ಮೈಸೂರು:7 ಫೆಬ್ರವರಿ 2022
ನಂದಿನಿ ಮೈಸೂರು
ರಾಯಚೂರು ಜಿಲ್ಲಾ ನ್ಯಾಯಾಧೀಶರು ಗಣರಾಜ್ಯೋತ್ಸವ ದಿನದಂದು ಡಾ.ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಕರೆನೀಡಿದ ಮೈಸೂರು ಬಂದ್ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ. ಬಿಜೆ ವಿಜಯ್ ಕುಮಾರ್ ಮಾತನಾಡಿದರು.
ಇದು ಯಾವುದೇ ರಾಜಕೀಯ ಪ್ರೇರಿತ ಅಥವಾ ಯಾವುದೇ ಚುನಾವಣೆ ಗೆಲುವು ಗಾಗಿ ನಡೆಯುತ್ತಿರುವ ಹೋರಾಟವಲ್ಲ. ಅಂಬೇಡ್ಕರ್ ಈ ದೇಶದ ಅಸ್ಮಿತೆ ಇದು ಪ್ರತಿಯೊಬ್ಬ ಭಾರತೀಯನ ಆತ್ಮಸಾಕ್ಷಿಯ ಸ್ವಯಂಘೋಷಿತ ಬಂದ್.
ದಿನೇದಿನೇ ರಾಜ್ಯದ ಸ್ಥಿತಿ ಗಂಭೀರವಾಗಿದ್ದು , ರಾಜ್ಯದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಈ ವಿಷಯವನ್ನು ನಿರ್ಲಕ್ಷ್ಯ ಮಾಡಿದ್ದು ರಾಜ್ಯದ ಸಂವಿಧಾನದತ್ತ ಸಂಸ್ಥೆಗಳು ಸರ್ಕಾರದ ಧೋರಣೆಗೆ ತಲೆಬಾಗಿರುವುದರಿಂದ ಕೂಡಲೇ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು ರಾಯಚೂರು ಜಿಲ್ಲಾ ನ್ಯಾಯಾಧೀಶರನ್ನು ವಜಾಗೊಳಿಸಿ ಸುಪ್ರೀಂ ಕೋರ್ಟಿನ ವಿಶೇಷ ನ್ಯಾಯಾಂಗದ ಅಡಿಯಲ್ಲಿ ತನಿಖೆ ನಡೆಸಬೇಕಾಗಿರುವುದು ತುರ್ತು ಅನಿವಾರ್ಯ. ಭಾರತದ ಸಂವಿಧಾನದ ಆರ್ಟಿಕಲ್ 124 ರಿಂದ 147 ರವರೆಗೆ ಈ ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅತ್ಯಂತ ಗಂಭೀರವಾಗಿ ಒತ್ತು ನೀಡಿರುವ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅದೇ ನ್ಯಾಯಾಂಗದ ವ್ಯವಸ್ಥೆಯ ನ್ಯಾಯಾಧೀಶರು ಅಗೌರವ ತೋರಿದ್ದು ಈ ದೇಶದ ದೊಡ್ಡ ದುರಂತ ಎಂದು ಆತಂಕ ವ್ಯಕ್ತಪಡಿಸಿದರು.