ಮೈಸೂರು:20. ಜನವರಿ 2022
ನಂದಿನಿ ಮೈಸೂರು
ವಿಶ್ವವಿದ್ಯಾನಿಲಯದ ಭೂ ವಿಜ್ಞಾನ ವಿಭಾಗದಲ್ಲಿ ಅರಿವ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿರುವ
ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಾನು ಇನ್ನೂ 6 ತಿಂಗಳು ಬದುಕೋದೆ ಹೆಚ್ಚು ಅನ್ನಿಸುತ್ತಿದೆ ಎಂದು ಅಭಿಜಿತ್ ಎಂ ಆತಂಕ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು 21 ನವೆಂಬರ್ 2021 ರಂದು ವಿಭಾಗದ ಅಧ್ಯಕ್ಷ ಪ್ರೋ. ಮಾದೇಶ್ ಪಿ ಅವರು ನನ್ನನ್ನು ಕೆಟ್ಟ ಪದಗಳಿಂದ ನಿಂದಿಸುವುದಲ್ಲದೇ ಕೂಲೆ ಬೆದರಿಕೆ ಹಾಕಿದರು ಎಂದು ಘಟನೆ ಬಗ್ಗೆ ವಿವರಿಸಿದರು.ಈ ಕುರಿತಾಗಿ ಕುಲಪತಿಗಳನ್ನು ಭೇಟಿ ಮಾಡಿ ನ್ಯಾಯ ಕೊಡಿಸುವಂತೆ ಮನವಿ ಸಲ್ಲಿಸಲಾಗಿತ್ತು . ಅದೇ ದಿನ ಹಲವಾರು ವಿದ್ಯಾರ್ಥಿಗಳು ಕೂಡ ಈ ಘಟನೆಯನ್ನು ಖಂಡಿಸಿ ಧರಣಿ ನಡೆಸಿದರು . ಕೊಲೆ ಬೆದರಿಕೆ ನೀಡಿದ ಕಾರಣ ಜಯಲಕ್ಷ್ಮಿ ಪುರಂ ಪೊಲೀಸ್ ಠಾಣೆಯಲ್ಲಿ FIR ಆಗಿದೆ.ಈ ಮಧ್ಯೆ ಮಾದೇಶ್ ಅವರು ಉದ್ದೇಶಪೂರ್ವಕವಾಗಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕದಂತೆ ಸಮಸ್ಯೆ ಉಂಟು ಮಾಡಿದರು ಅದನ್ನು ಕೂಡ ಕುಲಪತಿಗಳು ಹಾಗು ಕುಲಸಚಿವರ ಗಮನಕ್ಕೆ ತಂದಿದ್ದರೂ ಅದನ್ನು ಕೂಡ ಯಾವುದೇ ರೀತಿಯ ಕ್ರಮ ಜರುಗಿಸಿರುವುದಿಲ್ಲ . ಇನ್ನೂ ಅಲ್ಲದೇ ವಿಭಾಗದ ಅಧ್ಯಕ್ಷರು ತಮ್ಮ ಪ್ರಭಾವ ಬಳಸಿ ತಮ್ಮ ಸ್ವಂತ ಮಗನಿಗೆ 12 ಗಂಟೆಗಳ ಕಾರ್ಯಭಾರವನ್ನು ಹಾಕಿಸಿಕೊಂಡಿದ್ದಾರೆ . ಈ ವಿಷಯಗಳಲ್ಲವು ವಿಶ್ವವಿದ್ಯಾ ನಿಲಯದ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಮಾದೇಶ್ ಪಿ ಅವರನ್ನು ಆಡಳಿತಾಧಿಕಾರಿ ಹುದ್ದೆಯಿಂದ ಕೆಳಗಿಳಿಸಲು ತೀರ್ಮಾನಿಸಿದ್ದರೂ ಕೂಡ ಈವರೆಗೆ ಅವರನ್ನು ಆಡಳಿತಾಧಿಕಾರಿ ಹುದ್ದೆಯಿಂದ ದೊರಕಿಸಿಕೊಟ್ಟಿಲ್ಲ ಇಳಿಸದೇ ನನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಉದ್ದೇಶಪೂರ್ವಕವಾಗಿ ೪ ಗಂಟೆಗಳ ಕಾರ್ಯಭಾರವನ್ನು ೪ ದಿನವೂ ಕಾರ್ಯನಿರ್ವಹಿಸುವಂತೆ ರೂಪಿಸಿದ್ದಾರೆ . ನಾನು ತರಗತಿಗಳನ್ನೂ , ವೇಳಾಪಟ್ಟಿಯನ್ನು ತೆಗೆದುಕೊಂಡಿದ್ದರು ಉದೇಶಪೂರ್ವಕವಾಗಿ ಗೈರುಹಾಜರಿ ಹಾಕುವ ಮೂಲಕ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ.ನಾನು ಇನ್ನೂ 6 ತಿಂಗಳು ಬದುಕೋದೆ ಹೆಚ್ಚು ಅನ್ನಿಸುತ್ತಿದೆ.ನನಗೆ ನ್ಯಾಯ ದೊರಕಿಸಿಕೊಡದಿದ್ದಲ್ಲಿ ಉನ್ನತ ಶಿಕ್ಷಣ ಸಚಿವರ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುಟ್ಟಸ್ವಾಮಿ ಗೌಡ ಜೊತೆಗಿದ್ದರು.