2023ಕ್ಕೆ ನರಸಿಂಹರಾಜ ಕ್ಷೇತ್ರದಿಂದ ರಾಬರ್ಟ್ ಇಮ್ಮಾನುವೇಲ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ

ನಂದಿನಿ ‌ಮೈಸೂರು

2023ರ ವಿಧಾನಸಭಾ ಚುನಾವಣೆಗೆ ನರಸಿಂಹರಾಜ ಕ್ಷೇತ್ರದಿಂದ ರಾಬರ್ಟ್ ಇಮ್ಮಾನುವೇಲ್ ರವರನ್ನ
ಕಣಕ್ಕಿಳಿಸಿದ್ದೇವೆ ಎಂದು ರಾಜ್ಯ ಉಪಾಧ್ಯಕ್ಷ ಅಂತೋಣಿ ಸೀಲರ್ ಅಧಿಕೃತವಾಗಿ ಘೋಷಣೆ ಮಾಡಿದರು.

ಇದೇ ಸಂದರ್ಭದಲ್ಲಿ ಅಭ್ಯರ್ಥಿ
ರಾಬರ್ಟ್ ಇಮ್ಮಾನುವೇಲ್ ಮಾತನಾಡಿ
ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ನರಸಿಂಹರಾಜ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದೇನೆ.ಎನ್ ಆರ್ ಕ್ಷೇತ್ರದಲ್ಲಿ ಘಟಾನುಘಟಿಗಳು ಚುನಾವಣೆಯಲ್ಲಿ ಸ್ಪರ್ಥಿಸುತ್ತಿದ್ದಾರೆ.ಯಾರೇ ಸ್ಪರ್ಥಿಸಿದರೂ ಕೂಡ ಸಮಸ್ಯೆ ಇಲ್ಲ.ಜನಸೇವೆಗಾಗಿ ನಾನು ಚುನಾವಣೆಯಲ್ಲಿ ನಿಲ್ಲುತ್ತಿದ್ದೇನೆ.ಒಲವು ಫೌಂಡೇಶನ್ ಸಮತೆ, ಸೇವೆ ಮತ್ತು ಸಬಲತೆಯ ಧೈಯದಡಿಯಲ್ಲಿ ಆರಂಭಗೊಂಡ ಸಂಸ್ಥೆಯಾಗಿದೆ. ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ.ಈ ನಿಟ್ಟನಲ್ಲಿ ರಾಜಕೀಯ ವ್ಯವಸ್ಥೆಯಲ್ಲೂ ಹೊಸ ಆಯಾಮಗಳನ್ನು ರೂಪಿಸಲು ಚರ್ಚೆ ನಡೆಸಿ ಕಣಕ್ಕಿಳಿಯುತ್ತಿದ್ದೇನೆ.ಸ್ಪರ್ದೇ ಬಗ್ಗೆ ಇಂದು ಅಧಿಕೃತ ಘೋಷಣೆಯಾಗಿದೆ.
ಮುಂದಿನ ದಿನಗಳಲ್ಲಿ ನಮ್ಮ ಚುನಾವಣೆಯ ರೂಪರೇಷೆಗಳನ್ನು ತಿಳಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಮನೋಹರ್,ಮೆಲ್ವೀನ್,ವಿಲಿಯಂ ಪುಷ್ಪರಾಜ್ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *