ನಂದಿನಿ ಮೈಸೂರು
ಕಳೆದೆರಡು ವರ್ಷಗಳಿಂದ ಕೋವಿಡ್ ನಿಂದ ಸಾಕಷ್ಟು ನೋವುಗಳು ಉಂಟಾಗಿತ್ತು.
ಇನ್ನೇನು ಎಲ್ಲವೂ ಸರಿ ಆಗಿದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ಕೋವಿಡ್ ನ ಆತಂಕ ಶುರುವಾಗಿದೆ.
ಮುಂಬರುವ ದಿನಗಳಲ್ಲಿ ಎಲ್ಲರಿಗೂ ಆ ದೇವರು ಒಳ್ಳೆಯದು ಮಾಡಲಿ,
ರಾಜ್ಯದ ಜನತೆ ಸುಭೀಕ್ಷವಾಗಿರಲಿ ಎಂದು ಹಾರೈಸುತ್ತಾ ಕ್ರಿಸ್ ಮಸ್ ಆಚರಣೆ ಮಾಡುತ್ತೇವೆ ಎಂದು
ಧರ್ಮಾದ್ಯಕ್ಷ ಕೆ.ಎ. ವಿಲಿಯಂ ತಿಳಿಸಿದರು.
ಸೇಂಟ್ ಫಿಲೋಮಿನಾ ಚರ್ಚ್ ಆವರಣದಲ್ಲಿ ಈ ಬಾರಿ ವಿಶೇಷ ವಾಗಿ ಆಚರಿಸಲೂ ತೀರ್ಮಾನಿಸಿದ್ದೇವೆ.
ಎಂದಿನಂತೆ ನಮ್ಮ ಆಚರಣೆಯಲ್ಲಿ ಪ್ರಾರ್ಥನೆ ಗಳು ,ಗೀತೆಗಳನ್ನು ಮಾಡಲಾಗುವುದು.
ಸರ್ಕಾರ ಈಗಾಗಲೇ ಕೋವಿಡ್ ಮಾರ್ಗ ಸೂಚಿನೆಗಳನ್ನ ನೀಡಿದೆ. ಅದರಂತೆಯೇ ನಾವು ಮಾಸ್ಕ್ ಧರಿಸುವುದರ ಮೂಲಕ ಜಾಗೃತಿ ಕೂಡ ಮೂಡಿಸುತ್ತೇವೆ.ಮಧ್ಯರಾತ್ರಿ ಸಮುದಾಯದ ಬಂಧುಗಳು ಒಟ್ಟಿಗೆ ಸೇರಿ
ಕ್ರಿಸ್‌ಮಸ್ ಆಚರಣೆಯ ಮಾಡುತ್ತೇವೆ.ಕೇಕ್, ಸಿಹಿ ತಿನಿಸು ವಿತರಿಸಲಿದ್ದೇವೆ ಎಂದು ಕ್ರೀಸ್ ಮಸ್ ಇತಿಹಾಸದ ಬಗ್ಗೆ ಮಾಹಿತಿ ನೀಡಿ
ನಾಡಿನ ಸಮಸ್ತ ಜನರಿಗೆ ಕ್ರೀಸ್ ಮಸ್ ಹಬ್ಬದ ಶುಭಾಶಯ ತಿಳಿಸಿದರು.