಮ ಸಮುದಾಯದ ನಾಗರಾಜ್ ರವರು ವಾರ್ಡ್ ನಂ -9 ರಲ್ಲಿ
ಟಿ‌.ನರಸೀಪುರ ಪುರಸಭೆಯಲ್ಲಿ ಆಯ್ಕೆಯಾಗಿದ್ದಾರೆ.ತೆರವಾಗಿರುವ ಟಿ.ನರಸೀಪುರ ಪುರಸಭೆ ಅಧ್ಯಕ್ಷ ಸ್ಥಾನವನ್ನು ನಾಗರಾಜ್ ರವರಿಗೆ ನೀಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ
ಹೆಳವ ಸಮಾಜದ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡರು
ಸಿದ್ದಪ್ಪ ಮನವಿ ಮಾಡಿದ್ದಾರೆ.

ಕೀಳನಪುರ ಗ್ರಾಮ ಪಂಚಾಯತಿ ಸದಸ್ಯ ನಾಗರಾಜ್ ಕಾಳಯ್ಯ,ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಮಹದೇವಿ ಕಾಲೋನಿ ಕುಮಾರ್,
ಯುವ ಮುಖಂಡಮಣಿಕಂಠ , ಹಿನಕಲ್ ಮಹೇಶ್,ಶಂಕರ್,ಆರ್.ಮಹೇಶ್,ಎಪಿ ನಾಗರಾಜ್ , ಅಂಗಡಿ ಸಿದ್ದಯ್ಯ,ತಮ್ಮಣ್ಣ,ಲಕ್ಷ್ಮೀ ಸೇರಿದಂತೆ ಸಮುದಾಯದವರು ಹಾಜರಿದ್ದರು.

Leave a Reply

Your email address will not be published. Required fields are marked *