ಅರಣ್ಯಾಧಿಕಾರಿಗಳು ಆಕಾಶದಿಂದ ಇಳಿದು ಬಂದವರಾ? ಎಂದು ತರಾಟೆಗೆ ತೆಗೆದುಕೊಂಡ ಕೆ.ಎಸ್ .ಈಶ್ವರಪ್ಪ

ಡಿ.ಬಿ.ಕುಪ್ಪೆ:8 ಫೆಬ್ರವರಿ 2022

ನಂದಿನಿ ಮೈಸೂರು

ಅರಣ್ಯ ಇಲಾಖೆ ಅಧಿಕಾರಿಗಳು ಆಕಾಶದಿಂದ ಇಳಿದು ಬಂದವರ ಅವರೇನು ದೇವರಾ.ಪ್ರತಿಯೊಂದಕ್ಕೂ ಅವರ ಬಳಿ ಹೋಗಬೇಕಾ ಎಂದು ಅರಣ್ಯ ಅಧಿಕಾರಿಗಳಿಗೆ
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ
ತರಾಟೆ ತೆಗೆದುಕೊಂಡರು.

ಹೆಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮಕ್ಕೆ
ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಸಾರ್ವಜನಿಕರಿಂದ ಕುಂದು ಕೊರತೆ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಡಿಬಿ ಕುಪ್ಪೆ ಹಾಡಿಗೆ ಇದೇ ಮೊದಲ ಬಾರಿಗೆ ಆಗಮಿಸಿದ್ದೇನೆ.ಇಲ್ಲಿನ ಹಾಡಿನ ನೂರಾರು ಸಮಸ್ಯೆಗಳನ್ನ ಹೇಳಿಕೊಂಡಿದ್ದರೆ.ಕೆಲವು ಸಮಸ್ಯೆಗಳನ್ನ ಕೆಲ ಅಧಿಕಾರಿಗಳು ಇಲ್ಲಿಯೇ ತಿಳಿಸಿದ್ದಾರೆ.ಇನ್ನಿತರ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುತ್ತೇನೆ.ಫೆ.14 ರಂದು ಬೆಂಗಳೂರಿನಲ್ಲಿ ಸಂಬಂಧಪಟ್ಟ ಇಲಾಖೆ ಸಚಿವರು, ಶಾಸಕರು ಹಾಗೂ ಗ್ರಾಮ ಪಂಚಾಯತಿ ಸದಸ್ಯರೊಟ್ಟಿಗೆ ಸಭೆ ನಡೆಸಲಿದ್ದೇನೆ‌.ನಾನು ಕೇವಲ ಭರವಸೆ ಮಾತ್ರ ಕೊಟ್ಟಿ ಕೈ ತೊಳೆದುಕೊಳ್ಳೋದಿಲ್ಲ.ಕೆಲಸಾಡಿ ತೋರಿಸುತ್ತೇನೆ.ಮತ್ತೆ 4 ತಿಂಗಳು ಬಿಟ್ಟು ಬರುತ್ತೇನೆ.ಅಭಿವೃದ್ಧಿ ಕಾಣದೇ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನ ಮನೆಗೆ ಕಳುಹಿಸುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟರು.

ಗ್ರಾಮ ಪಂಚಾಯತಿ ಸದಸ್ಯರು
ವೆಂಕಟೇಗೌಡ ಮಾತನಾಡಿ ನಾವು 1904 ರಿಂದ ಈ ಅರಣ್ಯ ಜಮೀನಿಗೆ ಕಂದಾಯ ಕಟ್ಟುತ್ತಿದ್ದೇವೆ.ಇಂದಿಗೂ ಹಕ್ಕು ಪತ್ರ ಕೊಟ್ಟಿಲ್ಲ. 2006 ರಿಂದ ಅರ್ಜಿ ಹಾಕುತ್ತಿದ್ದರು ಕ್ಯಾರೆ ಅಂದಿಲ್ಲ.2 ಏತ ನೀರಾವರಿಗೆ ಅವಕಾಶ ಮಾಡಿಕೊಡಿ.ಅಂಗನವಾಡಿ ಕಟ್ಟಡ ಕಟ್ಟೋಕೆ ಅರಣ್ಯ ಇಲಾಖೆ ಅನುವು ಮಾಡಿಕೊಡುತ್ತಿಲ್ಲ.ದೋಣೆ ನಡೆಸಿ ಜೀವನ ಕಟ್ಟಿಕೊಂಡಿದ್ರು.ಕೋರೋನಾ ನೆಪವೊಡ್ಡಿ
ದೋಣಿ ಸಂಚಾರ ಬಂದ್ ಮಾಡಿದ್ದಾರೆ.ಸರ್ಕಾರದಿಂದ 10 ಕೆಜಿ ಅಕ್ಕಿ ಕೊಡ್ತಾರೆ ಅಷ್ಟೇ.ಪ್ರಾಣಿಗಳು ನಾಡಿಗೆ ಬರುತ್ತಿದೆ.ಮನೆ,ಜಮೀನು,ನಾಶ ವಾಗುತ್ತಿದೆ.ಪರಿಹಾರ ಕೊಡಿ ಅಂದ್ರೇ ಹಿಂದೇಟು ಹಾಕ್ತಾರೆ.ಪ್ರಾಣಿಗಳು ಹಾಡಿಗೆ ಬರೋದಂತೆ ರಕ್ಷಣೆ ನೀಡಿಬೇಕು.ಹಾಡಿಯ ಅನೇಕರಿಗೆ ಸೂರಿಲ್ಲದೇ ಸಂಕಷ್ಟದಲ್ಲಿದ್ದಾರೆ. ರಸ್ತೆ ವ್ಯವಸ್ಥೆ ಇಲ್ಲ.ಬಸ್ ವ್ಯವಸ್ಥೆ ಇಲ್ಲ.ಕುಡಿಯುವ ನೀರಿಗೆ ಸಮಸ್ಯೆ ಇದೆ ಎಲ್ಲಾ ಸಮಸ್ಯೆಗಳನ್ನ ಬಗೆ ಹರಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಗ್ರಾಮ ಪಂಚಾಯತಿ ಸುಬ್ರಹ್ಮಣ್ಯ ಸ್ವಾಮಿ ಸರ್ಕಾರದಿಂದ ಹೆಚ್ಚು ಅನುದಾನ ನೀಡಬೇಕು.ವಸತಿ ಯೋಜನೆಯಲ್ಲಿ ಹೆಚ್ಚುವರಿ ಮನೆ ಕೊಡಬೇಕು.ಜಲಜೀವನ್ ಮಿಷನ್ ಕೊಡಿಸುವಂತೆ ಮನವಿ ಮಾಡುತ್ತಿದ್ದೇನೆ.ಏತ ನೀರಾವರಿ ಅಭಿವೃದ್ಧಿಗೆ ಅರಣ್ಯ ಇಲಾಖೆಯಿಂದ ತಡೆಹಿಡಿಯುತ್ತಿದ್ದಾರೆ. ಸಚಿವರು ಈ ಬಗೆ ಮಾತಾಡಬೇಕು ಎಂದರು.

ಗ್ರಾಮ ಪಂಚಾಯತಿ ಸದಸ್ಯ
ರಮೇಶ್ ಮಾತನಾಡಿ
ಸರ್ಕಾರ ಪೌಷ್ಟಿಕಾಹಾರ ಕೊಡುತ್ತದೆ.ಅದು ನಮಗೆ ಬೇಡ.ಬದುಕಲು ಬಿಡಿ.ಶಿಕ್ಷಣ ವ್ಯವಸ್ಥೆ ಮಾಡಿ.ಒಂದು ಪ್ರಾಣಿಗೆ ಇರುವ ಬೆಲೆ ಹಾಡಿ ಜನರಿಗಿಲ್ಲ.
ಒಂದು ಔಷಧೀ ಕೊಟ್ಟುಬಿಡಲಿ ನಾವು ಸಾಮೂಹಿಕವಾಗಿ ಸಾವನ್ನಪ್ಪುತ್ತೇವೆ.
ವಿದ್ಯುತ್ ವ್ಯವಸ್ಥೆ ಇಲ್ಲ.ಕೇರಳದಿಂದ ಬಂದವರು ರಸ್ತೆ ನೋಡಿ ಮೂಗು ಮುರಿಯುತ್ತಾರೆ.
ಆಸ್ಪತ್ರೆ ಇದೆ ಆದರೇ ತುರ್ತು ಸೇವಾ ವಾಹನ ಇಲ್ಲ.ಕಲಾ ತಂಡಗಳು ರಾಜ್ಯ ಮಟ್ಟದಲ್ಲಿ ಗುರಿತಿಸಿಕೊಳ್ಳಲು ಅವಕಾಶ ಮಾಡಿಕೊಡಿ.
ದೋಣಿ ಓಡಿಸೋಕೆ ಅವಕಾಶ ಮಾಡಿಕೊಡಿ.ಅಥವಾ ಇಲ್ಲಿಯೇ ಕೆಲಸ ಕೊಡಿ .
10 ತರಗತಿ ನಂತರ ನೂರು ಕಿಲೋ ಮೀಟರ್ ಹೋಗಬೇಕಾಗುತ್ತದೆ.ಆದ್ದರಿಂದ 12ನೇ ತರಗತಿ ವರೆಗೂ ಇಲ್ಲಿಯೇ ಶಿಕ್ಷಣ ಸಿಗುವಂತೆ ಅವಕಾಶ ಮಾಡಿಕೊಡಿ ಎಂದರು.

1947 ರಲ್ಲಿಯೇ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ.
ನಮಗೆ ಇಲ್ಲಿ ಸ್ವಾತಂತ್ರ್ಯ ಇಲ್ಲ.ಅರಣ್ಯ ಅಧಿಕಾರಿಗಳು ನಮ್ಮ ಸ್ವಾತಂತ್ರ್ಯ ವನ್ನೇ ಕಿತ್ತುಕೊಂಡಿದ್ದಾರೆ.
ಹಾಡಿ ಜನರಿಗೆ ಮೂಲ ಸೌಲಭ್ಯ ಕೊಡಲಿಲ್ಲ ಅಂದ್ರೇ ಮುಂದಿನ ಚುನಾವಣೆಯಲ್ಲಿ
ಮತ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾ ಪಂಚಾಯಿತಿ ಸಿಇಒ ಎ.ಎಂ.ಯೋಗೀಶ್, ಹುಣಸೂರು ಉಪವಿಭಾಗಾಧಿಕಾರಿ ವರ್ಣಿತ್ ನೇಗಿ, ವಿಧಾನಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ,
ಎಸಿಎಫ್ ಮಹಾದೇವ್, ತಾಲ್ಲೂಕು ಪಂಚಾಯಿತಿ ಸಿಇಒ ಜೆರಾಲ್ಡ್ ರಾಜೇಶ್, ತಹಶಿಲ್ದಾರರ್ ನರಗುಂದ ಸೇರಿದಂತೆ
ಇತರ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಪಾಲ್ಗೊಂಡರು.

Leave a Reply

Your email address will not be published. Required fields are marked *