ಮೈಸೂರು:28 ಅಕ್ಟೋಬರ್ 2021
ನ@ದಿನಿ
ಮೈಸೂರು ತಾಲ್ಲೂಕು ಟಿ.ಕಾಟೂರಿನಲ್ಲಿ ಕೋವಿಡ್ 19 ಲಸಿಕೆ ತೆಗೆದುಕೊಳ್ಳದೆ ಭಯ ಭೀತರಾಗಿದ್ದ ಜನರನ್ನು ಹುಡುಕಿ ಅವರ ಮನೆ ಮನೆಗೆ ತೆರಳಿ ಧೈರ್ಯ ತುಂಬಿ ಲಸಿಕೆ ನೀಡಿದರು.
ಮಾರ್ಬಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಮಾರ್ಬಳ್ಳಿ, ಮಾರ್ಬಳ್ಳಿ ಹುಂಡಿ ಹಾಗೂ ಟಿ.ಕಾಟೂರು ಗ್ರಾಮದವರನ್ನೂ ಸೇರಿ ಒಟ್ಟು 64 ಜನರಿಗೆ ಲಸಿಕೆ ನೀಡಲಾಯಿತು.
24 ಜನಕ್ಕೆ ಮೊದಲನೇ ಲಸಿಕೆ ಮತ್ತು 40 ಜನಕ್ಕೆ ಎರಡನೇ ಲಸಿಕೆಗಳನ್ನು ಟಿ.ಕಾಟೂರು ಗ್ರಾಮದಲ್ಲಿ ನೀಡಲಾಯಿತು. ಮನೆ ಮನೆಗೆ ತೆರಳಿ ವೃದ್ಧರು,ಅಂಗವಿಕಲರಿಗೆ ಮತ್ತು ಲಸಿಕೆ ಹಾಕಿಸಿಕೊಳ್ಳೋದಕ್ಕೆ ಭಯಬೀತರಾಗಿ ಮನೆಯಲ್ಲಿ ಇದ್ದ ಜನರನ್ನು ಮನೆವೊಲಿಸಿ ಲಸಿಕೆ ಹಾಕಿಸಿಕೊಳ್ಳಲು ಯಶಸ್ವಿಯಾದೆವು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ದೇವರಾಜ್ ಟಿ ಕಾಟೂರು, ಪಿ.ಡಿ.ಓ. ಜ್ಯೋತಿ, ಕಾರ್ಯದರ್ಶಿ ಮಹೇಶ್,ನೋಡಲ್ ಅಧಿಕಾರಿಗಳಾದ ರವಿಕುಮಾರ್ ಅವರು,ಆಶಾ ಕಾರ್ಯಕರ್ತರಾದ ರೇಣುಕಾ,ಆಶಾ , ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಸಿಂಧು,ಮಂತಮ್ಮ ಮತ್ತು ಗ್ರಾ.ಪಂ ಸಿಬ್ಬಂದಿಗಳಾದ ರಾಜೇಶ್,ಕುಮಾರ್ ಹಾಜರಿದ್ದರು.