ಹರ್ಷ ಹಿಂದೂ ಹತ್ಯೆ ಖಂಡಿಸಿ ಮೇಣದ ಬತ್ತಿ ಶ್ರಧ್ದಾಂಜಲಿ

ಮೈಸೂರು:23 ಫೆಬ್ರವರಿ 2022

ನಂದಿನಿ ಮೈಸೂರು

ಮೈಸೂರು ಮಹಾನಗರದ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಇಂದು ನಗರದ ನ್ಯಾಯಾಲದ ಮುಂಭಾಗವಿರುವ ಗಾಂಧಿ ಪ್ರತಿಮೆಯ ಬಳಿ ಶಿವಮೊಗ್ಗದಲ್ಲಿ ನಡೆದ ಹಿಂದು ಸಂಘಟನೆಯ ಕಾರ್ಯಕರ್ತರ ಹರ್ಷ ರವರ ಹತ್ಯೆಯನ್ನು ಖಂಡಿಸಿ ಹಾಗೂ ಅವರ ಆತ್ಮಕ್ಕೆ ಶಾಂತಿ ಕೋರಿ ಮೇಣದ ಬತ್ತಿಯನ್ನು ಹಚ್ಚಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಅಮರ್ ರಹೇ ಅಮರ್ ರಹೇ ಹರ್ಷ ಅಮರ್ ರಹೇ, ಹರ್ಷ ಅಮರ್ ರಹೇ, ಇದ್ದೇವೆ ಇದ್ದೇವೆ ಹರ್ಷನ ಕುಟುಂಬದವರೊಂದಿಗೆ ಇದ್ದೇವೆ ಎಂದು ಘೋಷಣೆ ಯ ಮುಖಾಂತರ ಹಾಗೂ ಮೇಣದ ಬತ್ತಿಯನ್ನು ಹಚ್ಚಿ ಸಿ ಎರಡು ನಿಮಿಷಗಳ ಕಾಲ ಮೌನ ಚರಣೆಯನ್ನು ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮೈಸೂರು ಮಹಾನಗರ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಜೋಗಿ ಮಂಜು ಮಾತನಾಡಿ.ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತರ ಹಿಂದೂ ಯುವಕರ ಮಾರಣಹೋಮಕ್ಕೆ ಪ್ರಚೋದನೆ ನೀಡುತ್ತಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ನಿಲುವನ್ನು ಸಮಸ್ತ ಹಿಂದೂ ಕಾರ್ಯಕರ್ತರು ಖಂಡಿಸಲೇಬೇಕು ,
ವಿಕೃತಿ ಮನಸ್ಸಿನ ಅಲ್ಪಸಂಖ್ಯಾತ ಗೊಂಡಾ ಗಳನ್ನು ನಡುರಸ್ತೆಯಲ್ಲಿ ನೇಣು ಹಾಕುವ ಮೂಲಕ ಅವರಿಗೆ ಸರಿಯಾದ ಪಾಠವನ್ನು ರಾಜ್ಯ ಸರ್ಕಾರ ಕಲಿಸಬೇಕು ಹಾಗೆ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಗುಪ್ತಚರ ಇಲಾಖೆ ಹಾಗೂ ಪೊಲೀಸ್ ಇಲಾಖೆಯು ಕಾರ್ಯಪ್ರವೃತ್ತರಾಗಬೇಕು
ಈ ಕೊಲೆಯ ಹಿಂದೆ ಎಂತಹ ದೊಡ್ಡ ವ್ಯಕ್ತಿಗಳು ಇದ್ದರು ಕೂಡ ಅವರನ್ನು ಬಂಧಿಸಬೇಕು ಹಾಗೆಯೇ ಉನ್ನತಮಟ್ಟದ ತನಿಖೆಯನ್ನು ನಡೆಸಿ ಸಾರ್ವಜನಿಕರು ನೆಮ್ಮದಿಯಿಂದ ಜೀವನ ನಡೆಸುವ ವಾತಾವರಣವನ್ನು ನಿರ್ಮಾಣ ಮಾಡಬೇಕು, ಹತ್ಯೆಗೊಳಗಾದ ಹರ್ಷನ ಕುಟುಂಬದವರಿಗೆ ಸಮಸ್ತ ಕರ್ನಾಟಕ ಜನತೆ ಅವರಿಗೆ ಹಣದ ರೂಪದಲ್ಲಿ ಸಹಾಯ ಮಾಡೋಣ ಎಂದು ಪ್ರತಿಜ್ಞೆ ಸ್ವೀಕರಿಸಲಾಯಿತು, ಹಾಗೆಯೇ ಅವರ ಕುಟುಂಬದವರಿಗೆ ಚಾಮುಂಡೇಶ್ವರಿ ದುಃಖ ಭರಿಸುವ ಶಕ್ತಿಯನ್ನು ನೀಡಲೆಂದು ನಾವೆಲ್ಲರೂ ಪ್ರಾರ್ಥಿಸೋಣ ಎಂದರು…

ಓಬಿಸಿ ನಗರ ಅಧ್ಯಕ್ಷರಾದ ಜೋಗಿ ಮಂಜು, ರಾಜ್ಯ ಸಾಮಾಜಿಕ ಜಾಲತಾಣದ ಸಹ ಸಂಚಾಲಕರಾದ ಸು. ಮುರಳಿ ಪ್ರಧಾನ ಕಾರ್ಯದರ್ಶಿಗಳಾದ ಮಣಿರತ್ನಂ, ಗೋಪಾಲ್, ಮಂಡಲದ ಅಧ್ಯಕ್ಷರುಗಳಾದ ಶಿವಪ್ಪ ,ಸುಪ್ರೀಂಮಂಜು, ಶಿವಲಿಂಗೇಗೌಡ, ರಾಚಪ್ಪಾಜಿ, ಉಪಾಧ್ಯಕ್ಷರುಗಳಾದ ಮಹದೇವು, ಶಿವರಾಜ್, ಭರತ್ ,ಕಾರ್ಯದರ್ಶಿಗಳಾದ ಸೂರಜ್, ಗಣೇಶ್ ಲಾಳಗೆ, ಮಂಜುನಾಥ್, ಸಾಮಾಜಿಕ ಜಾಲತಾಣ ಸಂಚಾಲಕ ಅಭಿಲಾಶ್, ಜೀವನ್, ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯರಾಮ್, ಸೋಮಶೇಖರ್, ವಿಜಯ್, ಅಂಬರೀಶ್ ,ಸಿಗಳ್ಳಿರವಿ, ಸೋಮಶೇಖರ್, ರಾಘವೇಂದ್ರ, ಪುರುಷೋತ್ತಮ್, ಪ್ರಸಾದ್, ಲಿಂಗರಾಜು, ಮುಂತಾದವರು ಇದ್ದರು.

Leave a Reply

Your email address will not be published. Required fields are marked *