ನಂದಿನಿ ಮೈಸೂರು
ಚಪ್ಪಲಿ ಎಸೆದವರ ಬಂಧನಕ್ಕೆ: ಹರೀಶ್ ನಾಯ್ಡು ಆಗ್ರಹ
ಹೊಸಪೇಟೆಯಲ್ಲಿ ಈಚೆಗೆ ‘ಕ್ರಾಂತಿ’ ಚಿತ್ರದ ಹಾಡು ಬಿಡುಗಡೆ ಸಮಯದಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿರುವುದನ್ನು ಖಂಡಿಸಿ ದರ್ಶನ್ ತೂಗುದೀಪ ಅಭಿಮಾನಿ ನಗರದ ಎಂಜಿ ರಸ್ತೆಯಲ್ಲಿರುವ ತೂಗುದೀಪ ಶ್ರೀನಿವಾಸ್ ವೃತ್ತ (ಲಲಿತ ಮಹಲ್ ಗೇಟ್) ಗುರುವಾರ ದರ್ಶನ್ ಭಾವಚಿತ್ರ ಹಿಡಿದು ಏಕಾಂಗಿ ಪ್ರತಿಭಟನೆ ನಡೆಸಿದ್ದರು
ದರ್ಶನ್ ಪರ ಘೋಷಣೆ ಕೂಗಿ. ಆರೋಪಿಯನ್ನು ಬಂಧಿಸಿ, ಗಡಿಪಾರು ಮಾಡಬೇಕು. ನೆಚ್ಚಿನ ನಟನಿಗೆ ಅವಮಾನ ಮಾಡಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಂತರ ಮಾತನಾಡಿದ ಅವರು ‘ಇದು ಕೇವಲ ಒಬ್ಬ ನಟನಿಗೆ ಮಾಡಿದ ಅವಮಾನವಲ್ಲ. ಇಡೀ ಕನ್ನಡ ಭಾಷೆಗೆ ಆದ ಅವಮಾನ. ದರ್ಶನ್ ಮೇಲೆ ಚಪ್ಪಲಿ ಎಸೆದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನೋವುಂಟು ಮಾಡಿದೆ. ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗಬೇಕು’ ಎಂದು ಆಗ್ರಹಿಸಿದರು.