ನಂದಿನಿ ಮೈಸೂರು
ನೀರು ಸರಬರಾಜಿನಲ್ಲಿ ವ್ಯತ್ಯಯ ಸಾರ್ವಜನಿಕರು ಸಹಕರಿಸುವಂತೆ ಮೈಸೂರು ಮಹಾನಗರ ಪಾಲಿಕೆ ಮನವಿ
ಮೈಸೂರು ನಗರದ ಜೆ.ಪಿ.ನಗರ ಹೊರವರ್ತುಲ ರಸ್ತೆಯ ರೈಲ್ವೆ ಬ್ರಿಡ್ಜ್ ಆಗಲೀಕರಣವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗುತ್ತಿದ್ದು, ದಿನಾಂಕ: 20/09/2023 ರಂದು ಮುಖ್ಯ ನೀರು ಸರಬರಾಜು ಕೊಳವೆಮಾರ್ಗವನ್ನು ಸ್ಥಳಾಂತರಿಸಿ ಲಿಂಕಿಂಗ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮೂಲಸ್ಥಾವರದಿಂದ ಪಂಪಿಂಗ್ ನಿಲುಗಡೆಗೊಳಿಸಬೇಕಾಗಿರುತ್ತದೆ. ಆದ್ದರಿಂದ ದಿನಾಂಕ: 20/09/2023 ಮತ್ತು 21/09/2023ರಂದು ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜುವಿನಲ್ಲಿ ವ್ಯತ್ಯಯವುಂಟಾಗಲಿದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ನೀರನ್ನು ಸಂಗ್ರಹ ಮಾಡಿಕೊಂಡು, ಮೈಸೂರು ಮಹಾನಗರ ಪಾಲಿಕೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ನೀರು ಸರಬರಾಜುವಿನಲ್ಲಿ ವ್ಯತ್ಯಯವುಂಟಾಗುವ ಪ್ರದೇಶಗಳು:-
ವಾರ್ಡ್ ನಂ. 45 ರಿಂದ, 51 (ಶಾರದಾದೇವಿನಗರ, ದಟ್ಟಗಳ್ಳಿ 3ನೇ ಹಂತ, ಕುವೆಂಪುನಗರ, ಜಯನಗರ, ಲಕ್ಷ್ಮೀಪುರಂ, ಸುಣ್ಣದಕೇರಿ, ಅಗ್ರಹಾರ) ಹಾಗೂ 54 ರಿಂದ 65 (ಗುಂಡುರಾವ್‌ನಗರ, ಚಾಮುಂಡಿಪುರಂ, ಕೃಷ್ಣಮೂರ್ತಿಪುರಂ, ಕುವೆಂಪುನಗರ ಸಿ.ಐ.ಟಿ.ಬಿ., ರಾಮಕೃಷ್ಣನಗರ, ಕುವೆಂಪುನಗರ ಎಂ. ಬ್ಲಾಕ್, ಅಶೋಕಪುರಂ, ವಿದ್ಯಾರಣ್ಯಪುರಂ ಭಾಗಶ: ಪ್ರದೇಶ, ವಿಶ್ವೇಶ್ವರನಗರ, ಜೆ.ಪಿ.ನಗರ, ಅರವಿಂದನಗರ, ಶ್ರೀರಾಂಪುರ) ಹಾಗೂ ಇತ್ಯಾದಿ ಪ್ರದೇಶಗಳಾಗಿವೆ.