ವಿನಾಯಕನಗರದಲ್ಲಿ 42 ನೇ ವರ್ಷದ ಗೌರಿ ಗಣೇಶ ಪೂಜೆ,7 ಸಾವಿರ ಜನರಿಗೆ ಭೋಜನ

ಮೈಸೂರು:31 ಆಗಸ್ಟ್ 2022

ನಂದಿನಿ ಮೈಸೂರು

ಶ್ರೀ ವಿದ್ಯಾಗಣಪತಿ ದೇವಸ್ಥಾನ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಟ್ರಸ್ಟ್, ಗೌರಿ – ಗಣೇಶ ಹಬ್ಬದ 42 ನೇ ವಾರ್ಷಿಕೋತ್ಸವ ಸಮಾರಂಭ ಅದ್ದೂರಿಯಾಗಿ ಜರುಗಿತು.

ಮೈಸೂರಿನ ವಿನಾಯಕ ನಗರದಲ್ಲಿ ಇರುವ ದೇವಸ್ಥಾನದಲ್ಲಿ ಶುಕ್ಲ ಪಕ್ಷ ಚೌತಿ ಚಿತ್ತ ನಕ್ಷತ್ರದಂದು ಮುಂಜಾನೆಯೇ ಮಹಾಗಣಪತಿಗೆ ಪಂಚಾಮೃತಾ ಭಿಷೇಕ , ರುದ್ರಾಭಿಷೇಕ,ಕುಂಕುಮಾಭಿಷೇಕ ನೆರವೇರಿತು.


ನಂತರ ಗಣಪತಿ ಸ್ಥಾಪನೆ ಮಾಡಲಾಯಿತು. 1008 ಮೋದಕಗಳಿಂದ ಮಹಾ ಗಣಪತಿ ಹೋಮ ಮತ್ತು 108 ತೆಂಗಿನ ಕಾಯಿಗಳಿಂದ ವಿದ್ಯಾಗಣಪತಿ ಹೋಮ. ಮಹಾ ಪೂರ್ಣಾಹುತಿ ಅನಂತರ ಮಹಾಮಂಗಳಾರತಿ ನಡೆಯಿತು.ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ಗೌರಿ ಗಣಪತಿ ದರ್ಶನ ಪಡೆದರು.

ಅಧ್ಯಕ್ಷ ಪ್ರೋ.ಎಂ.ರಾಮಚಂದ್ರ ,ಗೌರವಾಧ್ಯಕ್ಷ ಮಂಜುನಾಥ್ ಮಾತನಾಡಿದ 1981 ರಲ್ಲಿ
ಪಡುವಾರಳ್ಳಿ ವಿನಾಯಕ ನಗರದಲ್ಲಿ‌ ವೈ ಎನ್ ತಮ್ಮಯ್ಯ
ನವಗ್ರಹ ವಿಗ್ರಹಗಳ ಸಂಸ್ಥಾಪಕರಾಗಿದ್ದಾರೆ.
ಶ್ರೀ ವಿದ್ಯಾಗಣಪತಿ ದೇವಸ್ಥಾನ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಟ್ರಸ್ಟ್, ಪ್ರತಿ ವರ್ಷ ಗೌರಿ – ಗಣೇಶ ಹಬ್ಬ ಆಚರಿಸಿಕೊಂಡು ಬರುತ್ತಿದ್ದೇವೆ.ಪ್ರತಿ ವರ್ಷ ಗಣಪತಿ ಕೂರಿಸಿತ್ತೇವೆ ಸಾಂಪ್ರದಾಯವಾಗಿ ಪೂಜೆ ಮಾಡುತ್ತೇವೆ.ಮೂರು ವರ್ಷಕ್ಕೊಮ್ಮೆ
ಟ್ರಸ್ಟ್‌ನ ಆಡಳಿತ ಮಂಡಳಿ ಮತ್ತು ಸದಸ್ಯರುಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ 7 ಸಾವಿರ ಜನರಿಗೆ ಭೋಜನ ವ್ಯವಸ್ಥೆ ಮಾಡಿಸುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ
ಕೋಶಾಧ್ಯಕ್ಷ ಬಿ.ರಾಮಸ್ವಾಮಿ, ರುಚಿ ಸಂಸ್ಥೆ ಮಾಲೀಕ ಮಂಜುನಾಥ್, ಟ್ರಸ್ಟಿ ಮಂಜುನಾಥ್ ಸೇರಿದಂತೆ ಹಲವಾರು ಸದಸ್ಯರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *