ಮೈಸೂರು:28 ಆಗಸ್ಟ್ 2022
ನಂದಿನಿ ಮೈಸೂರು
ಶ್ರೀ ಅಭಯಂ ಫೌಂಡೇಷನ್ ವತಿಯಿಂದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ 108ಸುಮಂಗಲಿಯರಿಗೆ ಸ್ವರ್ಣಗೌರಿ ಬಾಗಿನ ಸಮರ್ಪಣೆ ಹಾಗೂ 108 ಭಕ್ತ ಕುಟುಂಬಗಳಿಗೆ ಸಾಂಪ್ರದಾಯಿಕ ಗೌರಿ ಮತ್ತು ಗಣೇಶ ವಿತರಿಸಲಾಯಿತು.
ಅನಂತರ 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವ ನೆನಪಿನಲ್ಲಿ ಭಾರತೀಯ ನೌಕಾಪಡೆಯ ಶ್ರೀ ಗಿರಿಜಾ ರಾಜು ಮತ್ತು ವೈ ಆರ್ ರಾಜು ಶೆಟ್ಟಿ ,ದಂಪತಿಗೆ ಸನ್ಮಾನಿಸಿ ಬಾಗಿನ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹಿರಿಯ ಸಮಾಜ ಸೇವಕರು ಹಾಗೂ ಧಾರ್ಮಿಕ ಚಿಂತಕರಾದ ಕೆ ರಘುರಾಂ ವಾಜಪೇಯಿ
ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ,ಧಾರ್ಮಿಕ ಕಾರ್ಯಕ್ರಮಗಳಿಂದ ಸಹಬಾಳ್ವೆಯ ಜೀವನ ನಡೆಸಲು ಸಾಧ್ಯ
ಭಾರತ ದೇಶ ಅನೇಕ ಜಾತಿ, ಧರ್ಮ, ದೇವರು ಹಾಗೂ ಸಂಸ್ಕೃತಿ, ಸಂಪ್ರದಾಯಗಳ ದೇಶ. ನಾವೆಲ್ಲರೂ ಭಾರತೀಯರು ಎನ್ನುವ ಸಮನ್ವಯ ಭಾವ ನಮ್ಮೆಲ್ಲರಲ್ಲಿರಲಿ. ದೇವರ ಮೇಲೆ ಅಪಾರ ನಂಬಿಕೆ, ಶ್ರದ್ಧೆ, ಭಯ, ಭಕ್ತಿ ಹೊಂದಿದ ಜನರು ಭಾರತದಲ್ಲಿ ಮಾತ್ರ ಇದ್ದಾರೆ. ಹೀಗಾಗಿ ಭಾರತ ದೇಶ ಶ್ರೀಮಂತ ಧಾರ್ಮಿಕ ಪರಂಪರೆ ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಪರಮಪೂಜ್ಯ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ,ಅಧ್ಯಕ್ಷತೆಯನ್ನು ಹಿರಿಯ ಸಮಾಜ ಸೇವಕರು ಮತ್ತು ಧಾರ್ಮಿಕ ಮುಖಂಡರಾದ ಕೆ ರಘುರಾಂ ವಾಜಪೇಯಿ ,
ಮುಖ್ಯ ಅತಿಥಿಗಳಾಗಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಶ್ರೀ ಫೌಂಡೇಶನ್ ಅಧ್ಯಕ್ಷರಾದ ಡಾ. ಎಂ ಎಸ್ ಮುರಳೀಧರ್ ಶಸ್ತಾ,
ಉದ್ಯಮಿ ಲಯನ್ ಡಾ.ಎಸ್ ವೆಂಕಟೇಶ್ ,ಒಂಟಿಕೊಪ್ಪಲಿನ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳಾದ ಜಿ ಸಿ ಪುಟ್ಟಸ್ವಾಮಿ ,ಧಾರ್ಮಿಕ ಚಿಂತಕರಾದ ಸೌಭಾಗ್ಯ ,ಚಕ್ರಪಾಣಿ ,
ಮೋಹನ್ ,ವೆಂಕಟೇಶ್ ,
ಮಮತೆಯ ಮಡಿಲು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಜ್ಯೋತಿ ಪ್ರಭಾ ,ಕಂದಾಯ ಅಧಿಕಾರಿ ಬಿ ಟಿ ಧನಲಕ್ಷ್ಮಿ ,
ಚಾಮುಂಡೇಶ್ವರಿ ದೇವಾಲಯ ಚಾಮುಂಡಿ ಬೆಟ್ಟ ಧರ್ಮದರ್ಶಿ ಸವಿತಾ ಘಾಟ್ಕೆ,ವರಲಕ್ಷ್ಮಿ ಅಜಯ್ ,
ಮಂಜುಳಾ ರಮೇಶ್ ,ವಕೀಲರಾದ ಹೇಮಲತಾ ,ಎಚ್ ವಿ ಸುಬ್ಬರಾವ್ ,ಸುಲೋಚನಾ ,ರವೀಂದ್ರಕುಮಾರ್ ,ಹೇಮಲತಾ, ವೆಂಕಟೇಶ್ ಮೂರ್ತಿ, ಮಂಜುಳಾ ಉಮೇಶ್ ,ಪದ್ಮ ನಾಗರಾಜು ,ಹಾಗೂ ಇನ್ನಿತರರು ಹಾಜರಿದ್ದರು.