ಮೈಸೂರು:28 ಅಕ್ಟೋಬರ್ 2021
ನ@ದಿನಿ
ಮೈಸೂರು: ಸಲಗ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ಚಿತ್ರದಲ್ಲಿ ಮೈಸೂರಿನ ಪ್ರತಿಭೆಗಳು ನಟಿಸಿದ್ದು, ಅವರೇ ಚಿತ್ರದ ಬೆನ್ನೆಲುಬು ಎಂದು ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ತಿಳಿಸಿದರು.
ಸಲಗ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಯಶಸ್ಸನ್ನು ನಟ, ನಿರ್ದೇಶಕ ದುನಿಯಾ ವಿಜಯ್ ಮಾಧ್ಯಮದವರೊಂದಿಗೆ ಹಂಚಿಕೊಂಡರು.
ಚಿತ್ರದಲ್ಲಿ ಬಾಲನಟರು ಮನೋಜ್ಞವಾಗಿ ಅಭಿನಯಿಸಿದ್ದು, ಬಾಲ ಕಲಾವಿದರನ್ನು ರಂಗಾಯಣ ಹಾಗೂ ನಟನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ ೧೮ ನಿಮಿಷ ಮಕ್ಕಳೇ ಬರುತ್ತಾರೆ ಎಂದರು.
ಭೂಗತ ಲೋಕದ ಕುರಿತು ಚಿತ್ರವಿದ್ದು, ಮಕ್ಕಳ ಬದುಕು ಹಾಳಾಗಬಾರದು, ಅಂತೆಯೇ ಮಕ್ಕಳು ರೌಡಿಸಂ ಜೀವನಕ್ಕೆ ಪ್ರವೋಕ್ ಆಗಬಾರದು ಎಂಬ ದೃಷ್ಟಿಕೋನದಿಂದ ಚಿತ್ರವನ್ನು ಮಾಡಿದ್ದೇನೆ. ಭೂಗತ ಲೋಕದ ಬಗ್ಗೆ ಚಿತ್ರವಾಗಿರುವುದರಿಂದ ಚಿತ್ರಕ್ಕೆ A ಪ್ರಮಾಣ ಪತ್ರ ದೊರೆತಿದೆ. ಭೂಗತ ಲೋಕದ ಚಿತ್ರ ಎಂಬ ಕಾರಣಕ್ಕಾಗಿ ಚಿತ್ರದಲ್ಲಿ ಅಶ್ಲೀಲ ಸಂಭಾಷಣೆ ಇದೆ. ಚಿತ್ರ ಮಕ್ಕಳು ಸುಳ್ಳು ಹೇಳಿ ಹೇಗೆ ದಾರಿ ತಪ್ಪುತ್ತಾರೆ ಎಂಬುದನ್ನು ಹೇಳುತ್ತದೆ ಎಂದರು.
ಜೀವನದಲ್ಲಿ ತಂದೆ ತಾಯಿಯೇ ದೇವರು, ಕೊನೆಗಾಲದಲ್ಲಿ ಅವರು ಮಕ್ಕಳಂತರಾಗುತ್ತಾರೆ. ಅವರನ್ನು ಮಕ್ಕಳಂತೆ ಆರೈಕೆ ಮಾಡಬೇಕು. ನಮ್ಮ ತಾಯಿ ಈ ಚಿತ್ರವನ್ನು ನೋಡಲಿಲ್ಲ ಎಂಬ ಬೇಸರವಿದೆ ಎಂದು ಹೇಳಿದರು.
ನವೆಂಬರ್ ೧ ರಾಜ್ಯೋತ್ಸವ ದಿನ ಮೈಸೂರಿನ ಸಲಗ ಚಿತ್ರ ಪ್ರದರ್ಶನ ವಿರುವ ಚಿತ್ರಮಂದಿರಗಳಲ್ಲಿ ಇಡೀ ಚಿತ್ರ ತಂಡ ಭೇಟಿ ನೀಡಿ ಜನರನ್ನು ಭೇಟಿಯಾಗಲಿದೆ. ಸಲಗ ಚಿತ್ರದ ಯಶಸ್ಸು ಇಡೀ ತಂಡಕ್ಕೆ ಸಲ್ಲಬೇಕು. ಸಲಗ ಪಾರ್ಟ್ -೨ ನಿರ್ದೇಶನದ ಬಗ್ಗೆ ಸದ್ಯಕ್ಕೆ ಯಾವುದೇ ಯೋಜನೆ ರೂಪಿಸಿಲ್ಲ ಮುಂದೆ ನೋಡೋಣ ಎಂದು ಚಿತ್ರ ನಿರ್ದೇಶಕ ದುನಿಯಾ ವಿಜಯ್ ತಿಳಿಸಿದರು.