ಹನುಮ ಜಯಂತಿ ಸಂಭ್ರಮ ನಗಾರಿ ಸದ್ದಿಗೆ ಕುಣಿದು ಕುಪ್ಪಳಿಸಿದ ಭಕ್ತರು

ಮೈಸೂರು: 26 ಡಿಸೆಂಬರ್ 2021

ನಂದಿನಿ

ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಮಂಡಲಾಧ್ಯಕ್ಷ ಬಿ.ಎಂ.ರಘು ನೇತೃತ್ವದಲ್ಲಿ ಹನುಮ ಜಯಂತಿ ಆಚರಣೆ ಮಾಡಲಾಯಿತು.

ಕೋಟೆ ಅಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಹನುಮ ಮೂರ್ತಿ ಬೆಳ್ಳಿರಥ
ಚಾಮುಂಡೇಶ್ವರಿ ಕ್ಷೇತ್ರದ ಶಾರದದೇವಿ ನಗರಕ್ಕೆ ಆಗಮಿಸುತ್ತಿದ್ದಂತೆ ಭಕ್ತರು ಜೈಹನುಮ ಘೋಷಣೆ ಕೂಗಿ ಬರಮಾಡಿಕೊಂಡರು.ನಂತರ
ಹನುಮನ ವಿಗ್ರಹಕ್ಕರ ಪುಷ್ಪಾರ್ಚನೆಗೈದು ಪ್ರಾರ್ಥಿಸಿದರು.

ಮೆರವಣಿಗೆಯಲ್ಲಿ ವೀರೆಗಾಸೆ,ಕಂಸಾಳೆ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಮೆರಗು ನೀಡಿದವು.ನಗಾರಿ ಶಬ್ದಕ್ಕೆ ಯುವಕರು,ಯುವತಿಯರು ಭರ್ಜರಿಯಾಗಿ ಸ್ಟೇಪ್ ಹಾಕಿದರು.ತದ ನಂತರ ಪ್ರಸಾದ ವಿತರಿಸಲಾಯಿತು.

ಮೆರವಣಿಗೆಯಲ್ಲಿ ಗ್ರಾಮಾಂತರ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್,ಪಾಲಿಕೆ ಮಾಜಿ ಸದಸ್ಯ ಶಂಕರ್,ರಾಜಮಣಿ,ರಾಕೇಶ್ ಭಟ್,ಮುಡಾ ಸದಸ್ಯೆ ಲಕ್ಷ್ಮೀದೇವಿ,ನಗರ ಉಪಾಧ್ಯಕ್ಷೆ ಶಾಂತ,ರೇಣುಕಾ ರಾಜು,ರೇವಣ್ಣ ಸೇರಿದಂತೆ ಬಡವಾಣೆಯ ಜನರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *