ಮೈಸೂರು:24 ಆಗಸ್ಟ್ 2021
ನ@ದಿನಿ
ಜೆಡಿಎಸ್ನಲ್ಲಿ ಆದ ಅವಮಾನಗಳ ಬಗ್ಗೆ ಹೆಚ್.ಡಿ. ದೇವೇಗೌಡರ ಜೊತೆ ಚರ್ಚೆ ಮಾಡಿದ್ದೇನೆ. ಆಗ ಅವರು ನಿನ್ನನ್ನು ಮರಿದೇವೇಗೌಡ ಎಂದುಕೊಂಡಿದ್ದೇನೆ. ನೀನು ನನ್ನ ಜೊತೆಯೇ ಇರಬೇಕೆಂದು ಹೇಳಿದ್ದರು. ಅದಕ್ಕೆ ನಾನು ದಯವಿಟ್ಟು ಕ್ಷಮಿಸಿ ಎಂದು ದೇವೇಗೌಡರಿಗೆ ಹೇಳಿದ್ದೆ. ನನ್ನೊಂದಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮಾತಾಡಿದ್ದಾರೆ ಎಂದಿದ್ದೆ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುವ ಬಗ್ಗೆ ಜಿ.ಟಿ. ದೇವೇಗೌಡ ಸುಳಿವು ನೀಡಿದ್ದಾರೆ.
ನಾನು ಯಾವತ್ತೂ ಪಕ್ಷದ ವಿರುದ್ಧವಾಗಿ ನಡೆದುಕೊಂಡಿಲ್ಲ. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮೈಸೂರು ಮೇಯರ್ ಚುನಾವಣೆ ನಡೆದಿತ್ತು. ಆಗ, ಚುನಾವಣೆಯ ವೇಳೆ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನನ್ನ ಮನಸ್ಸಿಗೆ ಅನಿಸಿದ್ದನ್ನು ನಾನು ನೇರವಾಗಿ ಹೇಳುತ್ತೇನೆ. ಅದನ್ನು ಸಹಿಸಿಕೊಳ್ಳುವುದಕ್ಕೆ ಅವರಿಗೆ ಆಗಿಲ್ಲ. ನಂತರ ನಡೆದ ಜೆಡಿಎಸ್ ಸಭೆಗಳಿಗೆ ನನ್ನನ್ನು ಆಹ್ವಾನಿಸಿಲ್ಲ. ನಾನು ಜೆಡಿಎಸ್‌ನಲ್ಲೇ ಇದ್ದರೂ ಕರೆದು ಮಾತನಾಡಿಲ್ಲ. ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುವಂತೆ ನಿಯೋಗ ತೆರಳಿತ್ತು. ಆದರೆ, ಸಾರಾರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಲು ಹೇಳಿದ್ದಾರೆ. ನಾನು ಯಾವುದೇ ಹುದ್ದೆ ಕೇಳದಿದ್ದರೂ ನನಗೆ ಅಪಮಾನ ಮಾಡಲಾಗಿದೆ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ವಿರುದ್ಧ ಜಿ.ಟಿ. ದೇವೇಗೌಡ ಅಸಮಾಧಾನ ಹೊರಹಾಕಿದ್ದಾರೆ.
ಹಳೇ ವಿಷಯ ಕೆದಕಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಜಿ.ಟಿ. ದೇವೇಗೌಡ ಅಸಮಾಧಾನ ಹೊರಹಾಕಿದ್ದಾರೆ. ನಗರ ಪಾಲಿಕೆ ಚುನಾವಣೆ ಸಂಬಂಧ, ಟಿಕೆಟ್ ಹಂಚಿಕೆ ಸಂಬಂಧ ಚರ್ಚಿಸಿಲು ಕುಮಾರಸ್ವಾಮಿ ಕರೆ ಮಾಡಿದ್ದರು. ಆಗ ಹೆಚ್‌ಡಿಕೆ ಬಳಸಿದ ಭಾಷೆಯನ್ನು ಹೇಳಲಾಗುವುದಿಲ್ಲ. ಅಂತಹ ಭಾಷೆ ಬಳಸದಂತೆ ಕುಮಾರಸ್ವಾಮಿಗೆ ಹೇಳಿದ್ದೇನೆ. ಅದನ್ನು ಬಿಟ್ಟರೆ ಬೇರೆ ಏನನ್ನೂ ಕುಮಾರಸ್ವಾಮಿಗೆ ಹೇಳಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿಕೆ ನೀಡಿದ್ದಾರೆ.
ಹರೀಶ್‌ಗೌಡಗೆ ಹುಣಸೂರಿನಿಂದ ಸ್ಪರ್ಧಿಸುವ ಅರ್ಹತೆ ಇತ್ತು. ಆರಂಭದಲ್ಲಿ ಪ್ರಜ್ವಲ್ ರೇವಣ್ಣ ಕೂಡ ಹೆಸರು ಪ್ರಸ್ತಾಪಿಸಿದ್ದರು. ನಂತರ ಹೆಚ್. ವಿಶ್ವನಾಥ್‌ರನ್ನು ತಂದು ನಿಲ್ಲಿಸಲಾಯಿತು. ಆಗ ನಾನು, ನನ್ನ ಮಗ ಎಲ್ಲರೂ ಹೆಚ್. ವಿಶ್ವನಾಥ್ ಪರ ಪ್ರಚಾರ ಮಾಡಿದ್ದೇವೆ. ಬೈಎಲೆಕ್ಷನ್‌ನಲ್ಲಿ ಹರೀಶ್‌ಗೌಡರನ್ನು ನಿಲ್ಲಿಸುತ್ತೇವೆ ಎಂದಿದ್ದರು. ಹುಣಸೂರಲ್ಲಿ ಶೆಟ್ಟರು ಗೆದ್ದಾಗಿದೆ ಬೇಡ ಎಂದು ನಾನೇ ಹೇಳಿದ್ದೆ ಎಂದು ತಿಳಿಸಿದ್ದಾರೆ.