ನಂದಿನಿ ಮೈಸೂರು
ಜವಳಿ ಮಂತ್ರಾಲಯ ಗುಜರಾತ್ ಜೀವನಜ್ಯೋತಿ ವೆಲ್ಫೇರ್ ಫೌಂಡೇಶನ್ ಸಹಯೋಗದೊಂದಿಗೆ ಹೆಬ್ಬಾಳು ಕೈಗಾರಿಕಾ ಪ್ರದೇಶದ ಜೆಎಸ್ಎಸ್ ಮೈಸೂರು ಅರ್ಬನ್ ಹಾಟ್ನಲ್ಲಿ ಕುಶಲಕರ್ಮಿಗಳಿಂದ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಕ್ರಾಫ್ಟ್ ಬಜಾರ್ ಗೆ ಆಡಳಿತ ಮತ್ತು ಅಭಿವೃದ್ಧಿ ವಿಭಾಗದ ಹೆಚ್ಚುವರಿ ಆಯುಕ್ತ ಕೆಪಿ ಶಿವರಾಜು ಮೇಳಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಜೆಎಸ್ಎಸ್ ಮಹಾವಿದ್ಯಾಪೀಠದ ಲೆಕ್ಕಪರಿಶೋಧಕ ವಿಭಾಗದ ನಿರ್ದೇಶಕ ಕೆಆರ್ ಸಂತಾನಂ ರವರು ಮೇಳದಲ್ಲಿ ಕರ್ನಾಟಕ ಪಶ್ಚಿಮ ಬಂಗಾಳ ಗುಜರಾತ್ ಇತರೆ ರಾಜ್ಯಗಳ ಕುಶಲ ಕರ್ಮಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ ರೇಷ್ಮೆ ಸೀರೆಗಳು ಕೊಲ್ಲಾಪುರ್ ಚಪ್ಪಲಿಗಳು ಅಲಂಕಾರಿಕ ವಸ್ತುಗಳು ಕಾಗೆ ಬಟ್ಟೆಗಳು ರೇಷ್ಮೆ ಸೀರೆಗಳು ಹಾಗೂ ವಿವಿಧ ಕಲ ಕೃತಿ ಲಭ್ಯವಿತ್ತು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೇಕಾರರಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಂತ್ರಿಕ ಶಿಕ್ಷಣವೇ ಭಾಗದ ಜಂಟಿ ನಿರ್ದೇಶಕ ಮಹದೇವಸ್ವಾಮಿ ಸಂಯೋಜನಾಧಿಕಾರಿ ಶಿವನಂದ ಸ್ವಾಮಿ ಹಾಗೂ ಸುಂದ್ರಪ್ಪ ಮತ್ತಿತರರು ಹಾಜರಿದ್ದರು.