ನಂದಿನಿ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಲ್ಲಡೆ ಗೌರಿ ಗಣೇಶ ಹಬ್ಬದ ಸಡಗರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕಾಡಿನಿಂದ ನಾಡಿಗೆ ಬಂದಿರುವ ಮೊದಲ ತಂಡದ 9 ಆನೆಗಳು ಹಾಗೂ ಅರಮನೆಯ 2 ಆನೆಗಳಿಗೆ ಮೈಸೂರು ಅರಣ್ಯ ಇಲಾಖೆಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಬ್ಬು,ಬೆಲ್ಲ,ಬಾಳೆಹಣ್ಣು, ತಿಂಡಿ ತಿನಿಸುಗಳನ್ನು ಆನೆಗೆ ನೀಡಿ
ಗಜಾನನಿಗೆ ಪೂಜೆ ಸಲ್ಲಿಸಿದರು.
ಇದೇ ವೇಳೆ ಡಿಸಿಎಫ್ ಕರಿಕಾಳನ್ ಮಾತನಾಡಿ
ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿ ದಿನದಂದ್ದು ದಸರಾ 9 ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು ಎಲ್ಲ ಆನೆಗಳು ಆರೋಗ್ಯವಾಗಿದೆ. ಆನೆಗಳು ತಾಲೀಮುಗಳಲ್ಲಿ ಉತ್ತಮ ಸ್ಪಂದನೆ ನೀಡುತ್ತಿದೆ. ಈಗಾಗಲೇ ಎರಡು ಬಾರಿ ಮರಳು ತಾಲೀಮು ಮುಗಿಸಿ 3 ನೇ ಹಂತದ ತಾಲೀಮು ನಡೆಸುತ್ತಿದೆ ಎರಡನೇ ತಂಡದ ಆನೆಗಳು ಸೆ.7 ರಂದು ಅರಮನೆಗೆ ಬರಲಿದೆ. ಸೆಪ್ಟೆಂಬರ್ 5 ರಂದು ಮರದ ಅಂಬಾರಿ ತಾಲೀಮು ಆರಂಭಿಸಲಾಗುವುದು ಎಂದರು.
ಇಂದು ಗೌರಿ ಗಣೇಶ ಹಬ್ಬ. ಈ ಹಿನ್ನಲೆಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರೆಗೆ ಆಗಮಿಸಿರುವ 9 ಆನೆಗಳು ಸೇರಿ ಎಲ್ಲಾ ಆನೆ ಗಳಿಗೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ. ಗಣಪತಿಗೆ ಇಷ್ಟವಾದ ಭಕ್ಷ ಭೋಜನ ಮತ್ತು ಪಂಚ ಫಲ ನೀಡುವುದರ ಮೂಲಕ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಅರ್ಚಕರಾದ ಪ್ರಹ್ಲಾದ್ ರಾವ್ ತಿಳಿಸಿದರು.
ನಂದಿನಿ ಮೈಸೂರು