ಮಾನಸಿಕ ಅಸ್ವಸ್ಥೆ ವೃದ್ದೆಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದ ಪೋಲಿಸರು

50 Views

 

ಎಚ್.ಡಿ.ಕೋಟೆ:23 ಮಾರ್ಚ್ 2022

ನಂದಿನಿ ಮೈಸೂರು

ಊರು ಬಿಟ್ಟು ಬಂದಿದ್ದ ಮಾನಸಿಕ ಅಸ್ವಸ್ಥೆ ವೃದ್ದೆಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿ ಹೆಡ್ ಕಾನ್ಸ್ಟೇಬಲ್ ಗೋವಿಂದರಾಜು ಮತ್ತು ಸುರೇಶ್ ಮಾನವೀಯ ಮರೆದಿದ್ದಾರೆ.

ಎಚ್.ಡಿ ಕೋಟೆ ಠಾಣೆ ವ್ಯಾಪ್ತಿಯ ಬಸಾಪುರ ಗ್ರಾಮದ ಮುದರಾಮು ಎಂಬ ವ್ಯಕ್ತಿ 112ಗೆ ಕರೆ ಮಾಡಿ ಅಪರಚಿತ ವೃದ್ದೆ (70ವರ್ಷ) ಒಂದು ವಾರದಿಂದ ನಮ್ಮ ಊರಿನಲ್ಲಿ ಇದ್ದು ಈಗ ನಮ್ಮ ಮನೆಗೆ ನುಗ್ಗಿ ಗಲಾಟೆ ಮಾಡುತ್ತಿದ್ದಾರೆ ಎಂದು ದೂರು ನೀಡಿದರು.
ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ಮಾಡಿದಾಗ ವೃದ್ದೆ ಮಾನಸಿಕ ಅಸ್ವಸ್ಥೆಯಾಗಿದ್ದರು. ಪೊಲೀಸ್ ರಾದ ಹೆಡ್ ಕಾನ್ಸ್ಟೇಬಲ್ ಗೋವಿಂದರಾಜು ಮತ್ತು ಸುರೇಶ್ ರವರು ಮುದ್ದು ರಾಮು ಕುಟುಂಬಕ್ಕೆ ಸಮಾಧಾನ ಹೇಳಿದರು.

ಆಕೆಯ ವಿಳಾಸ ಪತ್ತೆ ಹಚ್ಚಲು
ಅಸ್ವಸ್ಥ ವೃದ್ದೆ ಪೋಟೋ ತೆಗೆದುಕೊಂಡ ಪೋಲಿಸರು ವಿವಿಧ ವಾಟ್ಸ್ ಆ್ಯಪ್ ಗ್ರೂಪ್ ಗಳಿಗೆ ಕಳುಹಿಸಿದರು. ತಡರಾತ್ರಿ 12 ಗಂಟೆಯಲ್ಲಿ ಮೈಸೂರು ಕಂಟ್ರೋಲ್ ರೂಂ ರವರ ಸಹಾಯದಿಂದಾಗಿ ವೃದ್ದೆಯ ಊರು ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಚಲ್ಲ ಹಳ್ಳಿ ಎಂದು ತಿಳಿದ ತಕ್ಷಣ 112 ವಾಹನದಲ್ಲಿ ಕರೆದುಕೊಂಡು ಹೋಗಿ ಅವರ ಮಕ್ಕಳಾದ ಜಯರಾಮು ಮತ್ತು ವೈರಮುಡಿ ರವರ ಬಳಿ ಬಿಟ್ಟು ಬಂದಿದ್ದಾರೆ.ಪೋಲಿಸರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು

Leave a Reply

Your email address will not be published.