ಅಂಬಾರಿ ಹೊರುವ ಭವಿಷ್ಯದ ಆನೆ ಗೋಪಾಲಸ್ವಾಮಿ: ಡಿಸಿಎಫ್ ಕರಿಕಾಳನ್

ಸ್ಟೋರಿ :ನಂದಿನಿ ಮೈಸೂರು

ಅಂಬಾರಿ ಹೊರುವ ಭವಿಷ್ಯದ ಆನೆ ಗೋಪಾಲಸ್ವಾಮಿ: ಡಿಸಿಎಫ್ ಕರಿಕಾಳನ್

ಇನ್ನೂ 40ರ ಆಸುಪಾಸು ವಯಸ್ಸಿನ ಆಕರ್ಷಕ ಮೈಕಟ್ಟು ಹೊಂದಿದ್ದ ಗೋಪಾಲಸ್ವಾಮಿ ಅಪಾರ ಅಭಿಮಾನಿಗಳನ್ನು ಹೊಂದಿತ್ತು. ದಸರಾ ಗಜಪಡೆಯಲ್ಲಿ ಅತಿ ಎತ್ತರವಾದ ಹಾಗೂ 5400 ಕೆ.ಜಿ. ತೂಕ ಹೊಂದಿದ್ದ ಗೋಪಾಲಸ್ವಾಮಿ ಆನೆಯು ಅಭಿಮನ್ಯುವಿನ ನಂತರ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಭರವಸೆ ಮೂಡಿಸಿತ್ತು.

ಜಗತ್ಪ್ರಸಿದ್ಧ ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಹಾಗೂ ಅಭಿಮನ್ಯು ನಂತರದ ಅಂಬಾರಿ ಆನೆ ಎಂದೆ ಬಿಂಬಿತವಾಗಿದ ಗೋಪಾಲಸ್ವಾಮಿ ಸಾಕಾನೆಯು ಇಂದು ಕಾಡಾನೆಯೊಂದಿಗೆ ನಡೆದ ಕಾದಾಟದಲ್ಲಿ ದಾಳಿಗೆ ತುತ್ತಾಗಿ ಮೃತಪಟ್ಟಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹನಗೋಡು ಹೋಬಳಿ ಕೊಳುವಿಗೆ ಬಳಿಯ ಅರಣ್ಯ ಪ್ರದೇಶದಲ್ಲಿ ಗೋಪಾಲಸ್ವಾಮಿ ಸಾಕಾನೆಯು ಮೃತಪಟ್ಟಿದ್ದು, ನಿನ್ನೆ ನೇರಳಕುಪ್ಪೆ ಬಿ ಹಾಡಿಯ ಕ್ಯಾಂಪಿನಿಂದ ಮೇಯಲು ಅರಣ್ಯಕ್ಕೆ ಬಿಟ್ಟಿದ್ದ ವೇಳೆ ಮಸ್ತಿಗೆ ಬಂದಿದ್ದ ಗೋಪಾಲಸ್ವಾಮಿ ಕೊಳುವಿಗೆ ಅರಣ್ಯ ಪ್ರದೇಶಕ್ಕೆ ನುಗ್ಗಿದೆ.

ಈ ಹಿಂದೆ ಅರಣ್ಯ ಇಲಾಖೆಯವರು ಪುಂಡಾಟ ನಡೆಸುತ್ತಿದ್ದ ಅಯ್ಯಪ್ಪ ಎಂಬ ಕಾಡಾನೆಗೆ ಕಾಲರ್ ಅಳವಡಿಸಿದ್ದು, ಈ ಪುಂಡಾನೆಯ ದಾಳಿಗೆ ಸಿಲುಕಿ ತೀವ್ರ ಗಾಯಗೊಂಡಿದ ಗೋಪಾಲಸ್ವಾಮಿಗೆ
ಮಂಗಳವಾರ ಮಧ್ಯಾನದಿಂದ ನಾಲ್ಕು ವೈದ್ಯರ ತಂಡ ಎಲ್ಲಾ ರೀತಿಯ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದೆ.

ಸ್ಥಳಕ್ಕೆ ಡಿ.ಸಿ.ಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎ.ಸಿ.ಎಫ್ ದಯಾನಂದ್ ಸೇರಿದಂತೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದರು.

ಗೋಪಾಲಸ್ವಾಮಿ ಬಲಿಷ್ಠನಾಗಿದ್ದ. ದಸರಾ ಆನೆಗಳ ಪೈಕಿ ಗೋಪಾಲಸ್ವಾಮಿ ಆನೆ ಭವಿಷ್ಯದಲ್ಲಿ ಅಂಬಾರಿ ಆನೆಯಾಗುತ್ತಿತ್ತು.13 ಬಾರೀ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರೆಯಲ್ಲಿ ಭಾಗಿಯಾಗಿದ್ದ ಗೋಪಾಲಸ್ವಾಮಿ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿದ್ದ ಎಂದು ಡಿಸಿಎಫ್ ಕರಿಕಾಳನ್ ದಸರಾ ಸಂದರ್ಭದಲ್ಲಿ ಮಾಹಿತಿ ನೀಡಿದ್ದರು.

*ಡಿಸಿಎಫ್ ಕರಿಕಾಳನ್*

2012ರಿಂದ ಪ್ರತಿ ವರ್ಷ ದಸರಾ ಮೆರವಣಿಗೆಯಲ್ಲಿ ಸತತ ಭಾಗವಹಿಸುತ್ತಿದ್ದ ಗೋಪಾಲಸ್ವಾಮಿಯು ನಿಶಾನೆ, ನೌಪತ್ ಆನೆ, ಸಾಲಾನೆ ಹಾಗೂ ಪಟ್ಟದ ಆನೆಯಾಗಿ ಹಲವಾರು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಎಲ್ಲರ ಪ್ರೀತಿ ಗಳಿಸಿತ್ತು.
ದಸರಾ ಪಡೆಯಲ್ಲೇ ಎತ್ತರದ ಮೈಕಟ್ಟು ಹೊಂದಿದ್ದ ಗೋಪಾಲಸ್ವಾಮಿ.

ದಸರಾ ಗಜಪಡೆಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಗೋಪಾಲಸ್ವಾಮಿ ಆನೆಯು ಅಕಾಲಿಕ ಸಾವಿಗೀಡಾಗಿರುವುದು ಮಾವುತ ಕಾವಾಡಿ ಕುಟುಂಬ, ಅಧಿಕಾರಿಗಳು, ಪ್ರಾಣಿಪ್ರೀಯರಿಗೆ ನೋವನ್ನುಂಟು ಮಾಡಿದೆ.

Leave a Reply

Your email address will not be published. Required fields are marked *