ಎಲೆಕ್ಟ್ರಿಕ್ ಗೂಡ್ಸ್ ಆಟೋ ರಸ್ತೆಗಿಳಿಸಿದ ಆಲ್ಟಿಗ್ರೀನ್ ಕಂಪನಿ

ನಂದಿನಿ ಮೈಸೂರು

ಆಲ್ಟಿಗ್ರೀನ್ ಕಂಪನಿ ಎಲೆಕ್ಟ್ರಿಕ್ ಗೂಡ್ಸ್ ಆಟೋ ಶೋರೂಂ ಉದ್ಘಾಟನೆ ಉದ್ಘಾಟನೆಗೊಂಡಿತು.

ಮೈಸೂರಿನ ಹೊರವಲಯದಲ್ಲಿರುವ ಹಿನಕಲ್ ಬಳಿ ಆರಂಭವಾಗಿರುವ ಶೋರೂಂ ಅನ್ನು ಟೇಪ್ ಕತ್ತರಿಸಿ ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಎಲೆಕ್ಟ್ರಿಕ್ ಗೂಡ್ಸ್ ಆಟೋ ಖರೀದಿಸಿದ ಮೊದಲ ಗ್ರಾಹಕ ಮನು ರವರಿಗೆ ಕಂಪನಿ ಸಂಸ್ಥಾಪಕ ಡಾ. ಅಮಿತಾಭ್ ಸರಣ್ ,
ಡೀಲರ್ ಡಾ.ಎಂ.ಪಿ. ಶ್ಯಾಮ್ ಹಸ್ತಾಂತರಿಸಿದರು.

 

ಆಲ್ಟೋಗ್ರೀನ್ ಕಂಪನಿ ಪೂರ್ಣ ಸ್ವದೇಶೀ ತಂತ್ರಜ್ಞಾನದ ಸಿದ್ದಪಡಿಸಿ, ಎಲ್ಲ ಬಿಡಿಭಾಗ ಸೇರಿದಂತೆ ಒಟ್ಟಾರೆ ಗೂಡ್ಸ್ ಆಟೋವನ್ನು ಸ್ವದೇಶಿಯಾಗಿಯೇ ತಯಾರಿಸಿದೆ. ಇದರ ಬೆಲೆ ಸುಮಾರು ೪.೨೮ ಲಕ್ಷ ರೂ.,ಗಳಾಗಿದ್ದು, ಸಾಮಾನ್ಯ ಪ್ಲಗ್‌ನಲ್ಲಿಯೂ ಎರಡು ಗಂಟೆ ಚಾರ್ಜ್ ಮಾಡಿದಲ್ಲಿ ಒಟ್ಟು ೧೨೦ ಕಿ.ಮೀ ಸರಕು ತುಂಬಿಕೊಂಡೇ ಸಂಚರಿಸುತ್ತದೆ. ಕಂಪನಿ ತಾನು ಪರೀಕ್ಷಿಸಿದ ವೇಳೆ ಒಂದು ಚಾರ್ಜ್ಗೆ ಸುಮಾರು ೧೫೦ ಕಿ.ಮೀ ಫಲಿತಾಂಶ ಕಂಡುಬಂದರೂ ಗ್ರಾಹಕರಿಗೆ ೧೨೦ ಕಿ.ಮೀ ಸಾಗುವ ಭರವಸೆ ನೀಡಿದೆ.
ಇದಲ್ಲದೆ ಒಂದೇ ಚಾರ್ಜ್ನಲ್ಲಿ ಬೆಂಗಳೂರಿನಿಂದ ಮೈಸೂರಿನವರೆಗೂ ಈ ಗೂಡ್ಸ್ ಆಟೋ ಸರಕಿನೊಡನೆ ಆಗಮಿಸಿದೆ.

ಕಂಪನಿ ಸಂಸ್ಥಾಪಕ ಡಾ. ಅಮಿತಾಭ್ ಸರಣ್
ಮಾತನಾಡಿ, ಸುಮಾರು ಎಂಟು ವರ್ಷ ಅವಧಿಯ ಸಂಶೋಧನೆ ಮತ್ತು ಸುಧಾರಣಾ ಫಲಿತಾಂಶ ಆಧರಿಸಿ, ಈ ಎಲೆಕ್ಟ್ರಿಕ್ ಗೂಡ್ಸ್ ಆಟೋ ತಯಾರಿಸಲಾಗಿದೆ. ಎಲ್ಲವೂ ಸಂಪೂರ್ಣ ಸ್ವದೇಶೀ ಆಗಿರುವ ಕಾರಣ ಬಿಡಿಭಾಗಗಳಿಗಾಗಿ ಅಲೆದಾಡುವ ಸಮಸ್ಯೆಯಿಲ್ಲ. ಕಂಪನಿಯೂ ಬೆಂಗಳೂರಿನಲ್ಲಿಯೇ ಇದ್ದು, ನಗರದ ಪ್ರದೇಶ ಮಾತ್ರವಲ್ಲದೆ, ಗ್ರಾಮೀಣ ಭಾಗದಲ್ಲಿಯೂ ಸರಕು ಸಾಗಣೆ ವ್ಯವಹಾರವನ್ನೇ ನಂಬಿಕೊಂಡು ಜೀವನ ನಡೆಸುವ ಬಡವರ್ಗದವರಿಗೆ ಅನುಕೂಲವಾಗಲಿದೆ. ಅಲ್ಲದೆ, ಒಂದು ಕಿ.ಮೀಗೆ ಕೇವಲ ೯೨ ಪೈಸೆ ಮಾತ್ರ ವೆಚ್ಚ ತಗಲುವ ಕಾರಣ ಆದಾಯವೂ ಹೆಚ್ಚಾಗಿರಲಿದೆ ಎಂದು ತಿಳಿಸಿದರು.

ಬಳಿಕ, ಡೀಲರ್ ಡಾ.ಎಂ.ಪಿ. ಶ್ಯಾಮ್ ಮಾತನಾಡಿ, ಪ್ರಯಾಣಿಕರಿಗಾಗಿಯೂ ಎಲೆಕ್ಟ್ರಿಕ್ ವಾಹನ ತಯಾರಿಸುವ ಉದ್ದೇಶ ಈ ಕಂಪನಿ ಹೊಂದಿದೆ. ಮೊದಲು ಸ್ಥಳೀಯ ಗ್ರಾಹಕರಿಗೆ ಆದ್ಯತೆ ನೀಡಿದ ಬಳಿಕ ಆಫ್ರಿಕಾ, ಏಷ್ಯಾ ಮೊದಲಾದ ರಾಷ್ಟ್ರಗಳಿಗೆ ಎಲೆಕ್ಟ್ರಿಕ್ ಗೂಡ್ಸ್ ಆಟೋ ರಪ್ತು ಮಾಡುವ ಉದ್ದೇಶವಿದೆ. ಇದು ಸಂಪೂರ್ಣ ಸ್ವದೇಶೀ ತಂತ್ರಜ್ಞಾನ, ಸ್ವದೇಶೀ ತಯಾರಿಕೆ ಒಳಗೊಂಡಿದ್ದರೂ ಉತ್ತಮ ಗುಣಮಟ್ಟ ಹೊಂದಿದೆ ಎಂದು ಮಾಹಿತಿ ನೀಡಿದರು.ಮಳಿಗೆಯ ಆದರ್ಶ್ ಇನ್ನಿತರರು ಹಾಜರಿದ್ದರು.https://youtu.be/dC-ocovqJ18

ಜಾಗತಿಕ ತಾಪಮಾನ ಹೆಚ್ಚಳ ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳು ಪರ್ಯಾಯ ಮಾರ್ಗ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಸಹಾ ಜಾಗೃತರಾಗಿ ಕಡಿಮೆ ವೆಚ್ಚದಲ್ಲಿ ಪ್ರಯಾಣ ಮಾಡಲು ಎಲೆಕ್ಟ್ರಿಕ್ ಸ್ಕೂಟರ್ ಬಳಸುವುದು ಹೆಚ್ಚುತ್ತಿದೆ. ಆದರೆ ಸರಕು ಸಾಗಣೆ ವಾಹನ ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳ ಕೊರತೆಯಿದ್ದು, ಇದನ್ನು ತುಂಬುವ ನಿಟ್ಟಿನಲ್ಲಿ ಆಲ್ಟಿಗ್ರೀನ್ ಕಂಪನಿ ಎಲೆಕ್ಟ್ರಿಕ್ ಗೂಡ್ಸ್ ಆಟೋಗಳನ್ನ ರಸ್ತೆಗಿಳಿಸಿದೆ.

Leave a Reply

Your email address will not be published. Required fields are marked *