“ಬೇಕಾಗಿದ್ದಾರೆ” ಹುಡುಕಿಕೊಟ್ಟವರಿಗೆ 5 ಲಕ್ಷ ಬಹುಮಾನ

 

ಮೈಸೂರು:24 ಆಗಸ್ಟ್ 2021

ನ@ದಿನಿ

ದಿ. ೨೩-೮-೨೦೨೧ರಂದು ಮೈಸೂರು ನಗರದ ವಿದ್ಯಾರಣ್ಯಪುರಂ
ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯುವೆಲ್ಲರಿ ಶಾಪ್‌ಗೆ ನಾಲ್ಕು ಜನರು ನುಗ್ಗಿ ಬೆದರಿಸಿ ದರೋಡೆ ನಡೆಸಿದ್ದು, ಈ ಸಂದರ್ಭದಲ್ಲಿ ಅಮಾಯಕನೊಬ್ಬ ಗುಂಡಿಗೆ
ಬಲಿಯಾಗಿರುತ್ತಾನೆ.

ಸದರಿ ಪ್ರಕರಣವನ್ನು ನಗರ ಪೊಲೀಸ್ ಇಲಾಖೆಯು ಅತ್ಯಂತ
ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ಪತ್ತೆಗೆ ಎಲ್ಲಾ ಆಯಾಮಗಳಲ್ಲಿ ತನಿಖೆ
ನಡೆಸಲಾಗುತ್ತಿದೆ. ಸುಮಾರು ೨೫ ಪೊಲೀಸ್ ಅಧಿಕಾರಿಗಳು ಮತ್ತು ೮೦ ಜನ ಪೊಲೀಸ್
ಸಿಬ್ಬಂದಿಗಳನ್ನೊಳಗೊಂಡ ವಿವಿಧ ತಂಡಗಳು ಈ ಪ್ರಕರಣವನ್ನು ಭೇಧಿಸಲು ನಿರಂತರವಾಗಿ
ಪ್ರಯತ್ನಿಸುತ್ತಿವೆ. ಯಾವುದೇ ಸಾರ್ವಜನಿಕರು ಈ ಪ್ರಕರಣದ ಪತ್ತೆ ಬಗ್ಗೆ ಉಪಯುಕ್ತ ಮಾಹಿತಿ
ನೀಡಿ ಈ ಪ್ರಕರಣ ಭೇಧಿಸುವಲ್ಲಿ ಸಹಕರಿಸಿದಲ್ಲಿ ಅಂತಹವರಿಗೆ ಪೊಲೀಸ್ ಇಲಾಖೆಯಿಂದ
ರೂ. ೫ ಲಕ್ಷ ನಗದು ಬಹುಮಾನವನ್ನು ನೀಡಲಾಗುವುದು ಮತ್ತು ಮಾಹಿತಿ ನೀಡಿದವರ
ವಿವರಗಳನ್ನು ಗೌಪ್ಯವಾಗಿಡಲಾಗುವುದು. ಆದ್ದರಿಂದ ಸಾರ್ವಜನಿಕರು ತಮ್ಮ ಮಾಹಿತಿಯನ್ನು
ಯಾವ ಸಮಯದಲ್ಲಾದರೂ ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ನೀಡಿ ಸಹಕರಿಸಬಹುದು.
ಮೊಬೈಲ್ ದೂರವಾಣಿ ಸಂಖ್ಯೆ: ೯೪೮೦೮೦೨೨೦೦.

Leave a Reply

Your email address will not be published. Required fields are marked *