ಅಧಿಕಾರಿಗಳು ಬರಲಿ ಎಂದು ಗ್ರಾಮ ಸಭೆ ರದ್ದುಗೊಳಿಸಿದ ಗ್ರಾಮಸ್ಥರು

ಸರಗೂರು:7 ಫೆಬ್ರವರಿ 2022

ನಂದಿನಿ ಮೈಸೂರು

ಸರಗೂರು ತಾಲ್ಲೂಕಿನ ಹಾದನೂರು ಗ್ರಾಮ ಪಂಚಾಯಿತಿ ಯಲ್ಲಿ ಇಂದು ನಡೆದ ಗ್ರಾಮ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಬರಲಿ ಎಂದು ಸಾರ್ವಜನಿಕರು ಪಂಚಾಯಿತಿ ಆಧಿಕಾರಿಗಳ ವಿರುದ್ಧ ಒತ್ತಾಯಿಸಿದ್ದರು.

ತಾಲ್ಲೂಕಿನ ಆಧಿಕಾರಿಗಳು ಬರದೇ ಇರುವ ಕಾರಣ ಸಭೆಯಲ್ಲಿ ಸಾರ್ವಜನಿಕರು ಸಭೆಯನ್ನು ರದ್ದುಗೊಳಿಸಿ ಎಂದು ಪಟ್ಟುಹಿಡಿದ್ದರು.

ನೋಡಲಾಧಿಕಾರಿಗಳು ಹಾಗೂ ಅಧಿಕಾರಿಗಳು ವಿರುದ್ಧ ಎಲ್ಲಾ ಗ್ರಾಮಗಳ ಮುಖಂಡರು ಹಾಗೂ ಸಾರ್ವಜನಿಕರು ತರಾಟೆ ತೆಗೆದುಕೊಂಡಿದ್ದು

ನಂತರ ಸಾರ್ವಜನಿಕರು ಎಲ್ಲಾ ಇಲಾಖೆಯ ಅಧಿಕಾರಿಗಳು ಬರಬೇಕು ಇಲ್ಲಾಂದರೆ ಯಾವುದೇ ಸಭೆಯನ್ನು ಮಾಡಬೇಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿರವರಿಗೆ ಸಾರ್ವಜನಿಕರು ತಿಳಿಸಿದರು.

ತಾಲ್ಲೂಕಿನ ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಬರಬೇಕು ನಾವು ನಮ್ಮ ಸಮಸ್ಯೆ ಗಳನ್ನು ಅವರಿಗೆ ತಿಳಿಸಬೇಕು ಮತ್ತು ಅಲ್ಲಿನ ಇಲಾಖೆಗೆ ಬರುವ ಸೌಲಭ್ಯಗಳನ್ನು ಅವರಿಂದ ನಾವು ತಿಳಿದುಕೊಳ್ಳಬೇಕು

ಪಂಚಾಯಿತಿ ಯ ಅಧ್ಯಕ್ಷ ರ ಮತ್ತು ಸದಸ್ಯರ ಮೇರಗೆ ಸಭೆಯನ್ನು ರದ್ದು ಮಾಡಿ ಮುಂದಿನ ಸಭೆಯನ್ನು ಪಂಚಾಯಿತಿ ಯ ಸದಸ್ಯರು ಸೇರಿ ತಿರ್ಮಾನ ತಿಳಿಸಿಸುತ್ತಿವಿ ಎಂದರು.

ನಂತರ ಮಾತನಾಡಿದ ಮಾ ಗ್ರಾಪಂ ಅಧ್ಯಕ್ಷ ಸಿದ್ದರಾಜು ರವರ ಗ್ರಾಮ ಪಂಚಾಯಿತಿ ಸಂಬಂಧ ಪಟ್ಟ ಅಧಿಕಾರಿಗಳು ಯಾರು ಸಹ ಬಂದು ಅವರವರ ಇಲಾಖೆಯ ಸವಲತ್ತುಗಳನ್ನು ನೀಡದೇ ಅಧಿಕಾರಿಗಳು ಹಾದನೂರು ಗ್ರಾಮದಲ್ಲಿ ದಲಿತರೇ ಇರುವುದರಿಂದ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದರು.

ಹಾದನೂರು ಗ್ರಾಮದ ಮುಖಂಡರಾದ ಮಹದೇವಸ್ವಾಮಿ ಮಾತನಾಡಿ ವಾರ್ಡ್ ಸಭೆ ನಡೆದ ಮೂರು ದಿನದ ನಂತರ ಗ್ರಾಮಸಭೆ ಮಾಡಿದ್ದು ಎಲ್ಲಾ ಗ್ರಾಮಗಳ ಜನರು ಬಂದು .ನಮ್ಮ ಗ್ರಾಮ ಪಂಚಾಯಿತಿ ಯಾಗಿ ಹತ್ತು ವರ್ಷಗಳ ಕಳೆದರು ಹತ್ತುದಲ್ಲಿ ಎರಡು ಗ್ರಾಮಸಭೆ ನಡೆದರು ಯಾವುದೇ ಅಧಿಕಾರಿಗಳು ಬಂದು ನಮ್ಮ ಸಮಸ್ಯೆ ಗಳನ್ನು ಕೇಳುತ್ತಿಲ್ಲ ಮತ್ತು ನಮ್ಮ ಗ್ರಾಮಕ್ಕೆ ಅವರ ಇಲಾಖೆಯಿಂದ ಯಾವುದೇ ಸೌಲಭ್ಯಗಳ ಬಗ್ಗೆ ಮಾಹಿತಿ ಯನ್ನು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಜಯ್ ಕೆ ಬೆಳತೂರು ಜೊತೆ ನಂದಿನಿ ಮೈಸೂರು

Leave a Reply

Your email address will not be published. Required fields are marked *