ಜಿಂಕೆ ಮಾಂಸ ಸಾಗಾಣಿಕೆ,ಜಿಂಕೆ ಮಾಂಸ ,ಬೈಕ್ ವಶಪಡಿಸಿಕೊಂಡ ಕೌಲಂದೆ ಪೋಲೀಸರು

 

ಕೌಲಂದೆ:28 ಅಕ್ಟೋಬರ್ 2021

ನ@ದಿನಿ

ಬೈಕ್ ನಲ್ಲಿ ಜಿಂಕೆ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಜಿಂಕೆ ಮಾಂಸ ಸಾಗಿಸುತ್ತಿದ್ದರೇ ಎಂಬ ಮಾಹಿತಿ ಮೇರೆಗೆ ಕೌಲಂದೆ ಪೋಲಿಸ್ ಠಾಣೆಯ ಪಿಎಸ್ ಐ ಮಹೇಂದ್ರ .ಬಿ ಹಾಗೂ ಸಿಬ್ಬಂದಿಗಳಾದ ಲೋಕೇಶ್,ಕೆಂಪರಾಜು,ಉಮೇಶ್ ಹಳೆಪುರ ದಾರಿಯಲ್ಲಿ ಕಾದು ಕುಳಿತಿದ್ದರು.ಬೈಕ್ ನಲ್ಲಿ ಜಿಂಕೆ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಪೋಲಿಸರನ್ನ ಕಂಡ ಕೂಡಲೇ ಬೈಕ್ ಅನ್ನ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.ಜಿಂಕೆ ಮಾಂಸವನ್ನ ವಶಕ್ಕೆ ಪಡೆದುಕೊಂಡಿರುವ ಪೋಲಿಸರು ಪ್ರಕರಣವನ್ನು‌ ನಂಜನಗೂಡು ಅರಣ್ಯ ವಲಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *