ಮೈಸೂರು:19 ಜನವರಿ 2022
ನಂದಿನಿ ಮೈಸೂರು
ಒಬ್ಬರ ಮೇಲೆ ಆರೋಪ ಮಾಡುವ ಮುನ್ನ
ಸತ್ಯಕ್ಕೆ ಹತ್ತಿರವಾದ ಸಾಕ್ಷಿ ಇರಬೇಕು.ರವಿ ಡಿ ಚನ್ನಣ್ಣನವರ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಇಲ್ಲದ ಸಲ್ಲದ ಆರೋಪ ಮಾಡುತ್ತಿರುವ
ವಕೀಲ ಜಗದೀಶ್ ರವರ ವಿರುದ್ದ ಮಾನದಷ್ಟ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.
ಕರ್ನಾಟಕ ರಾಜ್ಯ ನಾಯಕರ ಯುವಸೇನೆ ರಾಜ್ಯಧ್ಯಕ್ಷ ದೇವರಾಜು ಟಿ ಕಾಟೂರುರವರ ನೇತೃತ್ವದಲ್ಲಿ ಜಲದರ್ಶಿನಿಯಲ್ಲಿ ತುರ್ತು ಸಭೆ ನಡೆಸಿ ಮಾತನಾಡಿದ ಅವರು ರವಿ ಡಿ ಚನ್ನಣ್ಣನವರ್ ರವರು
6 ವರ್ಷದ ಹಿಂದೆ ಮೈಸೂರು ಎಸ್ಪಿ ಆಗಿದ್ರೂ.ಬಡತನಕ್ಕೆ ಬಂಡವಾಳ ಅಂದ್ರೇ ಅದು ನನ್ನ ವಿಧ್ಯೆ ಎನ್ನುತಿದ್ದರು.ಯಾವ ವ್ಯಕ್ತಿ ಎತ್ತರಕ್ಕೆ ಬೆಳೆಯುತ್ತಾನೋ ಅವರನ್ನ ಜನ ಸಹಿಸೋದಿಲ್ಲ.
ಐ.ಪಿ.ಎಸ್ ಅಧಿಕಾರಿಗಳಾದ ರವಿ ಡಿ ಚನ್ನಣ್ಣನವರ ವಿರುದ್ಧ ಎಚ್.ಡಿ.ಕೋಟೆಯಲ್ಲಿ 78 ಎಕರೆ ಭ್ರಷ್ಟಚಾರ ಮತ್ತು ಬೇನಾಮಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಯಾವುದೇ ಸಾಕ್ಷಿ ಪುರಾವೆಗಳು ಅಥವಾ ಪೂರಕ ದಾಖಲೆಗಳು ಇಲ್ಲಾದೆ ವಕೀಲರು ಮತ್ತು ಎ ಎ ಪಿ ಪಕ್ಷದ ಮುಖಂಡರಾದ ಜಗದೀಶ್ ರವರು ಸಾಮಾಜಿಕ ಜಾಲತಾಣದಲ್ಲಿ ಮತ್ತು ಕೇಲವು ದೃಶ್ಯಮಾಧ್ಯಮಗಳಲ್ಲಿ ಸುಳ್ಳು ಆರೋಪ ಮಾಡಿರುತ್ತಾರೆ .
ವಿಚಾರವಾಗಿ ಯಾವುದೇ ಆಧಾರವಿಲ್ಲದೆ ಪ್ರಚಾರಕ್ಕಾಗಿ ಒಬ್ಬ ಧೀಮಂತ ಎಸ್ ಸಿ / ಎಸ್ ಟಿ ವರ್ಗದ ಐ.ಪಿ.ಎಸ್ ಅಧಿಕಾರಿ ವಿರುದ್ಧ ಆರೋಪ ಮಾಡಿರುವುದನ್ನು ಖಂಡಿಸಿ ಹಾಗೂ ಮಾಧ್ಯಮಗಳ ಮೂಲಕ ಜಗದೀಶ್ ಅವರಿಗೆ ಕೇಲವು ಪ್ರಶ್ನೆಗಳನ್ನು ಕೇಳುವುದಕ್ಕೆ ಹಾಗೂ ರವಿ ಡಿ ಚನ್ನಣ್ಣನವರ ಅವರಿಗೆ ನೈತಿಕ ಬೆಂಬಲವನ್ನು ಸೂಚಿಸಿ ಕಾನೂನುತ್ಮಕವಾಗಿ ಹಾಗೂ ಹೋರಾಟ ನಡೆಸುವುದಾಗಿ ತಿಳಿಸಿದರು.
ಸುಳ್ಳಿನ ಜನಕ ಜಗದೀಶ್.ಪ್ರಚಾರಕ್ಕಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ.
1984 -85 ರಲ್ಲಿ
ಸರ್ವೆ ನಂ.57,58,59 ರಲ್ಲಿ ಈ ಜಾಗ ರವಿ ಬಾಬು ರವರ ಹೆಸರಲ್ಲಿ ಖಾತೆಯಾಗಿದೆ. ಜಾಗದ ಸುತ್ತ ಹಾಕಿರುವ
ಕಾಂಪೌಡ್ ನಿರ್ಮಾಣಕ್ಕೆ 5 ಕೋಟಿ ಖರ್ಚಾಗಿದೆ ಎಂದು ಜಗದೀಶ್ ಲೈವ್ ನಲ್ಲಿ ಮಾತಾಡ್ತಾರೆ.
ಅಕ್ಕಪಕ್ಕ ಜಮೀನನ ಮಾಲೀಕರನ್ನ ವಿಚಾರಿಸಿದಾಗ ಈ ಜಮೀನಿನಲ್ಲಿ ರವಿ ಡಿ ಚನ್ನಣ್ಣನವರ್ ಅವರನ್ನ ನೋಡಿಯೇ ಇಲ್ಲ ಎನ್ನುತ್ತಾರೆ.
ನೆನ್ನೇ ರೈತ ಸಂಘದ ಅಧ್ಯಕ್ಷ ಕುಮಾರಸ್ವಾಮಿ,ಉಮೇಶ್ ಎಂಬುವವರು ಜಗದೀಶ್ ರವರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ.ಅವರಿಬ್ಬರ ವಿರುದ್ದ ಎಚ್.ಡಿ.ಕೋಟೆಯಲ್ಲಿ ದೂರು ದಾಖಲು ಮಾಡಲಿದ್ದೇವೆ.ಜಗದೀಶ್ ರವರ ವರ್ತನೆ ಹೀಗೆ ಮುಂದುವರೆದರೇ ಕಾನೂನಾತ್ಮಕ ಹೋರಾಟ ಮಾಡಲಿದ್ದೇವೆ ಎಂದರು.– ದೇವರಾಜು ಟಿ ಕಾಟೂರು
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲರೂ ಒಂದೇ.ಒಬ್ಬ ಸರ್ಕಾರಿ ಅಧಿಕಾರಿ ವಿರುದ್ಧ ಆರೋಪ ಮಾಡಿದರೇ ವಕೀಲರಾಗಿ ನಾವು ಅವರ ಪರ ಇದ್ದೇ ಇರುತ್ತೇವೆ.ಯಾವುದೇ ಪುರಾವೆ ಇಲ್ಲದೇ ಜಗದೀಶ್ ರವರು ಸಾಮಾಜಿಕ ಜಾಲತಾಣದಲ್ಲಿ ರವಿ ಡಿ ಚನ್ನಣ್ಣನವರ್ ವಿರುದ್ದ ಆರೋಪ ಮಾಡಿದ್ದಾರೆ.ಇದು ಸರಿಯಲ್ಲ.ದಾಖಲಾತಿ ಇದ್ದಲ್ಲಿ ಕಾನೂನಿನಡಿಯಲ್ಲಿ ಹೋರಾಟ ಮಾಡಬಹುದು.ಆದರೇ ಜಗದೀಶ್ ರವಿ ಡಿ ಚನ್ನಣ್ಣನವರ್ ಅವರ ಮೇಲೆ ಮಾಡುತ್ತಿರುವ ಆರೋಪ ಸುಳ್ಳು ಎಂದು ವಕೀಲರು ತಿಳಿಸಿದರು.
ತುರ್ತು ಸಭೆಯಲ್ಲಿ
ಸುಮಾರು 30 ಕ್ಕೂ ಹೆಚ್ಚು ವಕೀಲರು. ದಲಿತ ಸಂಘ ಸಂಸ್ಥೆಗಳು ಮುಖಂಡರು , ವಾಲ್ಮೀಕಿ ಸಂಘ ಸಂಸ್ಥೆಗಳ ಮುಖಂಡರು ಭಾಗಿಯಾಗಿದ್ದರು.