ಜ.3 ರಂದು ಕ್ಯಾನ್ಸರ್ ಪೀಡಿತರಿಗೆ ಹೇರ್ ಡೊನೆಟ್ ಮಾಡುವವರಿಗೆ ಉಚಿತ ಹೇರ್ ಕಟ್

ಮೈಸೂರು:28 ಡಿಸೆಂಬರ್ 2021

ನಂದಿನಿ

ದಿ.ಪುನೀತ್‌ರಾಜ್‌ ಕುಮಾರ್‌ ರವರ ಸ್ಮರಣಾರ್ಥವಾಗಿ ‘ Mysore Hair and Beauty Association ( R. ) AIHBA ಅಂಗಸಂಸ್ಥೆ ‘ ಯ ವತಿಯಿಂದ ಕ್ಯಾನ್ಸರ್‌ ಪೀಡತರಿಗೆ Hair Donate ಮಾಡುವ ಉದ್ದೇಶದಿಂದ ಏರ್ ಕಟ್ ಅನ್ ಉಚಿತವಾಗಿ ಮಾಡಲಾಗುತ್ತದೆ ಎಂದು ಅಧ್ಯಕ್ಷೆ ಜೆ.ಉಮಾಜಾಧವ್
ತಿಳಿಸಿದರು.

ಜ.3 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಮೈಸೂರಿನ ಶಾರದದೇವಿ ನಗರ , ನಿವೇದಿತ ನಗರ ಪಾರ್ಕ್‌ನಲ್ಲಿ ನಮ್ಮ ಸಂಸ್ಥೆಯ ಸದಸ್ಯರೆಲ್ಲರನ್ನೊಳಗೊಂಡತೆ ಸಾಮೂಹಿಕ Hair cut ನ್ನು ಉಚಿತವಾಗಿ ಮಾಡಲಿದ್ದೇವೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟಗರು ಸಿನಿಮಾ ಖ್ಯಾತಿಯ ಋಷಿಕಾ ಶಾರದಾದೇವಿನಗರ , ನಗರ ಪಾಲಿಕೆ ಸದಸ್ಯರಾದ ನಿರ್ಮಲಾ ಹರೀಶ್ , ಮಾಜಿ ಮಹಾಪೌರರಾದ ಪುಷ್ಪಲತಾ ಚಿಕ್ಕಣ್ಣ , ಸ್ವರ್ಣ ವರದಿಗಾರರು ಆಗಮಿಸಲಿದ್ದಾರೆ . ಈಗಾಗಲೇ 50 ಜನ ನೊಂದಣಿ ಮಾಡಿಕೊಂಡಿದ್ದಾರೆ.
ಆಸಕ್ತಿಯುಳ್ಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಂಸ್ಥೆಯೊಂದಿಗೆ ಕೈಜೋಡಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9986032650 , 7862180431 , 9844760624 , 9738738814 ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *