144 Views
ವಿಜಯಪುರ:24 ಫೆಬ್ರವರಿ 2022
ಭಜರಂಗದಳ, ವಿಶ್ವ ಹಿಂದೂ ಪರಿಷತ್ ಹರ್ಷಾ ಹಿಂದೂ ಹತ್ಯೆ ಖಂಡಿಸಿ ವಿಜಯಪುರದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕೆಸರಟ್ಟಿ ಸೋಮಲಿಂಗ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹತ್ಯೆ ಮಾಡಿದ ಆರು ಜನರನ್ನು ಹಿಡಿದಿದ್ದಾರೆ.ಆದ್ರೆ ನಮ್ಮ ಸರ್ಕಾರ ಸುಮ್ಮನೆ ಕುಳಿತಿದೆ.
ಬೊಮ್ಮಾಯಿಯವರು ಹೇಗಿದ್ದಾರೆ, ಶಾಂತಿಯಿಂದ ಇದ್ದಾರಲ್ಲ.ಶಾಂತಿಯಿಂದ ಇದ್ರೆ ಸರ್ಕಾರ ನಡೆಯೋದಿಲ್ಲ.ಉತ್ತರ ಪ್ರದೇಶದದಲ್ಲಿ ಆಗುವಂತೆ ಎನ್ ಕೌಂಟರ್ ಹಾಗೆಯೇ ಕರ್ನಾಟಕದಲ್ಲೂ ಎನ್ ಕೌಂಟರ್ ಆಗಬೇಕು ಎಂದು ಸ್ವಾಮೀಜಿ ವಿವಾದಿತ ಮಾತು ಹಾಡಿದ್ದಾರೆ.ನಾವು ಎನ್ ಕೌಂಟರ್ ಮಾಡದಿದ್ರೆ ಹೀಗೆ ದಿನಕ್ಕೊಂದು ಹತ್ಯೆ ಆಗುತ್ತವೆ.
ನಮ್ಮನ್ನು ಏನು ಮಾಡಿಕೊಳ್ತೀರಿ ಅಂತ ಧಮ್ಕಿ ಹಾಕ್ತಾರೆ.ಶಾಂತಿ ಮಾಡಿಕೊಂತ ಕುಂತ್ರೆ ಆಗೋಲ್ಲ.ಹರ್ಷಾನ ಹತ್ಯೆ ಮಾಡಿದ ಜಿಹಾದಿಗಳನ್ನು ಎನ್ ಕೌಂಟರ್ ಮಾಡಲೇಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.