ಹೆಂಗಳೆಯರನ್ನ ಕೈ ಬೀಸಿ ಕರೆಯುತ್ತಿದೆ ಬಿದುರಿನ ಬಾಗೀನ ,ಮೈಸೂರು ರಾಜಮನೆತನದವರೂ ಇಲ್ಲಿ ಬಾಗೀನ ಖರೀದಿಸುವುದು ವಿಶೇಷ

ಮೈಸೂರು: 29 ಆಗಸ್ಟ್ 2022

ನಂದಿನಿ ಮೈಸೂರು

ಹೆಂಗಳೆಯರಿಗೆ ಎಲ್ಲಿಲ್ಲದ ಖುಷಿ ಕೊಡುವ ಸಂಭ್ರಮದ ಹಬ್ಬ ಬಂದೇ ಬಿಟ್ಟಿದೆ.
ಗೌರಿ ವ್ರತ ಅಂದ್ರೆ ಹೆಣ್ಮಕ್ಳಿಗೆ ಎಲ್ಲಿಲ್ಲದ ಖುಷಿ. ಸೀರೆ ತೊಟ್ಟು ರೆಡಿ ಆಗೋದೇನು. ಅಕ್ಕಪಕ್ಕದ ಮನೆಯವ್ರನ್ನ ಕೂಗಿ ಬಾಗಿನ ಕೊಡೋದೇನು ಆ ಸಂಭ್ರಮಕ್ಕೆ ಬೆಲೆಕಟ್ಟೋಕೆ ಹಾಗಲ್ಲ ನೋಡಿ.ಜನಸಾಮಾನ್ಯರಲ್ಲದೇ ಮೈಸೂರಿನ ಮಹಾರಾಜ ಮನೆತನದವರು ಕೂಡ ಈ ಅರಳಿಕಟ್ಟೆ ಕೆಳಗೆ ತಯಾರಾಗುವ ಬಾಗೀನ ಮೊರ ಕೊಂಡುಕೊಂಡು ಹೋಗುವುದು ಒಂದು ವಿಶೇಷ.ಅಂದ ಹಾಗೇ ಈ ಬಿದುರಿನ ಮೊರಕ್ಕೆ ಯಾಕಿಷ್ಟು ಬೇಡಿಕೆ ಅನ್ನೊಂದನ್ನ ನಾವು ತಿಳಿಸಿಕೊಡುತ್ತೇವೆ ಬನ್ನಿ.

ಸಾಲು ಸಾಲಾಗಿ ಜೋಡಿಸಿರುವ ಬಿದಿರುಗಳು,ಬಾಗೀನ ಮೊರ ಎಣೆಯುತ್ತಿರುವ ಮಹಿಳೆಯರು, ಮತ್ತೊಂದು ಕಡೆ ಈಗಾಗಲೇ ತಯಾರಾಗಿ ಗ್ರಾಹಕರನ್ನ ಕೈಬೀಸಿ ಕರೆಯುತ್ತಿರುವ ಬಿದರಿನ ಮೊರಗಳು.

ಹೌದು ಮೈಸೂರಿನ 101 ಗಣಪತಿ ದೇವಸ್ಥಾನದ ಪಕ್ಕದಲ್ಲಿರುವ ಅರಳಿ ಮರದ ಕೆಳಗೆ ಕುಳಿತಿರುವ ಮಹಿಳೆಯರು
ಜಬರ್ದಸ್ತಾಗಿ ಮೊರ ತಯಾರಿ ಮಾಡ್ತೀದ್ದಾರೆ. ಮಹಿಳೆಯರು ಅಷ್ಟೆ ಮೊರ ಖರಿದೀಸುವಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕೆಲವ್ರು ಒಂದು ಜೊತೆ ತಗೊಳ್ತಿದ್ರೆ ಮತ್ತೆ ಕೆಲವ್ರು ಡಜನ್ ಗಟ್ಲೆ ಖರೀದಿ ಮಾಡ್ತಿದ್ದಾರೆ. ಅಂದ್ಹಾಗೆ ಮುತ್ತೈದೆರೆಲ್ಲಾ ಹೀಗೆ ಮೊರಗಳನ್ನ ಖರೀದಿ ಮಾಡೋಕೆ ಕಾರಣ ಈ ಪುಟ್ ಗೌರಿ. 

ನಾಳೆ ಗೌರಿ ಹಬ್ಬ. ಹಬ್ಬದಲ್ಲಿ ಮುತ್ತೈದೆಯರನ್ನ ಮನೆಗೆ ಕರೆದು ಬಾಗಿನ ಕೊಡೋದು ವಾಡಿಕೆ. ಅದ್ರಲ್ಲೂ ಬಿದಿರಿನಿಂದ ಮಾಡಿದ ಮೊರದಿಂದ ಬಾಗಿನ ಕೊಟ್ರೆ ಶ್ರೇಷ್ಠ  ಅಂತೆ. ಯಾಕಂದ್ರೆ ಬಿದಿರು ಊರ್ದ್ವ ಮುಖವಾಗಿ ಅತಿ ಎತ್ತರವಾಗಿ ಬೆಳೆಯುತ್ತೆ‌. ಹೀಗಾಗಿ ಬಾಗಿನ ಕೊಳ್ಳೋವ್ರು ತೆಗೆದುಕೊಳ್ಳೋವ್ರ ವಂಶ ಕೂಡ ಬೆಳೆಯುತ್ತೆ ಅನ್ನೋ ನಂಬಿಕೆ ಇದ್ದು ಎಲ್ಲಾ ಮೊರ ಖರೀದಿನಲ್ಲಿ ಇವತ್ತು ಬ್ಯುಸಿ ಆಗಿದ್ರು.

ಕಳೆದೆರಡು ಬಾರಿ ಕೊರೋನಾ ಇರೋದ್ರಿಂದ ಬಿದಿರನ್ನ ತರ್ಸೋಕೆ ಸ್ವಲ್ಪ ಕಷ್ಟ ಆಗಿತ್ತು.ವ್ಯಾಪಾರ ಕೂಡ ಕಡಿಮೆ ಇತ್ತು. ಆರು ಕಾಸು ಮೂರು ಕಾಸಿಗೆ ನಂಜನಗೂಡಿನಿಂದ ಮೈಸೂರಿಗೆ ಬಂದು ಹೊಟ್ಟೆ ಪಾಡಿಗಾಗಿ ಜೀವನ ನಡೆಸುತ್ತಿದ್ದೇವೆ.ಈ ಬಾರೀ ಬೆಲೆ ಸ್ವಲ್ಪ ಜಾಸ್ತಿ ಆಗಿದೆ. 160 ರೂಪಾಯಿಯಿಂದ 180 ವರಗೂ ಮಾರಾಟ ಮಾಡ್ತೀದ್ದೇವೆ.ಈ ಬಾರಿ ಬಿದುರಿನ ಮೊರಕ್ಕೆ ಹೆಚ್ಚು ಬೇಡಿಕೆ ಇದೆ. ಮೈಸೂರಿನ ರಾಜಮನೆತನದವರೂ ಕೂಡ ಇಲ್ಲಿಯೇ ಬಂದು ಬಿದುರಿನ ಮೊರ ಕೊಂಡುಕೊಳ್ಳುತ್ತಾರೆ.ಇತ್ತೀಚೆಗೆ ಪ್ಲಾಸ್ಟಿಕ್ ಮೊರಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.ಪ್ಲಾಸ್ಟಿಕ್ ಮೊರದಿಂದ ಬಾಗೀನ ಅರ್ಪಿಸಿದರೇ ಅದು ಶ್ರೇಯಸ್ ಅಲ್ಲ.
ಗೌರಿ ಹಬ್ಬಕ್ಕೆ ಮುತೈದೆಯರಿಗೆ ಬಿದುರಿನ ಬಾಗೀನ ನೀಡಿದರೇ ಒಳಿತಾಗುತ್ತದೆ.
ಶುಭ ಸಮೃದ್ದಿಯ ಸಂಕೇತವಾಗಿ ಹಿಂದೂಗಳ ಆಚರಣೆಯಲ್ಲಿ ಬಾಗೀನ ಕೊಡುವುದು ರೂಢಿಯಲ್ಲಿದೆ.ಬಾಗೀನ ಮೊರದೊಳಗೆ ಅರಿಶಿನ ಕುಂಕುಮ,ಅಕ್ಕಿ,ಬೆಲ್ಲ.ಸೀರೆ,ರವಕೆ,ಬಳೆ ಸೇರಿದಂತೆ ಧಾನ್ಯಗಳನ್ನು ಇಟ್ಟು ಮುತೈದೆಯರಿಗೆ ಕೊಟ್ಟು ಬಾಗೀನ ತೆಗೆದುಕೊಳ್ಳುತ್ತಾರೆ.
ಭಕ್ತಿ ಶ್ರದ್ದೇಯಿಂದ ಎಲ್ಲರೂ ಗೌರಿ ಪೂಜೆ ಮಾಡಬೇಕು.ಮುಂದಿನ ಯುವ ಪೀಳಿಗೆಗೂ ನಮ್ಮ ಸಂಪ್ರದಾಯ ಗೌರಿ ಬಾಗೀನದ ಬಗ್ಗೆ ತಿಳಿಸಿಕೊಡಬೇಕು ಎನ್ನುತ್ತಾರೆ ಬಾಗೀನ ತಯಾರಿಸುವ ಮಹಿಳೆಯರು.

ಒಟ್ಟಾರೆ ಕೇಳೋದಾದರೇ 
ಗೌರಿ ಹಬ್ಬಕ್ಕೆ ಬಿದುರಿನ ಬಾಗೀನ ತಯಾರಿಸುವ ಕುಟುಂಬ ಗೌರಿ ಹಬ್ಬ ಬರುವಿಕೆಗಾಗಿಯೇ ಕಾಯುತ್ತಾರೆ.ಬಾಗೀನ ಮಾರಾಟ ಮಾಡಿ ಮತ್ತೊಬ್ಬರು ಸಂಮೃದ್ದಿಯಾಗಲಿ ಎಂದು ಹಾರೈಸುವ ಇವರು ಆರು ಕಾಸು ಮೂರು ಕಾಸು ಸಂಪಾದನೆಗಾಗಿ ದೂರದ ನಂಜನಗೂಡಿನಿಂದ ಮೈಸೂರಿಗೆ ಬಂದು ಜೀವನ ಕಟ್ಟಿಕೊಂಡಿದ್ದಾರೆ.ಬಿದುರು ತಯಾರು ಮಾಡುವ ಕುಟುಂಬಕ್ಕೆ ಸರ್ಕಾರದಿಂದ ಒಂದಷ್ಟು ಸಹಾಯ ಹಸ್ತ ಬೇಕಿದೆ.

Leave a Reply

Your email address will not be published. Required fields are marked *