199 ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಮಧ್ಯವನ್ನ ನಾಶಗೊಳಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು

ಟಿ.ನರಸೀಪುರ:30 ಡಿಸೆಂಬರ್ 2021

ನಂದಿನಿ ಮೈೈಸೂರು

ವಿವಿಧ ರೀತಿಯ ಒಟ್ಟು 199 ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಮಧ್ಯವನ್ನ ಅಬಕಾರಿ ಇಲಾಖೆ ಅಧಿಕಾರಿಗಳು ನಾಶಪಡಿಸಿದ್ದಾರೆ.

ತಿ.ನರಸೀಪುರ ಇಲಾಖೆಯು ಅಬಕಾರಿ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮದ್ಯ , ಬಿಯರ್ ಮತ್ತು ಸೇಂದಿಯನ್ನು ಅಬಕಾರಿ ನಿರೀಕ್ಷಕರ ಕಛೇರಿಯ ಆವರಣದಲ್ಲಿ ನಂಜನಗೂಡು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಎಲ್.ಐ.ವಿಕ್ರಮ್ ರವರ ನೇತೃತ್ವದಲ್ಲಿ ನಾಶಪಡಿಸಲಾಯಿತು .

ಒಟ್ಟು 239.55೦ ಲೀಟರ್ ಮದ್ಯ ಮತ್ತು 36,450 ಈ ಬಿಯರ್ ಹಾಗೂ 14 ಲೀಟರ್ ಸೇಂದಿಯನ್ನು ಅಬಕಾರಿ ಉಪ ಆಯುಕ್ತರು, ಮೈಸೂರು ಗ್ರಾಮಾಂತರ ಜಿಲ್ಲೆ ರವರ ಆದೇಶದಂತೆ ನಾಶಪಡಿಸಲಾಯಿತು.

ಟಿ.ನರಸೀಪುರ ವಲಯ‌ ನಿರೀಕ್ಷಕರಾದ ರಾಜೇಶ್.ಎನ್ , ಶಿವರಾಜ್.ಎಸ್ , ಅಬಕಾರಿ ಉಪ ನಿರೀಕ್ಷಕರು ಮುದಾಸರ್‌ ಬಾಷಾ ಕ , ಶಿರಸ್ತೆದಾರ್ ಪ್ರಭುರಾಜು , ಕೆ.ಎಸ್.ಬಿ.ಸಿ.ಎಲ್ ಘಟಕದ ವ್ಯವಸ್ಥಾಪಕರಾದ ಲೋಕೇಶ್.ಎನ್ ಹಾಗೂ ಸಿಬ್ಬಂದಿಗಳಾದ ಪರಶಿವಮೂರ್ತಿ , ಮಹಾಲಂಗಪ್ಪ.ಎಂ . ಅಜಿತ್.ಹೆಚ್.ಎಮ್ , ಇರ್ಪಾನ್ ಅಹಮದ್ , ಚಿದಂಬರ.ಜಿ.ಕ ರವರುಗಳು ಮಧ್ಯಗಳನ್ನು ನಾಶಗೊಳಿಸಿದರು.

Leave a Reply

Your email address will not be published. Required fields are marked *